ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವೆಂತಾ ದಡ್ಡರು ನೋಡಿ!

-ವಿಜಯಶ್ರೀ ಹಾಲಾಡಿ

ಹಾರಾಡುವ ಮಾತುಗಳು!

ಅಟ್ಟವೇರಿಸಿ ಕೂರಿಸಿದ್ದಾರೆ
ಅದೇನು ಕವಿತೆ ಬರೆಯುತ್ತಾಳೋ!
ಮೋಹ ವಿರಹ ಪ್ರೇಮ ಪ್ರಣಯ..
‘ಕೊಳಕು’ ಹೇಗೂ ಆಯಿತಲ್ಲ;
ಬೆಡ್ರೂಮಿನ ಪದ್ಯಗಳೂ ಇವೆಯಂತೆ!
ನಿಮಗೆ ಗೊತ್ತಿದೆಯಾ?
…
ನೀವೆಂತಾ ದಡ್ಡರು ನೋಡಿ!
ಅಂತಹ ಉಪ್ಪು ಖಾರ
ಮಸಾಲೆಗಳೆಲ್ಲ ಇರುವುದಕ್ಕೇ
ಗಂಡಸರು ಹಾಡಿ ಹೊಗಳುವುದು
ಮತ್ತೆ ಸುಮ್ಮನೆಯಾ!

ಓ, ನೀವಂದದ್ದು
ನೂರಕ್ಕೆ ನೂರು ನಿಜ!

ಫ್ಯಾಶನ್ ಅಂದರೆ
ಇಡುವುದಕ್ಕೇ ಜಾಗವಿಲ್ಲ
ಮುಟ್ಟು ನಿಲ್ಲುವ ವಯಸ್ಸಾದರೂ
ಎಳೆ ಹುಡುಗಿಯಂತೆ ಅಲಂಕಾರ
ಅಷ್ಟೆಲ್ಲ ಫೇಮಸ್ ಆಗಲು
ಇದುವೇ ದೊಡ್ಡ ಕಾರಣ!
ಅಲ್ಲ, ಇಷ್ಟೇ ಅಂತೀರಾ
…. ಇನ್ನೂ ಏನಾದರೂ?
ಇದ್ದೀತಪ್ಪ; ಇರುತ್ತದೆ ಬಿಡಿ
ಆ ಕುಣಿತ ಕಂಡರೆ
ಗೊತ್ತಾಗುದಿಲ್ಲವಾ?

ಅವಳ
ಕವನ ಸಂಕಲನಗಳಿಗೆ
ಯಾವುದೋ ಬಹುಮಾನ ಬಂದಾಗ
ಯಾರೋ ಸಮತೂಕದ
ವಿಮರ್ಶೆ ಬರೆದಾಗ
ಪತ್ರಿಕೆಯಲ್ಲಿ ಅವಳ
ಚಂದದ ಫೋಟೋ,
ಕವಿತೆ ಪ್ರಕಟವಾದಾಗ
ಹಾರಾಡುವ ಮಾತುಗಳು
ಈಗೀಗ ಹುಚ್ಚು ನಗು
ತರಿಸುತ್ತವೆ ಅವಳಿಗೆ!

ಆ ಇರುಳು
ಕವಿತೆ
ಬಳಿಬಂದು
ಕೈ ಹಿಡಿದು
ಕಂಬನಿಯೊರೆಸಿ
ಸಂತಯಿಸುತ್ತದೆ!

‍ಲೇಖಕರು Admin

9 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading