ವಿ. ಹರಿನಾಥ ಬಾಬು ಸಿರುಗುಪ್ಪ
ಅದಾಗಲೆ ಮೇಯ್ದು ಹೋಗಿದ್ದಕ್ಕೆ
ರಸ್ತೆಯ ಮೇಲೆ ಹೆಜ್ಜೆಗಳು ಇನ್ನೂ ಹಸಿಯಾಗಿವೆ
ಗರಿಕೆ ಮತ್ತೆ ಚಿಗುರುತ್ತಿದೆ
ಗಾಳಿಯಂತೆ ನಾನು
ಕೆಲಸವಿಲ್ಲದ ಅಪಾಪೋಲಿ
ಪಾಪ ರಸ್ತೆ ನನ್ನ ಜೊತೆಗಿದೆ
ಬೀಸುವ ಗಾಳಿಯ ಜೊತೆಗೆ
ನಿನ್ನ ಹೆಸರು ನನ್ನ ಉಸಿರು ಪೈಪೋಟಿಗಿಳಿದಿವೆ
ರಸ್ತೆಯ ತುಂಬಾ ರಕ್ತದ ಕಲೆಗಳು

ಹೂಗಳನ್ನು ಮತ್ತೆ ಮತ್ತೆ ಕೀಳುತ್ತಿದ್ದೆ
ಹಟಕ್ಕೆ ಬಿದ್ದು ಅರಳತೊಡಗಿದವು
ಹಾದಿ ತುಂಬಾ ಹೂವಿನ ಘಮಲು
ಅವಳ ಹೆಜ್ಜೆಯ ಮೇಲೆ
ಅವನ ಹೆಜ್ಜೆಯ ಗುರುತು
ರಸ್ತೆಗೆ ಲೆಕ್ಕ ತಪ್ಪಿ ಹೋಗಿದೆ
ಆ ಕತ್ತಲೊಳಗೆ ಅವಳು ಬೆತ್ತಲಾದಳು
ಅವನು ಬೆಳಕು ಹೊತ್ತಿಸಿದ
ಬೀದಿಗೆ ಬಿದ್ದ ಕನಸುಗಳು
ಬೇಡವೆಂದೆ; ಹಿಂಬಾಲಿಸಿದಳು!
ಬರಬಾರದೆ? ಮರೆಯಾದಳು!
ನಿಂತಿರುವೆ: ಕಿವಿಯಿರದ ಬೀದಿಯ ನಡುವೆ!!
ಸದಾ ಅವಳು ಮುಂದೆ ಮುಂದೆ
ನಾನವಳ ಹಿಂದೆ ಹಿಂದೆ
ರಸ್ತೆ ಸುರಂಗದೊಳಗೆ ತೂರಿಹೋಯ್ತು






Good lines Sir