ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಲೆಮಾದಿಗರ ಹೋಟೆಲ್..

vikas r mourya

 

ವಿಕಾಸ್ ಆರ್ ಮೌರ್ಯ 


ರಾಜಹಂಸ, ಜೀವನ ಪ್ರಕಾಶನ

ರಾಜಹಂಸ, ಜೀವನ ಪ್ರಕಾಶನ

ಜೀವನ್ ಪ್ರಕಾಶನದ ರಾಜ್ಯಮಟ್ಟದ

ಯುಗಾದಿ ಕಾವ್ಯ ಸ್ಪರ್ಧೆ-2016ರ ಬಹುಮಾನಿತ ಕವಿತೆ


 

 

ಘಮ ಘಮ ರಾಗಿ ರೊಟ್ಟಿ

ಉಚ್ಚೆಳ್ ಚಟ್ನಿ

ಜೊತೆಗೆ ಈರುಳಿ ತುಂಡು

designಒಂದು ಮೆಣಸಿನ ಕಾಯಿ

ಗೌರ್ಮೆಂಟ್ ಎಮ್ಮೆಯ ಹಾಲು

ಪ್ರೀತಿ ಬಿಟ್ಟು ಬೇರೇನೂ ಬೆರೆಸಿಲ್ಲ

ಖಡಕ್ ಛಹಾ ಕಾಫಿ ಸವಿದು

ರುಚಿ ನೋಡುವಿರಂತೆ ಒಳ ಬನ್ನಿ

ಇದು ಹೊಲೆಮಾದಿಗರ ಹೋಟೆಲ್

 

ಅಮ್ಮನ ನೆನೆಸುವ ಮಮತೆ

ಅಪ್ಪನ ನೆನೆಸುವ ಸೇವೆ

ಅಣ್ಣ ತಮ್ಮನ ನೆನೆಸುವ ನಗೆ

ಅಕ್ಕ ತಂಗಿಯರ ನೆನೆಸುವ ಪ್ರೀತಿ

ಬಂಧುತ್ವ ಬಿಟ್ಟು ಮುನಿಸಿನ ಮಾತಿಲ್ಲ

ಹಕ್ಕನ್ನು ಭಿಕ್ಷೆಯೆಂದರೆ ತೆಪ್ಪಗಿರುವುದಿಲ್ಲ

ಅನ್ನ ನೀಡುವ ನಮ್ಮ ಹಕ್ಕಿಗೆ

ಉಂಡು ಬಂಧುತ್ವ ಬೆಸೆಯ ಬನ್ನಿ

ಇದು ಹೊಲೆಮಾದಿಗರ ಹೋಟೆಲ್

 

ಮನು ಯಾಜ್ಷವಲ್ಕ್ಯರ ಮೀರಿ

ಕಟ್ಟಿದ ಕನಸು

ಶಾಸ್ತ್ರ ಸ್ಮøತಿಗಳ ಮುರಿದು ಬೆಂಕಿಯಿಟ್ಟು

ಉರಿಸಿದ ಒಲೆ

ಸ್ವಾಭಿಮಾನವ ಕುದಿಸಿ ಇಂಗಿಸಿದ ಅನ್ನ

ಘನತೆ ಘನೀಭವಿಸಿದ ಮುದ್ದೆ

ಬುದ್ಧ ಮೈತ್ರಿಯ ಮೈಮರೆತು

ಬೆರೆಸಿದ ಸಾರು

ನಿಮ್ಮ ಹೊಟ್ಟೆ ತುಂಬುವವರೆಗೂ

ತಣ್ಣಗಾಗದ ಈ ಎದೆ

ತಣ್ಣಗಾಗುವಿರಂತೆ ಒಮ್ಮೆ ಒಳ ಬನ್ನಿ

ಇದು ಹೊಲೆಮಾದಿಗರ ಹೋಟೆಲ್

 

ಸಸ್ಯ ಮಾಂಸವೆಂಬ ಭೇದವಿಲ್ಲ

ಬಾಹ್ಮಣರೇ ಶ್ರೇಷ್ಟರೆಂಬ ಭ್ರಮೆಯಿಲ್ಲ

ಮೇಲು ಕೀಳೆಂಬ ಮಾತಿಲ್ಲ

ಬೆವರ ಸುರಿಸುವವರೇ ಶ್ರೇಷ್ಟರು

ಗುಣದೊಳಧಮರೇ ಕನಿಷ್ಟರು

ತಾರತಮ್ಯ ಬಿತ್ತುವ ಧರ್ಮವ ಧಿಕ್ಕರಿಸಿ

ಮನುಷ್ಯರಾಗಲು ಒಳ ಬನ್ನಿ

ಒಳ ಬಂದಿರಾ, ತಿಂದಿರಾ

ಹೃದಯದಿಂದೊಮ್ಮೆ ನೋಡಿ

ಈಗಿದು ಮನುಜರ ಹೋಟೆಲ್

‍ಲೇಖಕರು admin

30 March, 2016

4 Comments

  1. Vihi wadgi

    Entha manavateya saaruva kavite manujara hotel ellavu ellarigu

  2. Bidaloti Ranganath

    ಮನುಷ್ಯತ್ವವನ್ನು ಉಸಿರಾಡುವ ಪದ್ಯ

  3. Anonymous

    Super sir

  4. Sugatha

    Manavateyannu usiragisikonda kavana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading