ಅರಿವೆಯದೇಕೆ ಚಿಂತೆ ಅರಿವಿಲ್ಲದೆಡೆ ?

divakar

ನಾ ದಿವಾಕರ

ಅರಿವಿಲ್ಲದ ಅರಿವೆಯ ಛಾಯೆಯಲ್ಲಿ
ಅರಿತೋ ಅರಿಯದೆಯೋ ಒಡಲನಾವರಿಸುವ
ಅರಿವೆಗೊಂದು ಅಸ್ಮಿತೆ ;
ಬೇಕಲ್ಲವೇ ಮನುಕುಲದ
ಸ್ವಾಸ್ಥ್ಯ ರಕ್ಷಣೆಗೆ ; ಸಂಯಮ ಸಂವೇದನೆಯಿಲ್ಲದ
ಪುರುಷ ಸೂಕ್ತಿಗಳ ನಿಗ್ರಹಕ್ಕೆ
ಸ್ತ್ರೀಲಿಂಗವನಾವರಿಸುವ ಅರಿವೆಯೇ ಶ್ರೀರಕ್ಷೆ ;
ಕಳಚುತ್ತಲೇ ಇದೆ ಮೇಧಿನಿಯ
ಹೊದಿಕೆ ಕಳಚುತ್ತಲೇ ಇದ್ದಾರೆ
ಅತ್ತಿಗೆ ನಾದಿನಿಯರ ರವಿಕೆ ;
ತಣಿದಿಲ್ಲವೇ ತೃಷೆ ತಣಿಯದು
ಇದು ಪುರುಷಸೂಕ್ತ ಬಿತ್ತ ಬೀಜವಲ್ಲವೇ ?
ಸೈರಂಧ್ರಿ ಅನಸೂಯೆ ಸೀತೆ ಅಹಲ್ಯೆ
ಮೇನಕೆ ತಾರಾ ಮಂಡೋದರಿ ಅಂಬೆ ಅಂಬಾಲಿಕೆ ಓಹ್ !
ಸುಂದರ ಐತಿಹ್ಯದ ದಂತದ ಗೊಂಬೆಗಳು ;
ಸೂತ್ರ ಹಿಡಿದವರಾರೋ ಪಾತ್ರ
ಸೃಷ್ಟಿಸಿದವರಾರೋ ಅಕ್ಷಯವಾದದ್ದಂತೂ ಸತ್ಯ ಅಬಲೆಯ ಆಕ್ರಂದನ ;
121
ದಶಾನನ ದುಷ್ಯಾಸನ ಕೀಚಕ ಭೀಮಾದಿಗಳು ವಿಶ್ವಾಮಿತ್ರ
ದೂರ್ವಾಸ ಮುನಿವರೇಂದ್ರರ
ತಪೋಬಲ ಅದ್ಭುತ ;
ಅಪರಾಧ ಕಾಣಲೇ ಇಲ್ಲ ದೌರ್ಜನ್ಯದ ಸಂತತಿ
ಫೂಲನ್ ಭಾವರಿ ಮನೊರಮೆಯರ ನಿರ್ಭಯ
ಇತಿಹಾಸದ ಒಡಲಲ್ಲಿ ಕೆಂಡದಂತೆ
ನಿಗಿನಿಗಿ ಉರಿಯುತ್ತಿದೆ ಮನದಾಳದ ಬೇಗುದಿ ; ಹಸುಳೆಯೋ ವೃದ್ಧೆಯೋ
ದಾರಿದ್ರ್ಯವೋ ಸಿರಿಯೋ ಸಂಪ್ರದಾಯವೋ
ಆಧುನಿಕತೆಯೋ ದೌರ್ಜನ್ಯದ ಸುಪ್ತ ವಾಹಿನಿಗೆ
ಅಣೆಕಟ್ಟು ನಿರ್ಮಿಸಲಾಗಲೇ ಇಲ್ಲ ;
ಅತ್ಯಾಚಾರ ನಿತ್ಯಾಚಾರವಾದಾಗ
ಆಂತರ್ಯದ ಸಂವೇದನೆ ಸೊರಗುತ್ತದೆ !
ಬಿಕರಿಯಾಗುವ ಸರಕುಗಳಿಗಾರು ಸರದಾರರು?
ಮಾರುಕಟ್ಟೆಯ ಅಬ್ಬರದಲ್ಲಿ
ಅಬಲೆಯ ಆಕ್ರಂದನಕ್ಕೆಲ್ಲಿಯ ಮಾನ್ಯತೆ ?
ಪುರುಷತ್ವ ಪುಂಸತ್ವಗಳ ಅಂಬಾರಿಯೊಳಗೆ
ದೊರೆ ವಿರಾಜಮಾನ ;
ನಿರ್ಭಯಗಳೆನಿತೋ
ಶರ್ಮಿಳೆಯರೆನಿತೋ ಸಾಗುತ್ತಲೇ
ಇವೆ ಜೀವಚ್ಚವಗಳು
ನೆಲ ಹಾಸುಗಳ ಅಂಬಾರಿಯಂತೆ ;
ಮೂಕವಾಗಿದೆ
ಸಮಾಜ ಮೌನವಾಗಿದೆ ಪ್ರಜ್ಞೆ ;
ಅರಿವೆಯದೇಕೆ ಚಿಂತೆ ಅರಿವಿಲ್ಲದೆಡೆ ?

‍ಲೇಖಕರು G

September 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: