ಡಾ ನಾ ಮೊಗಸಾಲೆ ಅವರ ಕವನ ಸಂಕಲನ ‘ಹೇ…ರಾಮ್!’
ಈ ಕೃತಿಯ ಕುರಿತು ಉದಯಕುಮಾರ ಹಬ್ಬು ಅವರ ಒಂದು ಬರಹ ಇಲ್ಲಿದೆ.
-ಉದಯಕುಮಾರ ಹಬ್ಬು
ಹೇ…ರಾಮ್!ಕಾಂತಾವರದ ಸಂತ ಡಾ ನಾ ಮೊಗಸಾಲೆಯವರ ನವನವೋಷ್ಮೇಶಶಾಲಿನಿಯಾದ ನೂತನ ಕವಿತಾ ಸಂಕಲನ “ಹೇ ರಾಮ್” ” ಅನ್ನು ಮೊಗಸಾಲೆ ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ಕಳಿಸಿದ್ದಾರೆ.
ಕವಿ ಖಲೀಲ್ ಗಿಬ್ರಾನ್ ನ ಪ್ರವಾದಿಯಂತೆ ಪ್ರೀತಿ, ಸಹನೆ, ದಾಂಪತ್ಯ, ಗೆಳೆಯರು, ಪ್ರಕೃತಿಯೊಡನೆ ಒಡನಾಟ, ಮನುಷ್ಯನ ಸಂಬಂಧಗಳು, ಸುತ್ತಲಿನ ಪ್ರಪಂಚದ ಮತ್ತು ಪ್ರಕೃತಿಯು ಜೀವನದ ಮೌಲಗಳ ಪ್ರತೀಕಳಾಗಿ ಬರುವುದು, ಈ ಜಗತ್ತಿನ ನಿಗೂಢ ರಹಸ್ಯಗಳಾದ ದೇವರ ಅಸ್ತಿತ್ವ ನಾಸ್ತಿತ್ವದ ಕುರಿತ ದ್ವಂದ್ವ, ಇವೆಲ್ಲವುಗಳ ಅವರ ಧ್ಯಾನಸ್ಥ ಅನುಭಬದ ಕಾಣ್ಕೆಯಲ್ಲಿ ಮಿಂದೆದ್ದು ಇಹ ಪರದ ಕವಿತೆಗಳು, ಇಹದ ಮೂಲಕವೆ ಪರದ ಸಾಕ್ಷಾತ್ಕಾರಗೊಂಡ ಅನನ್ಯ ಕವಿತೆಗಳು ಅವರು ಬಳಸುವ ಚಿಪರಿಚಿತ ಪ್ರಾಕೃತಿಕ ಉಪಮೆಗಳಿಂದ ಮುದ ನೀಡುತ್ತವೆ. ಅವರು ಪ್ರವಾದಿಯಂತೆ ತಾ ಸಾಕ್ಷಾತ್ಕರಿಸಿಕೊಂಡ ಬದುಕಿನ ಸಂಭ್ರಮದ ಅನುಭಾವಿ ಕ್ಷಣಗಳ ಒಳನೋಟಗಳಿಂದ ಕವಿತೆಗಳನ್ನು ಶ್ರೀಮಂತಗೊಳಿಸಿದ್ದಾರೆ. ಇಲ್ಲಿ ನಾವು ಕಾಣುವ ಉಪಮೆಗಳಾಗಿ ಬಳಸಿರುವ ಸಮುದ್ರ, ಮರ, ಹೂವು, ಗಿಡ, ಬಳ್ಳಿ, ವಸಂತ ಋತು,ಬೆಟ್ಟಗಳ ಹಸಿರಿನ ಸಿರಿ, ನದಿ ಇವುಗಳೇ ಕವಿಯ ಸುಪ್ತ ಮನಸ್ಸಿನ ಬದುಕಿನ ಚಿಂತನೆಗಳಾಗಿ, ಬದುಕಿನಲ್ಲಿ ಮಾಗಿದ ಕವಿಯ ಅನುಭಾವದ ಕ್ಷಣಗಳಾಗಿ ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಕವಿತೆಗಳ ಅರ್ಥ ಹುಡುಕುತ್ತ ಹೋಗುವುದಕ್ಕಿಂತ ಅದು ನೀಡುವ ಸೋದಾಹರಣವಾಗಿ ಉಪಮೆಗಳ ಮೂಲಕ ನೀಡಿದ ಅನುಭಾವಿ ಕ್ಷಣಗಳನ್ನು ಧ್ಯಾನಸ್ಥರಾಗಿ ಅನುಭವಿಸುವುದರಲ್ಲೆ ಅದರ ಸಾರ್ಥಕತೆ ಇದೆ. ಇಡೀ ಕವಿತಾ ಸಂಕಲನ ಅಂತಹ ಅನಮ್ಯ ಅನನ್ಯ ಉಪಮೆಗಳಿಂದ ಇಡಿಕಿರಿದಿದೆ.
ಕವಿತಾ ಸಂಕಲನವನ್ನು ಮೂರು ನಾಲ್ಕು ವಿಭಾಗಗಳನ್ನಾಗಿ ವಿಭಜಿಸಿದ್ದಾರೆ. ಅವುಗಳಲ್ಲಿ ದಲಿತ ಕವಿತೆಗಳು, ಯುಗಾದಿ ಕವಿತೆಗಳು, ದಾಂಪತ್ಯ ಕವಿತೆಗಳು, ತಮ್ಮ ೮೦ ರ ಅನುಭಾವಿ ಕವಿತೆಗಳು
ನವೋದಯ, ನವ್ಯ, ಬಂಡಾಯ, ದಲಿತ ಚಳವಳಿಗಳು ಎಂಬ ವರ್ಗೀಕರಣದಲ್ಲಿ ನನಗೆ ನಂಬಿಕೆ ಇಲ್ಲ. ಯಾವುದೆ ವರ್ಗವಾಗಲಿ ಉತ್ತಮ ಗುಣಮಟ್ಟದ ಕವಿತೆಗಳೆಂದು ಗುರುತಿಸಿದರೆ ಸಾಕು. ಮೊಗಸಾಲೆ ಯಾವ ಕಾವ್ಯ ಚಳವಳಿಯೊಂದಿಗೂ ಗುರುತಿಸಲ್ಪಡಲು ಸಾಧ್ಯವಾಗದೆ ಅವರದೆ ರೆಕ್ಕೆ ಅವರದೆ ಆಕಾಶದಲ್ಲಿ ಹಾರಾಡುವ ಹಕ್ಕಿಯಂತೆ
ಈ ಸಂಕಲನವು ಜೀವನಾಸಕ್ತಿಯಿಂದ ಕೂಡಿದ ಲವಲವಿಕೆಯ. ಕವಿತೆಗಳು ಇದ್ದು ಎಲ್ಲೂ ಸಿನಿಕತನವಿಲ್ಲದೆ ಧನಾತ್ಮಕ ನಿಲುವುಗಳನ್ನು ಹೊಂದಿದ್ದ ಕವಿತೆಗಳು
ಮೊಗಸಾಲೆ ತಮ್ಮ ಕಾವ್ಯಲೋಕಕ್ಕೆ ಪ್ರವಾಸಗೈಯುವ ಓದುಗರೆಂಬ ಪ್ರವಾಸಿಗರಿಗೆ ಪ್ರೀತಿ ಎಂಬ placard ಅನ್ನು ಎತ್ತಿ ಹಿಡಿದು ಮಾರ್ಗದರ್ಶಿಯಾಗುತ್ತಾರೆ
ಇವರ ಕವಿತೆಗಳನ್ನು ಓದುವಾಗ William Blake ಎಂಬ ಇಂಗ್ಲಿಷ್ ಕವಿಯ Auguries of Innocence ಕವಿತೆ ನೆನಪಾಗುತ್ತದೆ
ಆ ಕವಿತೆಯ ಮೊದಲ ಸಾಲುಗಳು ಹೀಗಿವೆ:.
To see a world in a grain of sand
And Heaven in a wild flower
Hold Infinity in the palm of your hand
And Infinity in an hour
ಈ ಸಾಲುಗಳು ಪ್ರಕೃತಿಯಲ್ಲಿನ ಅತ್ಯಂತ ಚಿಕ್ಕ ವಿಷಯಗಳಲ್ಲೂ (ಮರಳು ಕಣ) ಇಡೀ ಬ್ರಹ್ಮಾಂಡದ ಸೌಂದರ್ಯ ಮತ್ತು ಅನಂತತೆಯನ್ನು ಕಾಣಬಹುದು ಎಂಬುದನ್ನು ಸೂಚಿಸುತ್ತದೆ. ಸಮಯ ಮತ್ತು ಜಾಗದ ದೃಷ್ಟಿಕೋನವನ್ನು ಬದಲಾಯಿಸಿದರೆ, ಒಂದು ಗಂಟೆಯಲ್ಲೂ ಅನಂತತೆಯನ್ನು ಅನುಭವಿಸಬಹುದು ಎಂಬ ಭಾವನೆ ಇಲ್ಲಿದೆ.
To see a World in a Grain of Sand
And Heaven in a wild flower
And Hold Infinity in the palm of your hand
And Eternity in an hour
And Ribbinrednreast in a cage
Puts all the Heaven in a rage
And a dove house filled with doves and pigeons
Shudders Hell through all the regions
ಈ ಕವಿತೆಯು ಪ್ರಾಪಂಚಿಕ ನೋವು ಸಾವನ್ನು, ಮತ್ತು ಪ್ರಕೃತಿಯಲ್ಲಿರುವ ಸೂಕ್ಷ್ಮ ವಿಷಯಗಳ ಕುರಿತಾದ ದರ್ಶನವನ್ನು ನೀಡುತ್ತದೆ
1 . ಸೂಕ್ಷಮದಲ್ಲಿ ಅಗಾಧತೆಯನ್ನು ಕಾಣುವುದು( Macrocosm in Microcosm)
To see a world in a grain of sand ಎಂಬ ಸಾಲು ಪ್ರಕೃತಿಯ ಅತ್ಯಂತ ಸಣ್ಣ ವಸ್ತುವಾದ ಮರಳಿನ ಕಣದಲ್ಲೂ ಇಡೀ ಜಗತ್ತಿನ ರಚನೆ, ಇತಿಹಾಸ ಮತ್ತು ನಿಯಮಗಳನ್ನು ಕಾಣಬಹುದು. ಅಂದರೆ ಪ್ರಕೃತಿಯ ಕಣ ಕಣದಲ್ಲೂ ಭಗವಂತನ ಅಥವಾ ಪ್ರಕೃತಿಯ ಅಸ್ತಿತ್ವವಿದೆ
ನಮ್ಮ ದೃಷ್ಟಿ ವಿಶಾಲವಾಗಿದ್ದರೆ ಯಾವುದೂ ಚಿಕ್ಕದಲ್ಲ ಎಂಬುದನ್ನು ಇಲ್ಲಿ ಕವಿ ಪ್ರತಿಪಾದಿಸುತ್ತಾರೆ
2. ಪ್ರಕೃತಿಯಲ್ಲಿನ ದೈವತ್ವ
A Heaven in a wild flower
ಕಾಡಿನ ಹೂವು ಮನುಷ್ಯ ನಿರ್ಮಿತ. ತೋಟದ ಹೂವಿಗಿಂತ ಹೆಚ್ಚು ಸ್ವಭಾವತಃ ಸೌಂದರ್ಯವನ್ನು ಹೊಂದಿರುತ್ತದೆ. ಅಂತಹ ಹೂವಿನಲ್ಲಿ ಸ್ವರ್ಗದ ಸೊಬಗು ಮತ್ತು ಶುದ್ಧತೆಯನ್ನು ಕಾಣಬಹುದು ಎನ್ನುವ ಮೂಲಕ ಕವಿ ದೈವಿಕ ಶಕ್ತಿಯ ಮನುಷ್ಯ ನಿರ್ಮಿತ ಮಂದಿರಗಳಿಗಿಂತ ಪ್ರಕೃತಿಯಲ್ಲಿ ಹೆಚ್ಚಾಗಿ ಅಡಗಿದೆ ಎಂಬುದನ್ನು ಕವಿ ಸೂಚಿಸುತ್ತಾರೆ.
3. ಮನುಷ್ಯನ ಕೈಯಲ್ಲಿ ಅನಂತತೆ
Hold the Infinity in the palm of your hand
ನಮ್ಮ ಕೈಯಲ್ಲಿನ ರೇಖೆಗೆ ಅಥವಾ ನಮ್ಮ ಸಣ್ಣ ಜೀವನವೇ ಅನಂತವಾದ ಬ್ರಹ್ಮಾಂಡದ ಒಂದು ಭಾಗ. ಮನುಷ್ಯ ತನ್ನ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಂಡರೆ ಈ ವಿಶಾಲವಾದ ಬ್ರಹ್ಮಾಂಡದ ರಹಸ್ಯಗಳನ್ನು ತನ್ನ ಅಂಗೈಯಲ್ಲೇ(ಪರಮ ಅರಿವಿನ ಮೂಲಕ) ಇಟ್ಟುಕೊಳ್ಖಬಹುದು.
4. ಸಮಯದ ಸಾಪೇಕ್ಷತೆ.
And Eternity in an hour
ಸಮಯ ಗಡಿಯಾರದ ಮುಳ್ಳುಗಳು ಮಾತ್ರ ಸಮಯವಲ್ಲ. ಒಂದು ಗಂಟೆಯ ಆಳವಾದ ಅನುಭವ, ಪ್ರೀತಿ, ಅಥವಾ ಧ್ಯಾನದಲ್ಲಿ ನಾವು ಅನಂತವಾದ ಕಾಲದ ಅನುಭವವನ್ನು ಪಡೆಯಬಹುದು. ಅಂದರೆ ಗುಣಾತ್ಮಕವಾಗಿ ಬದುಕಿದ ಒಂದು ಕ್ಷಣವೂ ಅನಂತ ಕಾಲಕ್ಕೆ ಸಮನಾದುದು
ಮನುಷ್ಯ ಬಾಹ್ಯ ಪ್ರಪಂಚದ ವಸ್ತುಗಳಲ್ಲಿ ತನ್ನನ್ನು ಕಳೆದುಕೊಳ್ಳದೆ ಪ್ರತಿಯೊಂದು ಅಣುವಿನಲ್ಲೂ ಅಡಗಿರುವ ಸತ್ಯವನ್ನು ಅರಿತಿದ್ದರೆ ಅವನು ಪ್ರಕೃತಿಯೊಂದಿಗೆ ಒಂದಾಗುತ್ತಾನೆ. ಇದು ಪ್ರಪಂಚದ ಅಸಮಾನತೆ, ಹಿಂಸೆ ಮತ್ತು ಅಜ್ಞಾನವನ್ನು ಮೀರಿ ಸತ್ಯವನ್ನೂ ಪ್ರೀತಿಯನ್ನೂ ಕಾಣುವ ಮಾರ್ಗವಾಗಿದೆ
ಅಸ್ತಿತ್ವದ ಏಕತೆ
ಮರಳು ಕಣ, ಹೂವು, ಮನುಷ್ಯ ಅಥವಾ ಸಮಯ -ಇವೆಲ್ಲ ಒಂದೇ ದೈವಿಕ ಶಕ್ತಿಯು, ಬೇರೆ ಬೇರೆ ಅನುಭವಗಳು, ಉದಾಹರಣೆಗೆ ನಾವು ಮರಳು ಕಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಇಡೀ ಬ್ರಹ್ಮಾಂಡದ ರಚನೆಯ ತತ್ವಗಳನ್ನು ಕಾಣಬಹುದು. ಅಂದರೆ ಸಣ್ಣದರಲ್ಲಿ ದೊಡ್ಡದನ್ನು ನೋಡುವ ಶಕ್ತಿಯನ್ನು ನೀಡುವುದೇ ಜ್ಞಾನ.
ದಾರ್ಶನಿಕ ದೃಷ್ಟಿ (Visionary Insights)
ಸಾಮಾನ್ಯವಾಗಿ ನಾವು ಪ್ರಪಂಚವನ್ನು ಕಣ್ಣಿನಿಂದ ನೋಡುತ್ತೇವೆ. ಆದರೆ ಕವಿ ಆತ್ಮದ ಕಣ್ಣಿನಿಂದ ನೋಡಲು ಪ್ರೇರೇಪಿಸುತ್ತಾರೆ
* ನಾವು ಹೊರಗಿನ, ಭೌತಿಕ ಪ್ರಪಂಚವನ್ನು ಮಾತ್ರ ನೋಡುತ್ತೇವೆ. ನಮಗೆ ಮರಗಳು ಕೇವಲ ಮರವಾಗಿ, ಹೂವು ಕೇವಲ ಹೂವಾಗಿ ಕಾಣುತ್ತದೆ.
* ಆದರೆ ನಮ್ಮಾತ್ಮದ ಅಂತರಂಗದ ದೃಷ್ಟಿ ಜಾಗ್ರತವಾದರೆ ಮರಳಿನ ಕಣದಲ್ಲಿ ಪ್ರಕೃತಿಯ ಇತಿಹಾಸವೂ, ಹೂವಿನಲ್ಲಿ ದೈವಿಕ ಸೌಂದರ್ಯ ಗೋಚರವಾಗುತ್ತದೆ
* ಸಮಯದ ಹೊಸ ಮೌಲ್ಯ
* A new definition of time
* Eternity in an hour
*ಎಂಬ ಸಾಲು ಅತ್ಯಂತ ಪ್ರಮುಖವಾಗಿದೆ. ಇದು ಗಡಿಯಾರದ ಸಮಯವಲ್ಲ. ಇದು ಅನುಭವದ ಸಮಯ.
ಕವಿಯ ಪ್ರಕಾರ ಮನುಷ್ಯನು ಒಂದು ಗಂಟೆಯ ಕಾಲ ಸಂಪೂರ್ಣ ಎಚ್ಚರದಿಂದ, ಪ್ರೀತಿಯಿಂದ ಅಥವಾ ಧ್ಯಾನಸ್ಥ ಸ್ಥಿತಿಯಲ್ಲಿ ಇದ್ದರೂ ಈ ಒಂದು ಗಂಟೆಯಲ್ಲಿ ಅತನು ಜೀವನದ ಪರಮಸರ್ಥವನ್ನು ಸಾಧಿಸಬಹುದು. ಅಂದರೆ ಬದುಕಿನ ಮೌಲ್ಯವು ನಾವು ಎಷ್ಟು ವರ್ಷ ಬದುಕಿದೆವು ಎಂಬುದರಲ್ಲಿಲ್ಲ. ಬದಲಿಗೆ ನಾವು ಎಷ್ಟು ಆಳವಾಗಿ ಅನುಭವಿಸಿದೆವು ಎಂಬುದರಲ್ಲಿದೆ
ಮೊಗಸಾಲೆ ಕವಿತೆಗಳಿಗೆ ಮೇಲೆ ಹೇಳಿದ ಎಲ್ಲವನ್ನೂ ಅನ್ವಯಿಸಬಹುದಾಗಿದೆ – ಉದಾಹರಣೆಗೆ
ದೊಡ್ಡದು
ಸಮುದ್ರಕ್ಕಿಂತ ದೊಡ್ಡದು
ಒಂದು ಪುಟ್ಟ ಕವಿತೆ
ಸಮುದ್ರದಲ್ಲಿ ಇರುವುದನ್ನು ಇಲ್ಲದಿರುವುದನ್ನು
ತನ್ನಲ್ಲಿ ಆಹ್ವಾನಿಸಿಕೊಂಡು
ಆ ಮರ ಭೂಮಿಗಿಂತ ದೊಡ್ಡದು
ತನ್ನ ಮಿತಿಯಲ್ಲಿ ಅದು ನೀಡುವ ಗಾಳಿ
ನಮಗೆ ಉಸಿರಾಗಿ
ಸೊನ್ನೆಯೂ ಅಷ್ಟೇ
ತೀರ ಚಿಕ್ಕದಾಗಿರಬಹುದು
ಶಕ್ತಿ ಇದ್ದರೆ ಕೈಯಲ್ಲಿ ಎಳೆದೆಳೆದು
ಆಕಾಶವಾಗಿಸಬಹುದು
ಇವರ ಎಂಬತ್ತರ ಕವಿತೆಗಳು ಹೇಗಿವೆ ಎಂದರೆ
“ಯಾರ ಕಣ್ಣಲ್ಲಿ ನೀರು ಬರುವುದೋ ಅಲ್ಲಿ
ನಾನಿರುತ್ತೇನೆ ಕಾಡಿಗೆ ಬೆಳದಿಂಗಳಿನಂತೆ
ಒಣ ಮರದ ತಬ್ಬಲಿತನವ ತಬ್ಬಲಿಕ್ಕೆ
ಮೊಗಸಾಲೆ ಅವರ ಕವಿತೆಗಳಂತೆ ಕರುಣಾ ಮೈತ್ರಿ- ಇದು ಬುದ್ಧನ ದೊಡ್ಡ ಗುಣ. ಕಣ್ಣೀರಿದ್ದಲ್ಲಿ ಧಾವಿಸಿ ಹೋಗುವ, ತಬ್ಬಲಿಗಳನ್ನು ತಬ್ಬಿಕೊಳುವ ಗುಣ ಮೊಗಸಾಲೆ ರಕ್ತದಲ್ಲಿಯೆ ಇದೆ
ಎಂಬತ್ತರ ಹರೆಯದಲ್ಲೂ ಸುಖಿ ದಾಂಪತ್ಯ ಬದುಕು ಕಳೆಯುತ್ತಿದ್ದರೆ ಎನ್ನಲು ಅವರ ದಾಂಪತ್ಯ ಗೀತೆಗಳೆ ಸಾಕ್ಷಿ
ಬಾಳೆ ನಾರಿನ ಹಗ್ಗ ಕವಿತೆಯಲ್ಲಿ ಅಮ್ಮನನ್ನು ನೆನಸಿದ್ದಾರೆ
ಬಾಳೆಯ ನಾರಿನ ಹಗ್ಗದ ಹಾಗಿದ್ದಳು ನನ್ನವ್ವ
ಎಲ್ಲರೂ ಹೂವೇ ತಾವೆಂದುಕೊಂಡಿರುವಾಗ
ಆಕೆಯ ಹೆಸರು ಸರಸ್ವತಿ, ಆದರೆ ಅಲ್ಲ ವೀಣಾಪಾಣಿ
ಇದ್ದು ವೀಣಾವಾದನಕ್ಕಿಂತ
ಮೃದು ಮಧುರ ನುಡಿ
ಮನೆ ಮಂದಿಗೆ ಅವಳೇ ಬೇಕು ಎಲ್ಲ ಕೆಲಸಕ್ಕೆ
‘ಅದು ತಾ, ಇದು ತಾ ಅಥವಾ ಇದನ್ನು ಮಾಡಿಕೊಡು
ಗೋಣು ಆಡಿಸಿದವಳಲ್ಲ ಆ ಮಾತುಗಳಿಗೆ, ನಡುಬಗ್ಗಿ
ಅದೇ ತನ್ನ ಬದುಕೆಂದು ಗೊಣಗದೆ ನಡೆದುಕೊಂಡು.
ಬಹುಶಃ ಈ ಕವಿತೆಗೆ ಕವಿಯ ಹೃದಯದ ಮಾತುಗಳೆ ವ್ಯಾಖ್ಯಾನ
ದೇವರು ಮೊಗಸಾಲೆ ಅವರನ್ನು ಬಹುವಾಗಿ ಕಾಡಿದೆ ದೇವರು ಇದ್ದಾನೋ ಇಲ್ಲವೋ ಎಂಬ ದ್ವಂದ್ವ ಅವರನ್ನು ಕಾಡಿದೆ
ಕೈ ಮುಗಿಯಲು ಮನಸ್ಸು ಬರಲಿಲ್ಲ. ದೇವರಿಗೆ
ಇಷ್ಟು ದಿನ ನನ್ನೊಳಗಿದ್ದವನು
ಹೀಗೇಕೆ ದೇವಸ್ಥಾನದ ಒಳ ಹೊಕ್ಕು ಕುಳಿತ ಎಂದರೆ?
ಪ್ರಕೃತಿಯ ನಾನಾ ಬಗೆಯ ಅಸ್ತಿತ್ವಗಳಲ್ಲಿ ದೇವರನ್ನು ಕಾಣುತ್ತಾರೆ
ಕ್ಷಣದಲ್ಲಿ ಧ್ಯಾನಿಸುವಂತೆ ಅಲ್ಲಿ
ಕೈ ಮುಗಿಯಬೇಕು ಈ ಪಕ್ಷಿ ಲೋಕಕ್ಕೆ
ಭೂಮಿಯಲ್ಲಿರುವ ಮರಗಿಡ ಬಳ್ಳಿಗಳಿಗ
ಕೆರೆ ತೊರೆ ನದಿ ನದ ಸಮುದ್ರಕ್ಕೆ.
ಕವಿ agnostic ಅಂತ ಕೆಲವೊಮ್ಮೆ ಅನಿಸಿದರೂ ಕವಿತೆಗಳಲ್ಲಿ ದೇವರ ಅಸ್ತಿತ್ವದ ಪ್ರಶ್ನೆಯನ್ನು ಕೇಳುತ್ತ ದೇವರನ್ನು ಸ್ವೀಕರಿಸುತ್ತಾರೆ ದೇವಸ್ಥಾನದ ಕಲ್ಲು ಮೆಟ್ಟಿಲುಗಳಲ್ಲೂ ದೇವರನ್ನು ಕಾಣುತ್ತಾರೆ
ಗೋಚರ ದೇವರನ್ನು ಸಂಶಯದಿಂದ ಕಂಡರೂ ಅಗೋಚರ ದೇವರ ಬಗ್ಗೆ ಅವರಿಗೆ ಒಲವಿದೆ. ಅವರು ನಾಸ್ತಿಕರಂತೂ ಖಂಡಿತ ಅಲ್ಲ
ದಲಿತ ಗೀತೆಗಳು ಇದರ ಮಾತು ಬಲ್ಲವನಾದರೆ ಹೇಳು
ಕವಿತೆಯ ಸಾಲುಗಳು
ಕೈಮುಗಿಯುವೆ ‘ಸ್ವಾಮಿ’ ಎಂದು ಅವನಿಗೆ.
ನನ್ನಲ್ಲಿ ಅವು ಇಲ್ಲವೆಂದು!
.ಆದರೆ ಅವನ ಬಗ್ಗೆ ಒಂದು ತಕರಾರು ತೆಗೆಯುತ್ತಿದ್ದೇನೆ:
ನಮ್ಮ ನಡುವೆ ಇರುವ ವರ್ಗ ವರ್ಣ ಭೇದಗಳನ್ನೆಲ್ಲ
ಎಷ್ಟು ಸಹಜವಾಗಿ ಒಪ್ಪಿಕೊಂಡಿದ್ದಾನೆ ಆತ!
ದೇವರೇ
ಮಾತು ಬಲ್ಲವನಾಗಿ ಮಾತಾಡು
ಅಡದೆ ಇದ್ದರೆ ಹೇಗೆ ನೀನು
ದೇವರು?
ಮೊಗಸಾಲೆ ಅವರ ದಲಿತರ ಪ್ರೇಮ ಬೂಟಾಟಿಕೆಯದಲ್ಲ ಅತ್ಯಂತ ಪ್ರಾಮಾಣಿಕವಾದುದು. ಅದನ್ನು ಬಲ್ಲವರೇ ಬಲ್ಲರು!
ದಾಂಪತ್ಯಕ್ಕೆ ಅರವತ್ತು
ಕೈಹಿಡಿದು ಕರೆತಂದಳವಳು ಗುಲಾಬಿ ಗಿಡದ ಬಳಿ
“ನಮ್ಮ ಮದುವೆಗೂ ಗಿಡಕ್ಕೂ ಈಗ ಅರವತ್ತು
ಆಗಾಗ ಕತ್ತರಿಸಿದರೂ ಮತ್ತೆ ಮತ್ತೆ ಚಿಗುಚಿಗುರಿ
ಯಾವತ್ತೂ ಒಣಗದೆ ಬಿಡುತ್ತಿರುತ್ತದೆ ಹೂವು
ಇವರ ದಾಂಪತ್ಯ ಸದಾ ಚಿಗುಚಿಗುರುತ ಯಾವತ್ತೂ ಒಣಗದೆ ಬಿಡುತ್ತಿರುತ್ತದೆ ಪ್ರೀತಿಯೆಂಬ ಹೂವು
ಎಲ್ಲ ಕವಿತೆಗಳನ್ನೂ ವಿಶ್ಲೇಸಬಯಸುವುದಿಲ್ಲ.ಈ ಕವನ ಸಂಕಲನದ ಬಗ್ಗೆ ಬೇರೊಂದು ವ್ಯಾಖ್ಯಾನ ಗ್ರಂಥ ಬರೆಯುವಷ್ಟು ಬ್ರಹ್ಮಾಂಡವಾಗಿವೆ ಮೊಗಸಾಲೆ ಕವಿತಾ ಪ್ರಪಂಚ .
ಇದು ಕನ್ನಡಲ್ಲಿ ಬಂದ ಅಸಾಧಾರಣವಾದ ಸಂಕಲನ.
ಹೃದಯಕ್ಕೆ ಮುಟ್ಟುವ ತಟ್ಟುವ ಅನೇಕ ಕವಿತೆಗಳಿವೆ. ಅವರ ಕಾವ್ಯ ಚಮತ್ಕಾರದ ಪ್ರತಿಭೆ ಪ್ರತಿಯೊಂದು ಕವಿತೆಯಲ್ಲಿದೆ. ಮೊಗಸಾಲೆ ಬ್ರ್ಯಾಂಡ್ ಕವಿತೆಗಳು ದಯವಿಟ್ಟು ಓದಿ






0 Comments