ಮೂಲ : ರೂಮಿ
ಕನ್ನಡಕ್ಕೆ : ನಿವೇದಿತಾ ಎಚ್
ನೀಡಲು ನಿನಗೊಂದು ಉಡುಗೊರೆ
ಬ್ರಹ್ಮಾಂಡವನ್ನೆಲ್ಲಾ ಸುತ್ತಿ ಬಂದೆ ನಾನು
ಏಕೋ ಏನೋ
ಯಾವುದೂ ಸರಿ ಕಾಣಲಿಲ್ಲ.
ಚಿನ್ನದ ನಿಕ್ಷೇಪಕ್ಕೆ ಬೇಕೆ ಆಭರಣದ ಅಲ್ಪತೆ?
ಸಾಗರದ ಗರ್ಭಕೆ ನೀರ ನೀಡುವ ಧೈರ್ಯ ಮಾಡಲೆ?
ಪಶ್ಚಿಮದಿಂದ ಪೂರ್ವಕ್ಕೆ ಸಾಂಬಾರ ಒಯ್ಯುವ ಪೆದ್ದನಂತೆ ಗೋಚರಿಸತೊಡಗಿದ್ದೆ ನನಗೆ ನಾನೇ!
ನನ್ನ ಹೃದಯವನ್ನೋ ಆತ್ಮವನ್ನೋ ಅರ್ಪಿಸೋಣವೆಂದರೆ
ನೀನೇ ಸೂರೆಗೊಂಡಿರುವೆ!
ಅದಕ್ಕಾಗಿಯೇ ಕನ್ನಡಿಯೊಂದ ಕೊಂಡು ತಂದಿರುವೆ
ನಿನ್ನನ್ನು ಪ್ರತಿಬಿಂಬಿಸುವ ಈ ಕನ್ನಡಿ,
ಜೊತೆಗೆ
ನನ್ನ
ನೆನಪನ್ನು
ಅಸ್ತಿತ್ವವನ್ನು
ಅಸ್ಮಿತೆಯನ್ನು
ಅರುಹುತ್ತಲೇ
ತೋರುತ್ತಲೇ
ಇರುತ್ತದೆ…
0 ಪ್ರತಿಕ್ರಿಯೆಗಳು