ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆದ್ದಾರಿ ಕಣಿವೆ

anand-kunchanuru

ಆನಂದ ಕುಂಚನೂರ

 

ಹೆದ್ದಾರಿಯ ತವಕ

ಆಂಬ್ಯುಲೆನ್ಸಿನ ತಣ್ಣನೆಯ ಕೆಂಪು ದೀಪಕೆ

ಒಳರೋಗಿಯ ಹೊರ ಉಸಿರಾಟಕೆ.

 

ಕಾಲ ಹೇಗೆ ಓಡುತ್ತದೆ?

ಹೆದ್ದಾರಿಯ ಮೇಲೆ

ನಡೆದು ನೋಡಬೇಕು.

 

ಹೆದ್ದಾರಿಯ ಬೆಳದಿಂಗಳು

ಚಂದ್ರನ ಹೋಲುತ್ತಿದೆ

ಹಾಲು ಮೈ.

 

ಸಿಡಿದ ರಕ್ತ ಅವಸರದ್ದು

ಹೆದ್ದಾರಿಯೆದೆ ಮೇಲೆ ಚಿತ್ರವಾಗಿ

ಉಂಡು ಕೊಬ್ಬಿದ ಟಾರೂ ಟೈರೂ.

 

ಮಳೆ ಸುರಿದ ಹೆದ್ದಾರಿ

ಗರಿಕೆಗೂ ಒಡಲನೂಡುವುದಿಲ್ಲ

ಗಿಡುಗನದು ಬೆಂಕಿ ಕಣ್ಣು.

 

ಕಲಾವಿದನೊಬ್ಬನಿಗೆ ಕಾಯುತ್ತಿದ್ದೇನೆ

ಹೊತ್ತಾದರೂ ಸುಳಿವಿಲ್ಲ

ಹೆದ್ದಾರಿಗೆ ಕವಲುಗಳಿಲ್ಲ

 

ಹೆದ್ದಾರಿಯೆಂದ ಮೇಲೆ ಕೇಳಬೇಕೆ

ಅಲ್ಲಲ್ಲಿ ಸಿಗುವ ಎಳನೀರು, ಆರೇಂಜು, ಕಾಫಿ…

ನಿರ್ಲಕ್ಷ್ಯ ಗುರಿ.

 

(ಮುಂದುವರೆಯುವುದು….)

‍ಲೇಖಕರು admin

18 December, 2016

3 Comments

  1. Beeru Devaramani

    ಅತಿ ಸರಳವಾಗಿ, ಸುಂದರವಾಗಿ ಅರ್ಥೈಸಿಕೊಳ್ಳುವ ಹಾಗೆ ಬರೆವ ಕವಿ ಅವರ ಕಲ್ಪನೆಯಲ್ಲಿ ಮೂಡಿ ಬರುವ ಚಿಂತನೆಗಚ್ಚುವ ಸಾಲುಗಳು ನಿಜಕ್ಕೂ ಕಾಡುತ್ತವೆ.
    ಕಾಲದ ಬಗ್ಗೆ ಅನೇಕರು ಬರೆಯುತ್ತಿದ್ದಾರೆ ಈಗಾಗಲೇ ಅನೇಕರು ಬರೆದಿದ್ದಾರೆ ಇದು ವಿಶಿಷ್ಟ ರೀತಿಯಲ್ಲಿ ಕಾಣ ಬರುತ್ತದೆ ಈ ಕವಿತೆ. ತುಂಬಾ ಚೆನ್ನಾಗಿದೆ.

  2. ಅನಿಲ್ ಗುನ್ನಾಪುರ

    “ಹೆದ್ದಾರಿ ಕಣಿವೆ” ಕವಿತೆ ಇಷ್ಟವಾಯಿತು ಸರ್..

    • Anand Kunchanur

      Anil and Beeru..thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading