–ನಿರ್ಮಲಾ ಶೆಟ್ಟರ್
ಸುಂಕ
ಬಿಸಿಲಿಗೆ ಅದೆಷ್ಟು ತಾಪ
ಅದನೆ ಹೊದ್ದೆ
ಹೊರಬರಲಾರದೆ ಒದ್ದಾಡಿ
ಅಲ್ಲಿಯೇ ಬಿದ್ದೆ
ಚಳಿ ಬಂತೆಂದರೆ ಮನಸ್ಸು
ಮುಗ್ಗುಲಗೇಡಿ
ಬಯಕೆಗಳ ಹೇಳುವಲ್ಲಿ
ತುಸು ಲಜ್ಜೆಗೇಡಿ
ಮಳೆ ಅವನ ಹಾಗೆ
ದೂರಿದರು ಸುರಿಯುತ್ತದೆ
ತನ್ನೊಂದಿಗೆ ನನ್ನ
ಹೊತ್ತು ಒಯ್ಯುತ್ತದೆ
ಬೆಳೆಯುವ ಉಗುರು
ಬೇಡವೇ ಬೇಡಾ
ಕತ್ತರಿಸಿದಷ್ಟು ಬೆಳೆಯುತ್ತದೆ
ಅವನ ನೆನಪಿನಂತೆ
ಬಿಸಿಲು ಛಳಿ ಮಳೆ ಉಗುರು
ಮತ್ತವನು ಇಲ್ಲದೆ ಹೋಗಿದ್ದರೆ
ಹೂವ ಘಮಲಿಗೂ ಸುಂಕ
ಕೇಳುತ್ತಿತ್ತು ಗಾಳಿ






0 Comments