ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಡಿಯಷ್ಟು ಬೇಡಿಕೆಯ ಪತ್ರ…!!

ದೇವರಾಜ್ ಹುಣಸಿಕಟ್ಟಿ

ಸತ್ತೆಯ ಸರದಾರರು
ಸುಳ್ಳನ್ನೆ ಬಿತ್ತಿ ಸುಳ್ಳನ್ನೆ ಬೆಳೆಯುತ್ತಿರುವಾಗ….
ಅವರ ಮುಖಕ್ಕೆ ಒಂದಿಷ್ಟೇ
ಇಷ್ಟು ಕನ್ನಡಿ ಹಿಡಿದೆ….
ಅಷ್ಟೇ…

ಅದೀಗ ಅಪರಾಧವಂತೆ….!!

ಮೊನ್ನೆ ಮೊನ್ನೆ ಸತ್ತೆಯ
ಅಮಲಿನ ದೊಂಬಿಯಲಿ
ಸತ್ತವರ ಹಾಡಿಯಲ್ಲಿ ಕರುಳ ಕಿತ್ತ
ರೋಧನೆಗೆ ಶಬ್ದಗಳ ಕಣ್ಣಾದೆ….
ಅಷ್ಟೇ…!

ಅದೀಗ ಅಪರಾಧವಂತೆ…..!!

ಹೀಗೆ ಮತದ ಹುಚ್ಚು
ಹೊಳೆಗಾಗಿ ಕಿಚ್ಚು
ಹಚ್ಚಿದವರ ಎದೆಗೆ
ಅಕ್ಷರದ ಚೂರಿ ಇರಿದೆ…
ಅಷ್ಟೇ…!!

ಅದೀಗ ಅಪರಾಧವಂತೆ…!!

ಸೋಲಿನ ಸಮೀಕ್ಷೆಯಿಂದ
ದಿಕ್ಕೆಟ್ಟವರು…
ತುರ್ತು ಹೆಣದ
ರಾಜಕಾರಣಕ್ಕಿಳಿದರೆ
ಅಕ್ಷರದಿ ಕೊರಳ ಪಟ್ಟಿ ಹಿಡಿದು
ಛೀಮಾರಿ ಹಾಕಿದೆ….!!

ಅಷ್ಟೇ…!!

ಅದೀಗ ಅಪರಾಧವಂತೆ…..!!

ಈಗೀಗ ಈ ಅಪರಾಧಕ್ಕೂ
ನಾಚಿಕೆಯಾಗಿ ತಲೆ ತಗ್ಗಿಸಿ ನಿಂತಿದೆ
ನನ್ನ ಎದೆಯಂಗಳದಲ್ಲಿ…..!!
ಸತ್ತೆಗೆ ಸೆಡ್ಡು ಹೊಡೆದು
ಜಗದಂಗಳದಲ್ಲಿ………!!

ಇನ್ನಷ್ಟು ಅಪರಾಧಕ್ಕಾಗಿ…

ಹಿಡಿಯಷ್ಟು…….
ಬೇಡಿಕೆಯ ಪತ್ರ ಹಿಡಿದು…..!!”

‍ಲೇಖಕರು Admin

7 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading