15th BIFFES: ದಿನ-5: ಇಷ್ಟ ಆದ್ರೆ ನೋಡಿ ಇಲ್ದೇ ಇದ್ರೆ ಎದ್ದು ಹೋಗಿ ಸಿಂಪಲ್

ಜಯರಾಮಾಚಾರಿ

**

ನೆನ್ನೆಗಿಂತ ಇಂದು ಜಾಸ್ತಿ ಜನ ಇದ್ದರು, ಕಳೆದ ನಾಲ್ಕು ದಿನವೂ ಬಂದವರು ಕೆಲವರು ಕಣ್ಮರೆಯಾಗಿ ಕಳೆದ ನಾಲ್ಕು ದಿನವೂ ಬರದಿದ್ದ ಹೊಸಬರು ಕಾಣಿಸಿದರು. ಶುಭಶಕುನ

ಶ್!

ಫೆಸ್ಚಿವಲ್ ನಲ್ಲಿ ನೀವು ಯಾವ ಸಿನಿಮಾವನ್ನಾದರೂ ಸೀಟಿದ್ದರೆ ಹೋಗಿ ನೋಡಬಹುದು, ಇಷ್ಟವಾಗದಿದ್ರೆ ಮುಲಾಜಿಲ್ಲದೇ ಎದ್ದು ಹೋಗಬಹುದು, ಸಿನಿಮಾ ಆರಂಭವಾಗಿ ಎಷ್ಟೊ ಹೊತ್ತಾದ ಮೇಲೆ ಕೂಡ ಬರಬಹುದು, ಆದರೆ ಪಕ್ಕದಲ್ಲಿ ಕೂತು ಸಿನಿಮಾ ಕನೆಕ್ಚ್ ಆಗದೆ ಹೋದಾಗ ಅರ್ಥವಾಗದೇ ಹೋದಾಗ ಇಷ್ಟವಾಗದೇ ಹೋದಾಗ ಕಿರಿಕಿರಿಯಾಗುವಷ್ಟು ಮಾತಾಡೋದು, ಫೋನಲ್ಲಿ ಜೋರಾಗಿ ವದರುವುದು, ಕಣ್ಣಿಗೆ ಲೈಟ್ ಹೊಳೆಯುವಷ್ಟು ಬೆಳಕಿಟ್ಟುಕೊಂಡು ಮೆಸೇಜ್ ಪೋಸ್ಟ್ ಮಾಡುತ್ತ ಇದ್ದುಬಿಡುವುದು ಸರಿಯಲ್ಲ.

ಇಷ್ಟ ಆದ್ರೆ ನೋಡಿ ಇಲ್ದೇ ಇದ್ರೆ ಎದ್ದು ಹೋಗಿ ಸಿಂಪಲ್.

ಎಷ್ಟೊ ಜನ ಬಂದು ಹತ್ ನಿಮಿಷಕ್ಕೆ ಎದ್ದು ಹೋಗ್ತಾರೆ ಕೊನೆ ಹತ್ ನಿಮಿಷ ಇದ್ದಾಗ ಎದ್ದು ಹೋಗ್ತಾರೆ ಗೌರವಯುತವಾಗಿ.

ಇವತ್ತು ಎರಡು ಶೋ ಅಲ್ಲಿ ಸಿನಿಮಾ ನೋಡಲು ಕೂತು ಹರಟೆ ಹೊಡೆಯುತ್ತ ಕೂತಿದ್ದು ಕಂಡುಬಂತು. ಒಂದು ಕಡೆಯಂತೂ ಮ್ಯಾನರ್ಸ್ ಇಲ್ವ ಅಂತ ಮಹಿಳೆಯೊಬ್ಬರು ಬೈದಾಗ ‘ಹೇ ಸುಮ್ನಿರಮ್ಮ’ ‘ಅನ್ನುವಷ್ಟು ದರ್ಪ ತೋರಿಸಿದರು.

ರಿಸರ್ವೇಶನ್ ಇಲ್ಲ ಇದೆ

ಸೀಟಿಗಾಗಿ ಕಿತ್ತಾಟ ಜಗ್ಗಾಟ ಅಲ್ಲಲ್ಲಿ ಕಂಡುಬಂತು. ರೆಸ್ಟ್ ರೂಮಿಗೆ ಹೋದಾಗ ಬ್ಯಾಗ್ ಇಟ್ಟು ಹೋಗೋದು, ಜೊತೆಯವರಿಗಾಗಿ ಎರಡು ನಿಮ್ಷ ಸೀಟು ಹಿಡಿದು ಕೂರುವುದು ಅದನ್ನು ನೋಡಿ ಸೀಟು ಸಿಗದವರು ತರಾಟೆ ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿತ್ತು

ಇವತ್ತು ನೋಡಿದ ಮೂರು ಚಿತ್ರಗಳಲ್ಲಿ ಎರಡು ಚಿತ್ರಗಳು ಇಷ್ಟವಾದವು, ಅದರಲ್ಲಿ ‘ಗುಡ್ ಬೈ ಜೂಲಿಯ’ ಎಲ್ಲರ ಮನಸೂರೆಗೊಂಡಿತು ಇಲ್ಲಿಯವರೆಗೂ ನೋಡಿದರಲ್ಲಿ ಬೆಸ್ಟ್ ಸಿನಿಮಾ ಕೂಡ.

‘ಎಂಪ್ಟಿ ನೆಟ್ಸ್ ೨೦೨೩’, ಇರಾನ್, ಬೆಹ್ರೂಜ್ ಕರಮಿಜಾದೇ ನಿರ್ದೇಶಿತ ಈ ಚಿತ್ರ “ಸಪ್ತಸಾಗರದಾಚೆ ಎಲ್ಲೋ” ತರದ ಚಿತ್ರ, ಪ್ರೀತಿ ಪ್ರೀತಿಸಿದವಳನ್ನು ಪಡೆದುಕೊಳ್ಳಲು ಪಡುವ ಒದ್ದಾಟ, ಶ್ರೀಮಂತ ಬಡತನದ ರೇಖೆಯಲ್ಲಿ ಬದುಕಿನ ಅನೀರೀಕ್ಷಿತ ತಿರುವುಗಳಿಂದ ಬೇರೆ ದಿಕ್ಕು ತೆಗೆದುಕೊಳ್ಳುವ ಚಿತ್ರ

ಗುಡ್ ಬೈ ಜೂಲಿಯ, ೨೦೨೩, ಸುಡಾನ್ ಅರೇಬಿಕ್

ಹಲವು ಪ್ರಶಸ್ತಿಗಳನ್ನು ಗೆದ್ದ ಚಿತ್ರ, ಸೂಡಾನ್ ದೇಶದಲ್ಲೆದ್ದ ಪ್ರಕ್ಷುಬ್ದತೆ, ದಕ್ಷಿಣ ಸೂಡಾನ್ ಗಾಗಿ ಸ್ವತಂತ್ರ ಕೂಗು, ಎಲೆಕ್ಷನ್ನು, ಚಳುವಳಿ ಮಧ್ಯದಲ್ಲಿ ದಕ್ಷಿಣ ಸೂಡಾನಿನ ಜೂಲಿಯಾಳ ಗಂಡಳನ್ನು ಅನೀರೀಕ್ಷಿತವಾಗಿ ಉತ್ತರ ಸೂಡಾನಿನ ಶ್ರೀಮಂತ ಮೋನಾ ಎಂಬ ಮಹಿಳೆಯೊಬ್ಬಳ ಗಂಡ ಸಾಯಿಸುತ್ತಾನೆ ಅದಕ್ಕೆ ಕಾರಣ ಹೆಂಡತಿ ಮತ್ತು ಪರಿಸ್ಥಿತಿ, ಪ್ರಾಯಶ್ಚಿತದಂತೆ ಮೋನಾ ಜೂಲಿಯಾಳಿಗೆ ಆಶ್ರಯ ನೀಡುತ್ತಾ ಅವಳ ಬದುಕಿಗೆ ನೆರವಾಗುತ್ತಾಳೆ.

ಆಮೇಲೆ ಏನಾಗುತ್ತದೆ? ಸತ್ಯ ಜೂಲಿಯಾಳಿಗೆ ಗೊತ್ತಾಗುತ್ತ? ಹಾಗೇ ಮುಚ್ಚಿಹೋಗುತ್ತಾ ಎನ್ನುವುದೇ ಸಿನಿಮಾ.

ಆಧುನಿಕ ದಂಪತಿಗಳ ದ್ವಂದ್ವ, ಲಿಂಗ ಸಮಾನತೆ, ಸ್ವಾತಂತ್ರ್ಯ, ಧರ್ಮ, ಪ್ರೀತಿ, ದೇಶದಲ್ಲಿನ ಆಂತರಿಕ ತಲ್ಲಣ ಮತ್ತು ಕ್ಷಮೆ ಎಲ್ಲ ವಿಷಯಗಳನ್ನು ಸ್ವಲ್ಪವೂ ಅವಸರಿಸದೇ ಗಾಢವಾಗಿ ಕಟ್ಟಿಕೊಡುವ ಚಿತ್ರ.

‍ಲೇಖಕರು avadhi

March 5, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: