ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಬ್ಬುಗಳಲಿ ಕಾಮನಬಿಲ್ಲು ಹೊದ್ದವಳು..

nagaraja harapanahalli

ನಾಗರಾಜ್ ಹರಪನಹಳ್ಳಿ. ಕಾರವಾರ

`ಯಾಕೆ ಗೊತ್ತಾ’

ನೀ ನಡೆದ ದಾರಿ
ಮೃದುವಾಗಿದೆ, ನಗುತಿದೆ
ಪರಿಮಳ ಹರಡಿದೆ
ಯಾಕೆ ಗೊತ್ತಾ

she with a birdನೀ ನಿಂತ ಕಡೆ
ನಿನ್ನ ತುಟಿಯಿಂದ ಹೊರಟ
ಶಬ್ದಗಳು ಪ್ರೀತಿಯ
ಬಿತ್ತಿವೆ
ಯಾಕೆ ಗೊತ್ತಾ

ನೀ ಮುಟ್ಟಿದ
ಕಡೆ ನದಿಗಳು ಹರಿದಿವೆ
ನಿನ್ನ ಅಂಗೈಯಲ್ಲಿ ನೀರು ಸೆಲೆಯಾಗಿ ಹರಿದಿದೆ
ಯಾಕೆ ಗೊತ್ತಾ

ನೀ ದಾರಿಯಲ್ಲಿ ನಡೆವಾಗ
ಹೂಗಳು ತಲೆಬಾಗುತ್ತವೆ
ನಿನ್ನಿಂದ ಬಣ್ಣ ಕಡ ಪಡೆದಿವೆ
ಯಾಕೆ ಗೊತ್ತಾ

ನೀ ಕುಳಿತು ಹರಟಿದೆ
ಚಿಟ್ಟೆಗಳು ಸಂಭ್ರಮಿಸಿದವು
ಯಾಕೆ ಗೊತ್ತಾ

ನೀ ಭೂಮಿಯ
ಮಗಳು
ನೀ ಕಾರುಣ್ಯದ
ಮುಗುಳು
ಚೆಲುವನ್ನೇ ಹೊದ್ದವಳು
****

ಕವಿತೆಯಂಥ ಹುಡುಗಿ

ಕವಿತೆಯಂಥ ಹುಡುಗಿ
ಕವಿತೆಯಾಗಲು ಇನ್ನೇನು
ಬೇಕು
butter fliesಬಣ್ಣದ ಕೋಣೆಯಲಿ
ನಿಂತವಳು
ಆಗಸಕೆ ಬಣ್ಣ ಎರಚಿದವಳು
ಹರಿವ ನೀರಿನಂಥ
ಹುಡುಗಿ
ನಗುವಲ್ಲಿ ನಗುಚೆಲ್ಲಿ
ಪಕ್ಕದವರ ಉಲ್ಲಾಸ ಗೊಳಿಸಿದವಳು ಕವಿತೆಯಂಥಾ

ಹುಡುಗಿ
ತುಟಿಗಳಲಿ ಹೂ ಅರಳಿಸಿದಳು
ಹುಬ್ಬುಗಳಲಿ
ಕಾಮನಬಿಲ್ಲು ಹೊದ್ದವಳು
ಶೃಂಗಾರವ ಹೊದ್ದ ಶೃಂಗದಂಥಾ
ಚೆಲುವೆ
ಕವಿತೆಯ ಎದೆಯ ಕದಗಳಲಿ
ಬಚ್ಚಿಟ್ಟು ಕೊಂಡವಳು
ಪ್ರೀತಿಯ ಬೆಳಕ ಕಣ್ಣಲಿ
ಚೆಲ್ಲಿಯೂ ಚೆಲ್ಲದಂತೆ
ಕಾಪಾಡಿ ಕೊಂಡವಳು
ಬಣ್ಣಗಳ ಮುಂಗುರುಳು
ಬೆರಳ ತುದಿಗಳಲಿ
ಇಟ್ಟು ನಾಟ್ಯವಾಡಿಸಿದ ಚೆಲುವೆ
ಸೊಗಸುಗಾರ್ತಿ
ಕವಿತೆಯಂಥ ಹುಡುಗಿ
ಕವಿತೆಯೇ ಆದವಳು.

‍ಲೇಖಕರು Admin

22 June, 2016

4 Comments

  1. ಕಿರಣ್ ಕಾಂಗೋಕರ್

    ನೀನೇ ಬೇಕೆಂದಿಲ್ಲ ನನಗೆ
    ನೀನೆಂಬ ನೆಪಸಾಕು ನಿನ್ನ ನೆನೆಯಲು

    ನೀ ಬಿಟ್ಟುಹೋದ ನೆನಪುಗಳನ್ನು
    ನಾ ಹೊರಲಾರದೆ ಮೂಟೆಯಲಿ ಕಟ್ಟಿಟ್ಟಿರುವೆ

    ನೀ ಕೊಟ್ಟ ಕಹಿ ನೆನಪುಗಳಲ್ಲಾ
    ನಿನ್ನ ಮುಂಗುರಳ ನೆನೆದೊಡೆ ಸಿಹಿಯಾದವು

    ಕಣ್ಣು ಮುಚ್ಚಿದರೆ ಸಾಕು
    ಕತ್ತಲೆಯ ಬದಲು ನಿನ್ನ ಮುದ್ದು ಮುಖವೇ ಕಾಣುವುದೆನಗೆ

    ಎಂದೋ ಕೇಳಿದ ನಿನ್ನ ಧ್ವನಿಯೇ ಸಾಕು
    ನಿನ್ನ ಕಳೆದುಹೋದ ನೆನಪುಗಳ ಹುಡುಕಲು

    ಎಂದೋ ಅಸ್ಪಷ್ಟವಾಗಿ ನೋಡಿದ ನಿನ್ನ ಮುದ್ದು ಮಖವೇ ಸಾಕು
    ನಿನ್ನ ಮರೆಯಾದ ನೆನಪುಗಳ ನೋಡಲು

    ನಿನ್ನ ಜೊತೆ ಕಳೆದ ಕೆಲಸಮಯ ಸಾಕು
    ನಿನ್ನ ಮರೆತ ನೆನಪುಗಳ ಕಲೆಹಾಕಲು

    ನಿನ್ನ ಗಲ್ಲ ಮೇಲೆ ಗೀಚಿದ ನನ್ನ ಉಗುರುಗಳೇ ಸಾಕು
    ನಿನ್ನ ಗುಳಿಬಿದ್ದ ಕೆಂಪುಗಲ್ಲ ನೆನೆಯಲು

    ನಿನ್ನ ಹೆಸರು ಕೇಳಿದರೆ ಸಾಕು
    ಸತ್ತುಹೋಹ ನೆನಪುಗಳಿಗೂ ಜೀವ ಬರುವುದು

    ನಿನ್ನ ನೆನೆಯಬಾರದೆಂದುಕೊಳ್ಳುವೆ
    ಆದರೆ ನೆಪವೇ ಬೇಡದಂತೆ ನೆನಪಾಗುತ್ತೀ

    ನೀನು ಕೊಟ್ಟುಹೋದ ಕೋಟಿ ಕನಸುಗಳಿವೆ
    ನೀನು ಬಿಟ್ಟುಹೋದ ಸಾವಿರ ನೆನಪುಗಳಿವೆ
    ನೆನಪುಗಳ ನೆನೆಯಲು ನಿನ್ನ ನೆಪ ಬೇಕಷ್ಟೆ….

    -ಕೆ.ಕೆ

  2. Renuka ramananda

    ಚಂದ ಕವಿತೆ

  3. Anushk

    Kavithe , comment kavithe awesome!!

  4. ಕೈದಾಳ್ ಕೃಷ್ಣಮೂರ್ತಿ

    ಹುಡುಗಿಯರ ಉಬ್ಬು ಗಳಲ್ಲಿ ಕಾಮನಬಿಲ್ಲು, ಕಾಮೆಂಟಿಗರ ಬೆರಳತುದಿಯಲ್ಲೊಂದು ಪದ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading