ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧ ಬುದ್ಧ ಬುದ್ಧ…

-ಸಂತೋಷಕುಮಾರ್ ಬಿ ಪಿ ಬೆಳಗಟ್ಟ

೧ .ಬುದ್ಧ ಬುದ್ಧ ಬುದ್ಧ

ಕಾರುಣ್ಯದ ಮೈತ್ರಿ
ಬುದ್ಧ ಬುದ್ಧ ಬುದ್ಧ..
ನೀನು ಬಹಳ ಪ್ರಬುದ್ಧ

ಲೋಕಕೆಲ್ಲಾ ಸಾರಿದೆ ಕಾರುಣ್ಯದ ಮೈತ್ರಿಯ
ಭಿತ್ತಿದೆ ನೀ ಜಗಕೆಲ್ಲಾ ಪ್ರೇಮ ಬೀಜವ
ನಿನ್ನಂತೆ ನಾನು ಧ್ಯಾನಿಯಾಗಬೇಕು ಮಹಾಮುನಿ
ಅಜ್ಞಾನವೆಂಬ ಮೂಢತೆಯ ಮಂಜನು ಸರಿಸು
ನೀನೇ ದೊಡ್ಡ ಜ್ಞಾನ ಎನಗೆ ದಯಮಾಡಿ ಆವರಿಸು..

ಶಾಕ್ಯಮುನಿ ನೀನನಗೆ ಸವಿಯಾದ ಸಖ್ಯ
ಮಾನುಷ ಕುಲಕೆ ನೀಸಾರಿದ ಅಹಿಂಸೆಯೇ ಮುಖ್ಯ
ಅಂಗುಲನಿಗೂ ಅಕ್ಕರೆಯನ್ನು ಕೊಟ್ಟವನೇ
ಶತಮಾನಗಳಿಂದೆ ಸಮಾತಾ ತತ್ವ ಸಾರಿದವನೇ
ನೊಂದ ಜನಗಳಿಗೆ ಆತ್ಮೀಯತೆಯ ಅಪ್ಪುಗೆ ನೀನು..

ಆಕಾಶಕ್ಕಿಂತ ಹೆಚ್ಚು ನಿನ್ನ ಅಹಿಂಸೆಯ ಅರಿವು
ಲೋಕ ನಿನ್ನ ಅಪ್ಪಿಕೊಳ್ಳಬೇಕು
ಆಗ ಅಂಧಕಾರ, ಅಪಸ್ವರಗಳು ದೂರಗುತ್ತವೆ ಗುರು
ತೊಡೆದಾಕು ಮನದ ಭ್ರಾಂತಿ
ಲೋಕದಲ್ಲಿ ನೀನೇ ಪ್ರೀತಿ ಕ್ರಾಂತಿ..

ನಿನಗಿಂತ ಯಾರಿಲ್ಲ ದೊಡ್ಡವರು ಶಾಂತಮೂರ್ತಿ
ಬುದ್ಧ ಬುದ್ಧ ಬುದ್ಧ…

.ಅವಳ ಅಸ್ಮಿತೆ

ಆಂತರ್ಯದಾಳದಲ್ಲಿರುವ ನೋವ ನೀ ಹೇಗೆ ಸಹಿಸಿದೆ
ಸಾವಿರಾರು ವರುಷದಿಂದ ಕಾರ್ಪಣ್ಯ ಹೊತ್ತು ಸಲುಹಿದೆ
ಎದೆಯಲ್ಲಿ ವಿಷವಿಕ್ಕಿದವರ ಬದುಕಿಗೆ ಅಮೃತವಿಟ್ಟು ಉಣಿಸಿದೆ
ತಲೆಯ ಮೇಲೆ ಹೊರೆಯ ಗಂಟು, ತಪ್ಪಲಿಲ್ಲ ನೋವ ನಂಟು
ಹಿAಡಿ ಹಿಪ್ಪೆ ಮಾಡಿದರೂ ಮೊಲೆ ಹಾಲ ಕೊಟ್ಟು ಬೆಳಸಿದೆ
ಮೈಯೆಲ್ಲಾ ಗಾಯ, ಹರಿದ ಬಟ್ಟೆ, ಬೆತ್ತಲೆ ದೇಹ ಮಾಡಿದರು
ಹರಿದ ಮನಸು, ಒಡೆದ ಕನಸು, ಕಣ್ಣೀರ ಕೋಡಿ ಹರಿದರೂ
ಹೇಗೆ ಸಹಿಸಿದೆ…?
ಅಲ್ಯಾರೋ ಮುಗ್ಧಳ ತಲೆ ಕಡಿದರು..
ಮತ್ಯಾರೋ ಜೀವಗಳ ಹೊತ್ತಿದ್ದ ಹೆಣ್ಣನ್ನ ಕಾಡಿಗೆ ಬಿಟ್ಟು ಬಂದರು…
ತಲೆ ಬೋಳಿಸಿದರು, ಮುಖ ಮುಚ್ಚಿದರು, ಸ್ತನ ತೆರಿಗೆ ಕೇಳಿದರು…
ಸುಡುವ ಜ್ವಾಲೆಗೆ ತಳ್ಳಿ ಮಹಾಸತಿ ಎಂದರು…
ನಿನಗೆ ಇನ್ನು ಆಟವಡುವ ಪ್ರಾಯ ಆಗಲೇ ಪತ್ನಿ ಮಾಡಿದರು…
ನೀನು ಅದನ್ನು ಆಟವೇ ಎಂದುಕೊ೦ಡಿದ್ದೇಯೇನೋ, ಯಾರು ಬಲ್ಲರು…
ಅಲ್ಲೊಬ್ಬ ನೀ ನೋಡಲಿಲ್ಲ ಎಂದು
ಮುದ್ದಾದ ಮುಖವನ್ನ ಸ್ಮಶಾನ ಮಾಡಿದ…
ಅಲ್ಲೊಬ್ಬ ನಿನ್ನ ಎದೆಯಲ್ಲಿಟ್ಟುಕೊಂಡಿರುವೆ ಎಂದು
ನಿನ್ನೆದೆಗೆ ಚುಚ್ಚಿ ರಕ್ತ ಚಿಮ್ಮಿಸಿದ…
ಅಲ್ಲೊಂದು ದಂಡು ನಿನ್ನ ಬಟ್ಟೆ ಬಿಚ್ಚಿ
ಮೆರವಣಿಗೆ ಮಾಡಿದರು ನೋಡಿ ಕೇಕೆ ಹಾಕಿದರು…
ಫ್ರಿಡ್ಜ್, ಕಾಂಕ್ರೀಟ್ ಪಿಲ್ಲರ್, ಬ್ಯಾಗ್,
ಗೋಣಿ ಚೀಲದಲ್ಲಿ ಅರ್ಧ ಸುಟ್ಟ ದೇಹ
ಇನ್ನೂ ನೂರು ರೂಪಗಳಲ್ಲಿ ನಿನ್ನ ಕೊಂದದ್ದು…
ಕುರಿ-ಕರುಗಳಂತೆ ನಿನ್ನ ಸಾಲಲ್ಲಿ ನಿಲ್ಲಿಸಿ ಮಾರುವರಂತೆ…
ನೀ ಹೇಗೆ ಸಹಿಸಿದೆ….?
ಅಬಲೆ, ಕರುಣಾಮಯಿ, ಶೀಲವಂತೆ, ಸಹನಾಮೂರ್ತಿ,
ಕ್ಷಮಯಾಧರಿತ್ರಿ, ಪತಿವ್ರತೆ, ಮಹಾಸತಿ
ಅಯ್ಯೋ…!! ಇನ್ನೂ ಸಾವಿರಾರು ಬಿರುದುಗಳು ನಿನಗೆ
ಸಮಾಜದಲ್ಲಿ ಕಟ್ಟಿ ಹಾಕಲು ನಯವಾದ ಸರಪಳಿಗಳು
ನಿನ್ನ ಸುತ್ತುವರೆದಿವೆ ನೂರಾರು ವರುಷಗಳಿಂದ…
ಅಪ್ಪ, ಗಂಡ, ಮೈದುನ, ಮಗ, ಅಣ್ಣ
ಅಯ್ಯೋ…!! ಯಾವ ಸಂಬ೦ಧಗಳು ನಿನ್ನ ಬಿಟ್ಟಿವೆ
ಗತಕಾಲದ ಕೆಲವು ಪುಟಗಳು ಕರಾಳತೆಯಲ್ಲಿ ದಾಖಲು…
ಈಗಲೂ ನಿಂತಿಲ್ಲ ಬಿಡು…
ನಿನ್ನ ನಡೆವಾಗ, ನಗುವಾಗ, ಅಳುವಾಗ ಎಲ್ಲಿ ಬಿಟ್ಟಿದ್ದಾರೆ ಹೇಳು…
ಎಲ್ಲೆಂದರಲ್ಲಿ ಎಗ್ಗಿಲ್ಲದೆ ಕುಗ್ಗಿಸಲು ಹವಣಿಸಿದ್ದು ಈ ಪ್ರಧಾನತೆಯ ಪಿಡುಗು
ಹೆಣ್ಣೇ ಜಗತ್ತು ನಿನ್ನ ನೋಡುವ ರೀತಿಗಳು ನೂರು ತರಹ…
ಎಲ್ಲವೂ ನಿನ್ನದೇ ಆದರೂ ಅದ್ಯಾವುದು ನಿನ್ನದಲ್ಲಾ……!!

‍ಲೇಖಕರು Admin

3 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading