15th BIFFES: ದಿನ-3: ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ..

ಜಯರಾಮಾಚಾರಿ

**

ಭಾನುವಾರವಾದ್ದರಿಂದ ಎಂದಿಗಿಂತ ಜಾಸ್ತಿ ಜನ, ಉದ್ದದ ಕ್ಯೂಗಳು, ಪರಿಚಯದ ಮುಖಗಳು, ಜೊತೆಗೆ ಕನ್ನಡದ ಎರಡು ಚಿತ್ರಗಳು ಜಗತ್ತೆಲ್ಲ ಸುತ್ತುಕೊಂಡು ಬಂದು ತವರುಮನೆಗೆ ಬಂದಿವೆ

ಒಂದು ರಿಶಭ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಇಂದ ಬಂದ ‘ಶಿವಮ್ಮ’ ಮತ್ತೊಂದು ರಕ್ಷಿತ್ ಶೆಟ್ಟಿ ಅವರ ಪರಮ್ವ ಇಂದ ಬಂದಿರುವ ‘ಮಿಥ್ಯ’.

ನೀವು ಕೂಡ ಬರಬಹುದು?

ನೀವು ಪಾಸ್ ತಗೊಂಡಿಲ್ಲ ಅಂದ್ರೆ ಪರ್ವಾಗಿಲ್ಲ ನಾಳೆ ಇಂದ ಡೇ ಪಾಸ್ / ದಿನದ ಪಾಸುಗಳು ಲಭ್ಯವಿದೆ, 200 ರೂಪಾಯಿಗಳು.

ಇದೇ ಮೊದಲ ಸಲ ಬರ್ತಿದ್ರೆ

  1. ನೋಡುವ ಚಿತ್ರದ ಸಿನಾಪ್ಸಿಸ್ ಓದಿ , ನೀವು ನೋಡುವಂತ ಚಿತ್ರವಾಗಿದ್ದಲ್ಲಿ ಬನ್ನಿ
  2. ಉದ್ದದ ಕ್ಯೂ ಅಲ್ಲಿ ನಿಂತು ಚಿತ್ರವನ್ನು ಬೈಬೇಡಿ, ಎಲ್ಲ ಸಿನಿಮಾಗಳು ಎಲ್ಲರಿಗೂ ಇಷ್ಟವಾಗಲ್ಲ
  3. ಕೆಲವು ಸಿನಿಮಾಗಳು ಇನ್ನಿಲ್ಲದ ಸಹನೆ ಬೇಡುತ್ತದೆ, ಡೊರಮೈನ್ ಸುರಿಯುವ ಚಿತ್ರಗಳನ್ನು ನೋಡಿ ನೋಡಿ ಅಭ್ಯಾಸವಾದವರಿಗೆ ಫಿಲ್ಮ್ ಫೆಸ್ಟಿವಲ್ ಸಿನಿಮಾಗಳು ನುಂಗಲಾರದ ತುತ್ತು
  4. ಕ್ಯೂ ಫಾಲೋ ಮಾಡಿ, ಹಳೇ ಗೆಳೆಯರು ಸಿಕ್ಕಿದ ಕೂಡಲೇ ಗ್ಯಾಪಲ್ಲಿ ಬಂದು ಸೇರ್ಕಬೇಡಿ
  5. ಸಿನಿಮಾ ಮಧ್ಯದಲ್ಲಿ ಎದ್ದು ಹೋಗಬೇಡಿ
  6. ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ.. ಹತ್ರ ರಾಮೇಶ್ವರಂಲೀ ದುಡ್ಡಿದ್ರೆ ತಿನ್ನಿ ಇಲ್ಲ ಪಕ್ಕದ ರೋಡಲ್ಲಿ ವೆಜ್ಜು ನಾನ್ ವೆಜ್ಜು ಎರಡು ಬಗೆಯ ಒಳ್ಳೆಯ ಹೋಟೆಲುಗಳಿವೆ
  7. ಸಂಜೆ ಆರರ ಮೇಲೆ ಸಿಗುವ ವೆಹಿಕಲ್ ಪಾಸ್ ತಗೊಂಡ್ರೆ ನಲವತ್ ರುಪಾಯಿ ಇಲ್ಲ ಮುಂಡಾಮೋಚ್ತು ನೂರು ರುಪಾಯಿ.

ಇವತ್ತು ನೋಡಿದ ಐದು ಚಿತ್ರಗಳಲ್ಲಿ ಎರಡು ಚಿತ್ರಗಳು ಮಿಸ್ ಮಾಡದೇ ನೋಡುವಂತವು

  1. ಟೆರಸ್ಟ್ರಿಯಲ್ ವರ್ಸಸ್

ಇರಾನ್ ಸಿನಿಮಾ, ಆಲಿ ಅಸಗಿರಿ ನಿರ್ದೇಶನ, 77 ನಿಮಿಷ

ಇರಾನ್ ನಲ್ಲಿನ ಪ್ರಸ್ತುತ ರಾಜಕೀಯ ಭ್ರಷ್ಟಾಚಾರ ಮತಾಂಧತೆ ಕರಪ್ಟಡ್ ಬ್ಯೂರೊಕ್ರಸಿ ವೈಯುಕ್ತಿಕ ಹಕ್ಕುಗಳ ಕೊಲೆ ಬಗ್ಗೆ ಆರೇಳು ಫ್ರೇಮುಗಳಲ್ಲಿ ಕಟ್ಟಿಕೊಡುವ ಚಿತ್ರ

ಪ್ರತಿ ಅಧ್ಯಾಯವೂ ಒಂದೇ ಫಿಕ್ಸಡ್ ಫ್ರೇಮಲ್ಲಿ, ಪಾತ್ರ ಮತ್ತು ಸಂಭಾಷಣೆ ಮೂಲಕ ಮೊನಚಾಗಿ ಪರಿಣಾಮಕಾರಿಯಾಗಿ ದಾಟಿಸುತ್ತದೆ.

ಮೊದಲ ಫ್ರೇಮಲ್ಲಿ ಕಂಡ ಸಿಟಿ ಕೊನೆ ಫ್ರೇಮಲ್ಲಿ ಬೀಳುವ ದೃಶ್ಯ ಇಡೀ ಸಿನಿಮಾವನ್ನ ಮತ್ತೊಂದು ಹಂತದಲ್ಲಿ ದಾಟಿಸುತ್ತದೆ.

ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ

  1. ಯಾನಿಕ್

ಫ್ರಾನ್ಸ್ , ಫ್ರೆಂಚ್ ಸಿನಿಮಾ, 67 ನಿಮಿಷ, ಕ್ವಿಂಟೆನ್ ಡ್ಯೂಪ್ಯೂಕ್ಸ್ ನಿರ್ದೇಶನ.

ಕುಕೋಲ್ಡ್ ಎಂಬ ಹೆಸರಿನ ನಾಟಕ ನಡೆಯುತ್ತಿರುತ್ತದೆ, ನೈಟ್ ವಾಚ್ ಮನ್ ಆದ ಯಾನಿಕ್ ನಾಟಕ ನೋಡುತ್ತಲೇ ಬೇಸತ್ತು, ನಿಮ್ಮ ನಾಟಕ ಯಾವ ರೀತಿಯಿಂದಲೂ ಚೆನ್ನಾಗಿಲ್ಲ ಎನ್ನುತ್ತಾನೆ, ಅವನನ್ನು ಥಿಯೇಟರಿಂದ ಹೊರಗೆ ಓಡಿಸುತ್ತಾರೆ, ಆತ ಹೊರಗೆ ಬಂದ ಕೂಡಲೇ ಆತನನ್ನು ಆಡಿಕೊಳ್ಳುವುದು ಅದಕ್ಕೆ ವೀಕ್ಷಕರು ಚಪ್ಪಾಳೆ ತಟ್ಟುವುದು ಕೇಳಿ ಮತ್ತೆ ಒಳಬಂದ ಯಾನಿಕ್ ಕೈಯಲ್ಲಿ ಗನ್ ಇರುತ್ತದೆ.

ಆನಂತರ ತಾನೇ ಒಂದು ನಾಟಕ ಬರೆದು ಅಲ್ಲಿರುವವರ ಕೈಯಲ್ಲಿ ನಾಟಕವಾಡಿಸುತ್ತಾನೆ ಮಧ್ಯದಲ್ಲಿ ಒಂದಷ್ಟು ಲಘು ಮತ್ತು ಗಾಢವಾದ ಮಾತುಗಳಿವೆ. ಯಾನಿಕ್ ಮಾಡಿದ ನಾಟಕವನ್ನು ಅವನನ್ನು ಓಡಿಸಿದ ನಾಟಕ ತಂಡ ಮತ್ತು ಅವನಿಂದ ಹೋಸ್ಟೇಜ್ ಆದ ಪ್ರೇಕ್ಷಕರು ಎಂಜಾಯ್ ಮಾಡುವುದು ನೋಡಿ ಯಾನಿಕ್ ಕಣ್ಣಲ್ಲಿ ಆನಂದಭಾಷ್ಪ

ಕೊನೆಯ ದೃಶ್ಯದಲ್ಲಿ ಟ್ವಿಸ್ಟ್ ಇದೆ ಎದೆ ಭಾರವಾಗುತ್ತದೆ

ಇದು ಕೂಡ ಖಂಡಿತ ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ

‍ಲೇಖಕರು avadhi

March 3, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: