ನಾನೂ ಒಂದು ಎಚ್ ಎಂ ಟಿ ವಾಚ್ ಖರೀದಿಸಿದೆ

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಬಾಳೆಂಬ ಪಥದಲ್ಲಿ ಬದುಕಿಗೆ ಆಸರೆಯಾಗಿ ಅವಿತಿರುವ ಆಸೆಗಳ, ಕಂಡ ಕನಸುಗಳ ಸಾಕಾರಗೊಳಿಸಿಕೊಳ್ಳುವ ಹಂಬಲ ಹೊತ್ತು ಸೇರಿಕೊಂಡ ಜೀವನಕ್ಕೆ ಆಧಾರ ಸ್ಥಂಭವಾದ ಗಳಿಕೆಯ ದಾರಿ ಮುಚ್ಚಿದಾಗ ಊಹಿಸಲೂ ಅಸಾಧ್ಯ ಅವರ ಪರಿಸ್ಥಿತಿ.

IMG_20160501_074501

ಹೌದು, ಎಚ್ ಎಂಟಿ ಕೈಗಡಿಯಾರ ಕಾಖಾ೯ನೆಯ ಹೋರಾಟದ ಬದುಕು 30-4-2016ರ ಶನಿವಾರ ಬೀಗ ಜಡಿಯಲಾಯಿತು. ತುಮಕೂರಿನಲ್ಲಿ 120 ಕಾಮಿ೯ಕರಿಗೆ ಬಿಡುಗಡೆ ಪತ್ರ ನೀಡಲಾಗಿದೆ.  ಅದೂ ಕಾಮಿ೯ಕರ ದಿನಾಚರಣೆಯ ಮುನ್ನಾ ದಿನ.  ಎಂಥ ವಿಪರ್ಯಾಸ!
“ಇಷ್ಟು ವಷ೯ ದುಡಿತಕ್ಕೆ ಸಣ್ಣ ಕೃತಜ್ಞತೆಯನ್ನೂ ಆಡಳಿತ ಮಂಡಳಿ ಹೇಳಲಿಲ್ಲ.  ನಾಳೆ ಕಾಮಿ೯ಕರ ದಿನಾಚರಣೆ.  ಅದರ ನಂತರ ಬಿಡುಗಡೆ ಮಾಡಬಹುದಾಗಿತ್ತು” ಎಂದು ಕೆಲವು ಕಾಮಿ೯ಕರ ಕಣ್ಣೀರು.  ಪೇಪರನಲ್ಲಿ ಓದಿ ತುಂಬಾ ದುಃಖವಾಯಿತು.

ಕಾರಣ ನಾನೂ ಒಂದು ಕೋ-ಆಪರೇಟೀವ್ ಬ್ಯಾಂಕಿನಲ್ಲಿ ಇಪ್ಪತ್ತೇಳು ವಷ೯ ದುಡಿದು ಸ್ವ ಇಚ್ಛೆಯಿಂದ ಹೊರಗೆ ಬಂದೆ.  ಆದರೆ ನಾವು ದುಡಿದ ಸಂಸ್ಥೆಯ ಮೇಲಿನ ಅಭಿಮಾನ ಯಾವತ್ತೂ ಮನದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ.  ಇಂದು ಈ ಬ್ಯಾಂಕೂ ಮುಚ್ಚುವ ಹಂತ ತಲುಪಿದೆ.  ಈ ನೋವು ಅತಿಯಾಗಿ ಕಾಡಿ ಮನಸ್ಸು ಕಾಮಿ೯ಕರ ಸ್ಥಿತಿ ಕಂಡು ಮರುಗುತ್ತಿದೆ.

ಪರಿಹಾರ ಕೊಡಬಹುದು.  ಆದರೆ ಸಂಸಾರ ಕಟ್ಟಿಕೊಂಡವರ ಬದುಕು ಹೇಗೆ?  ಹಿಡಿ ಗಂಟು ಎಷ್ಟು ದಿನ ಸಾಕು?  ಬೇರೆ ಕಡೆ ಕೆಲಸವೂ ಸಿಗೋದಿಲ್ಲ.  ನೋಡುಗರ ನೋಟ ಎದುರಿಸಬೇಕು.  ಕೇಳುವ ಮಾತಿಗೆ ಉತ್ತರ ಕೊಡುತ್ತ ಕಣ್ಣೀರು ಸುರಿಸುವ ಕಾಮಿ೯ಕರ ಮನಸ್ಸಿಗೆ ಸಾಂತ್ವನ ಹೇಳಲು ಈ ಸಣ್ಣ ಬರಹ.

1984ರಲ್ಲಿ  ಕೆಲಸಕ್ಕೆ ಸೇರಿದ ಹೊಸದರಲ್ಲಿ ರೂ.318/-ಕೊಟ್ಟು ನಾನೂ ಒಂದು ಎಚ್ ಎಂಟಿ ವಾಚ್ ಖರೀದಿಸಿದೆ.  ಇದುವರೆಗೂ ಸುಸ್ಥಿತಿಯಲ್ಲಿ ನಡೆಯುತ್ತಿದೆ.  ಕೀ ಕೊಟ್ಟರೆ ಸಾಕು.  ಇಂಥ ಒಳ್ಳೆಯ ವಾಚು ಉತ್ಪಾದನೆ ಮಾಡುತ್ತಿದ್ದ ಸಂಸ್ಥೆ ಮುಚ್ಚಬಾರದಿತ್ತು.

‍ಲೇಖಕರು Admin

May 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಿದನಂದ ಮಾಸನಕಟ್ಟಿ

    ಏನು ಮಾಡುವುದು ಮೇಡಂ? ಕಾಲ ಕಾಲಕ್ಕೆ ಕಾಲವನ್ನು ತಿಳಿಸುವ ಕಾಲವನ್ನೇ ನುಂಗುವ ಮಂದಿಗೆ ಎಚ್ಎಂಟಿ ಒಂದು ಕಂಪನಿ ಸಾಲದು……. ಅದನ್ನು ಬಳಸುವವರನ್ನು ಖತಂ ಮಾಡಬೇಕೆಂದಿದ್ದಾರೆ! ಇನ್ನು ಅದನ್ನು ತಯಾರಿಸುವವರು ಯಾವ ಲೆಕ್ಕ. ನಮ್ಮಪ್ಪನದು ಅದೇ ವಾಚು ಇನ್ನೂ ಜೀವಂತವಾಗಿದೆ ಅವರೊಂದಿಗೆ.

    ಪ್ರತಿಕ್ರಿಯೆ

Trackbacks/Pingbacks

  1. 318 ರೂ ಕೊಟ್ಟು ನಾನೂ ಒಂದು ಎಚ್ ಎಂಟಿ ವಾಚ್ ಖರೀದಿಸಿದೆ | | Sandhyadeepa…. - […] http://avadhimag.online/2016/05/02/318-%e0%b2%b0%e0%b3%82-%e0%b2%95%e0%b3%8a%e0%b2%9f%e0%b3%8d%e0%b2%9f… […]
  2. 318 ರೂ ಕೊಟ್ಟು ನಾನೂ ಒಂದು ಎಚ್ ಎಂಟಿ ವಾಚ್ ಖರೀದಿಸಿದೆ | – Sandhyadeepa…. - […] http://avadhimag.online/2016/05/02/318-%e0%b2%b0%e0%b3%82-%e0%b2%95%e0%b3%8a%e0%b2%9f%e0%b3%8d%e0%b2%9f… […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: