ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ಒಬ್ಬ ಅಜ್ಜಿ

-ವಿಶಾಲ್ ಮ್ಯಾಸರ್

ಹೀಗೆ ಒಬ್ಬ ಅಜ್ಜಿ
ಬೂಬಮ್ಮ, ಸಾಬನ್ಮ
ಕರಿಯಮ್ಮ ಗಿರಿಯಮ್ಮ
ಯಾರಾದರೂ ಅಂದುಕೊಳ್ಳಿ
ದಿನವೂ ಬೆಳಿಗ್ಗೆ ಎದ್ದು ಪುಟ್ಟಿ ತುಂಬಾ
ತುಂಬಿಕೊಂಡು ಹೊರಡುತ್ತಾಳೆ
ಬಹುತೇಕ ಜನರ ಹಸಿವನ್ನು,
nutrient consious ಅನ್ನು

ತಿರುಗುತ್ತಾಳೆ
ಊರೂರು,ಕೇರಿ – ಕೇರಿ
ಆ ಮೂಲೆಯ ಮನೆಯಿಂದ
ಹಿಡಿದು ಈ ಕೊನೆಯ
ದಾರಿಯ ಗೋಡೆಯವರೆಗೂ
ಮಾರುತ್ತಾಳೆ ಆಕೆಗೆ ವಜ್ಜೆಯೇ ಅನ್ನಿಸುವುದಿಲ್ಲ
ತಲೆ ಮೇಲಿರುವ ಪುಟ್ಟಿ ಅಥವಾ
ನಿಮ್ಮ ಬಾಯಿ ರುಚಿ


ಹೀಗೆ ಇನ್ನೊಬ್ಬ ವ್ಯಕ್ತಿ
ಇಕ್ಬಾಲ,ಅಬ್ದುಲ್ಲ
ಕರಿಯಣ್ಣ, ಮರಿಯಣ್ಣ
ಯಾರಾದರೂ ಅಂದುಕೊಳ್ಳಿ
ಯಾವುದೊ ಕಾರಣಕ್ಕೆ ಅವನು
ಹೊತ್ತು ನಡೆಯಲೇ ಬೇಕಲ್ಲ
ಈ ದೇಶವೆಂಬ ಭಾರವನ್ನು

ಅದೆಷ್ಟು ಕಷ್ಟವಪ್ಪ
ಈ ಭಾವುಟವನ್ನು ಹೊತ್ತು ನಡೆಯುವುದು
ಕೆಳಗೆ ಇಡಂಗಿಲ್ಲ, ನೆಲಕ್ಕೆ ಮುಟ್ಟಂಗಿಲ್ಲ
ನಡೆದು ನಡೆದಲ್ಲೆಲ್ಲ ಹೆಗಲ ಮೇಲೆ
ಏನೋ ಭಾರವಿದೆ
ಭಾರವೆಂದರೆ –
ಮೂರು ಮತ್ತೊಬ್ಬರು
ಹೊತ್ತು ಕೊಳ್ಳಬಹುದಾದ್ದು ಅನ್ನಿ
ಬೇರೆ ಅವರಿಗೆ ಕೊಡಂಗೂ ಇಲ್ಲಾ
ಉಫ್

‍ಲೇಖಕರು Admin

9 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading