ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೂರು ತರಗಾಗು ಹಗುರಾಗು..

ಬುದ್ಧರಾಗುವುದೆಂದರೇ..

sphoorti gireesh                                                                                           ಸ್ಪೂರ್ತಿ ಗಿರೀಶ್

ಹುಲ್ಲಿನ ದಳ ತಲೆಯೆತ್ತಿ ಹೆಮ್ಮರವನು
ಕೇಳಿದೆ
‘ಮೇಲೆ ಮಳೆಯಿದೆಯೇ
ಎಲ್ಲಿಂದಲೋ ತೇಲಿಬಂತಲ್ಲ
rainಒಂದೇ ಹನಿ
ಏನದು
ನನಗೋ ದಾಹ
ನನ್ನ ರಕ್ತವನ್ನೇ ನಾನಿನ್ನೂ ಕುಡಿಯಲಾರೆ’.

ಎಲೆ ಎಲೆಯಾಗಿ
ಅಲೆ ಅಲೆಯಾಗಿ ಹೊಗೊಂಬೆಗಳಿಂದ
ಬೇರಿಗಿಳಿದ ಮರ
ಗರಿಕೆ ತುದಿಯ
ಕಿವಿಯಲ್ಲಿ ಉಸುರಿದೆ.

‘ಓಹ್!  ಅದೊಂದು ಜೋರು ಮಳೆ
ನೀನಂತೂ ಕೊಚ್ಚಿ ಹೋಗಿರುತ್ತಿದ್ದೆ
ನಾನೇ ಆಕಾಶವನ್ನು ಬಾಚಿ
ಕುಡಿದುಬಿಟ್ಟೆ
ದುರ್ಬಲರ ರಕ್ಷಣೆ
ದೇವರು ನನ್ನಂತವರಿಗಿತ್ತ ಹೊಣೆ
ಕರುಳು ಬಗೆದಿಡು
ಒಂದೊಂದೇ ಹನಿರಕ್ತ
ಇಂಗಿ ಹೋಗಲಿ
ಮತ್ತೆಂದೂ
ನಿನಗೆ ದಾಹವಾಗುವುದಿಲ್ಲ
ಬುದ್ಧರಾಗುವುದಷ್ಟು ಸುಲಭವಲ್ಲ
ಈ ಬಯಲು ಆಲಯ
ಸುಖದ ಸಾವಿನ ತೇರು
ತೂರು ತರಗಾಗು ಹಗುರಾಗು
ದಾಹವನ್ನು ತೊರೆದು ಅಮರವಾಗು.

‍ಲೇಖಕರು admin

2 August, 2016

4 Comments

  1. John suntikoppa

    ಚೆನ್ನಾಗಿದೆ ಮೇಡಂ .

  2. vasudev nadig

    amaratheya daahavuu heege..ollhe kavya chitra

  3. ಸ್ಪೂರ್ತಿ ಗಿರೀಶ್

    ಧನ್ಯವಾದಗಳು

  4. Anonymous

    bahala chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading