‘ಸ್ವ್ಯಾನ್’ ಅಂಗಳದಲ್ಲಿ ವಸುಧೇಂದ್ರ ಸಂಭ್ರಮ-‘ತೇಜೋ ತುಂಗಭದ್ರಾ’ಕ್ಕೆ10

ಅದೊಂದು ಪುಟ್ಟ ಆದರೆ ಮನಸ್ಸಿನಲ್ಲಿ ಬಹುಕಾಲ ಉಳಿಯುವ ಕಾರ್ಯಕ್ರಮ.

ಪುಸ್ತಕ ಲೋಕದಲ್ಲಿ ಒಂದು ಮಾದರಿ. ಒಂದು ಪುಸ್ತಕ ರೂಪುಗೊಳ್ಳುವುದರ ಹಿಂದೆ ಎಷ್ಟೆಲ್ಲಾ ಕೈಗಳು ಕೆಲಸ ಮಾಡಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟ ಕಾರ್ಯಕ್ರಮ. ಅಲ್ಲಿ ಲೇಖಕರಿದ್ದರು, ಕರಡು ತಿದ್ದಿದವರು ಇದ್ದರು, ಪುಸ್ತಕ ಮುದ್ರಿಸಿದವರಿದ್ದರು, ಇದನ್ನು ಪ್ರಚಾರ ಮಾಡಿದವರಿದ್ದರು, ಮಾರಾಟ ಮಾಡಿದವರಿದ್ದರು.

ಅಲ್ಲಿ ಇಷ್ಟು ದಿನ ಒಂದು ಪುಸ್ತಕದ ಹಿಂದೆ ತೆರೆಮರೆಯಲ್ಲಿಯೇ ಇದ್ದುಬಿಡಬಹುದಾದ ಎಲ್ಲರೂ ಮುನ್ನೆಲೆಯಲ್ಲಿದ್ದರು.

ಇದು ವಸುಧೇಂದ್ರ ತಮ್ಮ ಪುಸ್ತಕ, ಚಾರಿತ್ರಿಕ ಕಾದಂಬರಿ – ತೇಜೋ ತುಂಗಭದ್ರಾ ದ ಹತ್ತನೆಯ ಮುದ್ರಣವನ್ನು ಸಂಭ್ರಮಿಸಿದ ರೀತಿ.

ತೇಜೋ ತುಂಗಭದ್ರಾ ಪ್ರಕಟವಾದದ್ದು ಕೋವಿಡ್ ಸಮಯದಲ್ಲಿ. ಪ್ರಕಾಶನ ಉದ್ಯಮ ಕಂಗೆಟ್ಟು ಕುಳಿತಿದ್ದಾಗ. ಆದರೆ ಅದೊಂದು ಅಡ್ಡಿ ಅಲ್ಲವೇ ಅಲ್ಲ ಎನ್ನುವಂತೆ ಆ ಎರಡು ವರ್ಷದಲ್ಲಿಯೇ ಈ ಕೃತಿ ೧೦ ಮುದ್ರಣ ಕಂಡಿತು. ಇದಕ್ಕೆ ಜೊತೆಯಾಗಿ ಕಾದಂಬರಿಯ ಇ- ಬುಕ್ ಸಹಾ ಸಾವಿರಕ್ಕೂ ಹೆಚ್ಚು ಮಾರಾಟ ಕಂಡಿತು.

ಒಬ್ಬ ಬರಹಗಾರ-ಪ್ರಕಾಶಕನಿಗೆ ಇದಕ್ಕಿಂತ ಸಂಭ್ರಮ ಇನ್ನೇನು ಬೇಕು. ಇದನ್ನು ಹಂಚಿಕೊಳ್ಳಲು ವಸುಧೇಂದ್ರ ಆಯ್ಕೆ ಮಾಡಿಕೊಂಡದ್ದು ಈ ಹತ್ತೂ ಮುದ್ರಣಗಳನ್ನು ಮಾಡಿಕೊಟ್ಟ ‘ಸ್ವ್ಯಾನ್ ಪ್ರಿಂಟರ್ಸ್’ ಆವರಣವನ್ನು. ಸ್ವ್ಯಾನ್ ಕೃಷ್ಣಮೂರ್ತಿ ಅವರ ಮುದ್ರಣದ ಅಚ್ಚುಕಟ್ಟು ಎಲ್ಲರಿಗೂ ಗೊತ್ತು.

ಹೀಗೆ ಮುದ್ರಣಾಲಯದ ಅಂಗಳದಲ್ಲಿ ನಡೆದ ಸಂಭ್ರಮದ ಪುಟ್ಟ ಝಲಕ್ ಇಲ್ಲಿದೆ-

‍ಲೇಖಕರು Admin

June 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: