ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ

ಸರ್ವಾಧಿಕಾರಿ….

ಶೇಷಗಿರಿ ಜೋಡಿದಾರ್


ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ.
ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು,
ಚಳಿಯ,ಬಿಳಿಯ ಚಾದರಹೊದ್ದು ಮುಲುಗಿದ ನಿಟ್ಟುಸಿರು.
ನೀರಿಗೂ ಕ್ಷಮೆಇಲ್ಲ, ಗಾಳಿಗೂ ಸುಂಕ
ತಾಪ ಇಲ್ಲಿ ಅಪರೂಪದ, ದುಬಾರಿ ಸಗಟು
ಸಹಜ ಬಾಳೇ ಅಗಿದೆ ಒಂದು ಒಗಟು,
ಹೆಪ್ಪುಗಟ್ಟಿಸಿ, ರೂಪ ಬದಲಿಸಿ
ಹರಡಿ ಪದರವಾಗಿ ಮೆರೆಯುವ
ಮೆತ್ತನೆಯ ಅಟ್ಟಹಾಸ
ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ
ಅದರಮೇಲೆ ಬೆಟ್ಟ ಓಡಿಸುವ ಒರಸೆ,
ಸಾವಕಾಶದಲ್ಲಿ ತಿರುಗಿಸುತ್ತಾನೆ
ತನ್ನ ಚೂಪು ಮೀಸೆ, ಪ್ರತಿಧ್ವನಿಸುವ ಶಂಖನಾದಲಿ
ನೀರ್ಗಲ್ಲ ಗರ್ಭಪಾತದಲಿ ಹರಿಯುವ ಹಿಮಪಾತ
ನಿಶ್ಯಭ್ದ ಡಮರುಗಕೆ ಓಗೊಡದ ಕೈಲಾಸವಾಸಿ.
ಪ್ರಾಣಿಗಳ ಸುಳಿವಿರದು ಈತನ ಪಾಳಿಯಲ್ಲಿ.
ಪಾಪ! ಅವುಗಳಿಗಾದರೂ ಆಸರೆ ಎಲ್ಲಿ?
ಗಿಡಮರಗಳು ಸೆಣಸಿ, ಸುಸ್ತಾಗಿ ಕುಸಿಯುವ ಕಣ್ಣಾ ಮುಚ್ಚಾಲೆ ಆಟ
ಘಾಸಿತ ಅಂಗಾಂಗಳ ಶಶ್ರೂಷೆಯಲಿ ನಿರತ.
ಹಸಿರುಟ್ಟ ಅನ್ನಪೂರ್ಣೆಯೇ ಕಂಗಾಲು
ಕೈಲಾಸವಾಸಿ ಹರನ ಹರಿವಿನಲ್ಲಿ
ಮಾಯಾವಿ ಶಿವ ಹೊರಬಿಡುವ ಭಂಗಿಯ ಧೂಮ
ಶಿಖರಗಳಮೇಲೆ ನರ್ತಿಸುವ ತಾಂಡವ…..
 

‍ಲೇಖಕರು G

3 January, 2015

2 Comments

  1. mmshaik

    nice..

  2. ಸುಬ್ಬಣ್ಣ ಮತ್ತೀಹಳ್ಳಿ.

    ಕ್ರೂರ ವಾಸ್ತವದ ಎಲ್ಲ ಆಯಾಮಗಳನ್ನು ತೀವ್ರತೆಯ ತೆಕ್ಕೆಯಲ್ಲಿ ಹಿಡಿದಿಟ್ಟ ಒಂದು ಸುಂದರ ಕವಿತೆ. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading