-ಕೆ.ಎನ್.ಲಾವಣ್ಯ ಪ್ರಭಾ
ಹನಿಗವಿತೆಗಳು
- ಮಾತುಗಳು ಅರ್ಥಹೀನ
ಎಂದೆನಿಸುವುದು
ಎದುರಿಗಿದ್ದವರನ್ನು
ಅರಿಯದಿದ್ದಾಗಲಷ್ಟೇ
ಮಾತುಗಳ ಹಂಗು
ಎದೆಯಲ್ಲಿರುವವರಿಗೆ
ಯಾಕೆ ಬೇಕು ಹೇಳಿ? - ನೋಡುವ ನೋಟ
ದೃಷ್ಟಿಹೀನ ಎನಿಸುವುದು
ಹೊರಗಣ್ಣಿಂದ
ನೋಡುವಾಗಲಷ್ಟೇ
ಒಳಗಣ್ಣಿನ ವಿಷಯ ಹಾಗಲ್ಲ
ನೋಡಲು ಕಣ್ರೆಪ್ಪೆ
ತೆರೆದೇ ಇರಬೇಕಾಗಿಲ್ಲ - ಕೆಲವೊಮ್ಮೆ ಸತ್ಯವೂ
ಸುಳ್ಳಾಗಿಯೇ
ಕಾಣುವುದು
ಮನದ ಭ್ರಮೆಯ ಧೂಳು
ಝಾಡಿಸಿ
ತೆಗೆಯದಿದ್ದಾಗಲಷ್ಟೇ
ನಂಬಿಕೆಯ ಕನ್ನಡಿ
ಶುಭ್ರವಿರಿಸಿದರೆ ಸಾಕು
ಸತ್ಯ ಸಂತೈಸಬಲ್ಲದು ನಿನ್ನ - ಸಂದೇಹ ಸಂಶಯ
ಅನುಮಾನ
ಯಾವುದೇ ಎದ್ದರೂ
ಪ್ರೇಮದಲ್ಲಿ
ಅದು ಸುನಾಮಿಯೇ
ಕೊಚ್ಚಿ ಹಾಕಿ
ಕೊನೆಗಾಣಿಸುವುದು
ಪ್ರೇಮಿಗಳಿಬ್ಬರನ್ನೂ
ಒಂದೇ ಒಂದು ಹನಿ ವಿಶ್ವಾಸ
ನಂಬಿಕೆ ಕಾಳಜಿ ಮೂಡಿದರೆ
ಪ್ರೇಮದ ಕಡಲು
ಪೊರೆಯುತ್ತದೆ
ಮುತ್ತು ರತ್ನ ಪಚ್ಚೆ ಹವಳ
ಮೀನ ರಾಶಿ
ಸಂಸಾರದೊಡಲನ್ನೇ - ಬೆಳಕು ಭ್ರಮೆ ಕತ್ತಲೆ ಸತ್ಯ
ಎಂದು ಕನಲುವವರ
ಮುಂದೆ
ಸಾಲು ದೀಪ ಹಚ್ಚಿದರೇನು?
ಬೆಳಕು ಕತ್ತಲು ಪರಸ್ಪರ
ಸಂಗಾತಿಯಾಗಿಯೇ
ಸಾಗುವ
ಎದೆ ಬೆನ್ನು ಜೊತೆಯಾದ
ದೇಹ ನಿಮ್ಮದಲ್ಲವೇನು?






0 Comments