ಹಿರಿಯ ನಾಗರಿಕರೊಬ್ಬರ ನಾಪತ್ತೆಯ ಸುದ್ದಿ ..

ಕಾಣೆಯಾಗಿದ್ದಾರೆ..

sheshagiri jodidar

ಶೇಷಗಿರಿ ಜೋಡಿದಾರ್ 

 

ಹಿರಿಯ ನಾಗರಿಕರೊಬ್ಬರ ನಾಪತ್ತೆಯ ಸುದ್ದಿ
ಹಳಸಿ, ಹದವಾಗಿ, ಸುಮಾರು ಸಮಯ ಆಯ್ತು,
ಆತಂಕ, ಶ್ರೀಸಾಮಾನ್ಯನಂತೆ ಕಾಣುವ ಇವರು ಸ್ವಲ್ಪ ನಿಗೂಢ
homeಕಾರಣ ಇಷ್ಟೇ…. ಮರೆವಿನ ರೋಗ ಡಿಮೆಂಷಿಯಾ….
ಇದ್ದಕ್ಕಿದ್ದಂತೆ ಮಾಯವಾಗುವ,
ಅಭ್ಯಾಸ ರೂಢಿಸಿಕೊಂಡಿದ್ದಾರೆ
ಇವರ ನಿಕಟವರ್ತಿಗಳಿಗೆ ಅನುಮಾನ ಬಾರದ ಹಾಗೆ
ಕುರುಹು, ಸುಳಿವುಗಳಿಲ್ಲದೆ ಕಳೆದುಹೋಗುತ್ತಾರೆ
ಆಗಾಗ್ಗೆ, ಆಪರೂಪವಲ್ಲದಿದ್ದರೂ
ಮುದಿದೇಹಕ್ಕಾದರೂ ಮರುಕ ಮಡುಗಟ್ಟಬಹುದು
ಮೌನದಲ್ಲಿ ಜ್ಞಾನಿಗಳಂತೆ ಭ್ರಮೆ ಬಿತ್ತುತ್ತಾರೆ
ಮಾತಿಗೆ ಇಳಿದಾಗ ಮೊಳಕೆ ಕರಟಿ ನಿರ್ಜೀವ ಭ್ರೂಣ
ಕರ್ಕಶ ಪ್ರತಿಧ್ವನಿ ಕಿವುಡಾಗಿಸುತ್ತದೆ..
ಅಡ್ಡಿ ಇಲ್ಲ… ಹುಚ್ಚರ ಸಹವಾಸವೇ ಹಾಗೆ
ಅತಿ ಸ್ನೇಹಮಯಿ, ಕಂಡ,ಕಂಡವರನ್ನು ನಿಲ್ಲಿಸಿ
ರಸ್ತೆಯಲ್ಲಿ ಮಾತಿಗೆಳೆಯುವ ಪರಿಗೆ
ಮಾನಸಿಕ ಅಸ್ವಸ್ತ ಎಂಬ ಪ್ರಸಂಶೆ
ಅದೇಕೋ ಈ ಬಾರಿ ಅವರ ಕಾಣದಿರುವಿಕೆ
ಅಸಹಜ ಅನ್ನಿಸುತ್ತಿಲ್ಲ, ಕಾಲ ಮೀರಿಲ್ಲ
ಮರೆಯುವಷ್ಟು ನೀವೆಲ್ಲಾ
ಆಗಮಿಸಬಹುದು ಆಕಸ್ಮಿಕವಾಗಿ ನಿಮ್ಮಲ್ಲಿಗೆ
ಬಂದಾಗ ಅಭಿನಯಿಸಿ, ಒಂದು ಫ್ಹೋನಾಯಿಸಿ
ಖುದ್ದಾಗಿ ನಾನೇ ಬಂದು ಕರೆತರುತ್ತೇನೆ ಪುಸಲಾಯಿಸಿ
ಮತ್ತೆ ಹೊರಹೋಗದ ಹಾಗೆ ಬೀಗ ಜಡಿಯುತ್ತೇನೆ
ಸಹಕರಿಸಿ, ಕಳೆದುಹೋಗಿದ್ದಾರೆ ಮುದಿಪ್ರಾಯದವರು
ಸುಳಿವು ಸಿಕ್ಕದ ಹಾಗೆ, ಎಲ್ಲ ಅಳಿಸಿ, ಕುರುಹುಗಳ ಕುರುಡಾಗಿಸಿ.
ತನ್ನನ್ನೇ ಹುಡುಕುತ್ತಿರುವ ಅಲೆಮಾರಿ ಆತ್ಮ…

‍ಲೇಖಕರು Admin

May 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: