ಸ್ವಾತಂತ್ರ್ಯ ಮತ್ತು ಆಯ್ಕೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

‍‍ಇದುವರೆಗೆ ಮುಕ್ತ ಕಣದ ಲೇಖನಗಳಲ್ಲಿ ಇತಿಹಾಸ, ಸಿದ್ಧಾಂತ, ಪರವಾನಗಿ, ಸ್ವಾತಂತ್ರ್ಯಗಳನ್ನು ಚರ್ಚೆ ಮಾಡಿದ್ದಾದರೂ ಏಕೆ? ಈ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡಿದ್ದೂ ಇದೆ. ನೇರವಾಗಿ ಖಾಸಗೀ ಒಡೆತನದ, ಲೈಸೆನ್ಸಿಂಗ್/ಪರವಾನಗಿ ಹೊಂದ ಬೇಕಾಗಿರುವ ತಂತ್ರಾಂಶಗಳನ್ನು ಅವಶ್ಯವಿದ್ದೆಡೆ ಕೊಂಡು ಬಳಸಿ.

ಇಲ್ಲವಾದಲ್ಲಿ ಪೈರಸಿ ಮಾಡಬೇಡಿ ಎಂದು ಎರಡು ಸಾಲುಗಳಲ್ಲಿ ಹೇಳಬಹುದಿತ್ತಲ್ಲಾ? ಕೊಡು ಕೊಳ್ಳುವ ಶಕ್ತಿ ಇಲ್ಲದ ಪಕ್ಷದಲ್ಲಿ ಫ್ರೀ/ಫ್ರೀವೇರ್/ಶೇರ್‌ವೇರ್ (Free/Freeware/Shareware) ತಂತ್ರಾಂಶಗಳಿವೆ. ನಿಮ್ಮ ಅಗತ್ಯಕ್ಕೆ ಹೊಂದುವುದನ್ನು ಬಳಸಿಕೊಳ್ಳಿ ಎನ್ನಲೂ ಬಹುದಿತ್ತು. ಆದರೆ… 

ನಾವು ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸ, ಕಲೆ ಇತ್ಯಾದಿಗಳನ್ನು ಕಲಿಯಲು ದಿನಗಳು, ವಾರಗಳು, ವರುಷಗಳನ್ನೇ ತೆಗೆದುಕೊಳ್ಳುವಾಗ ನಮ್ಮಲ್ಲಿ ಬೇರೂರಿರುವ ಪೈರಸಿಯಂತಹ ಪಿಡುಗನ್ನು ದೂರ ಮಾಡಲು, ಜಾಹೀರಾತಿಗಿಂತಲೂ ದೀರ್ಘವಾಗಿ ಈ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಮತ್ತೆ ಮತ್ತೆ ಯಾರಾದರೊಬ್ಬರು ಮಾತನಾಡಲೇ ಬೇಕಾಗುತ್ತದೆ. ಜೊತೆಗೆ ಕನ್ನಡದಲ್ಲಿ ತಂತ್ರಜ್ಞಾನ, ತಂತ್ರಾಂಶ, ಪರವಾನಗಿ, ಕಾಪಿರೈಟ್, ಹಕ್ಕುಗಳು, ಕಾನೂನಿನ ನೀತಿ ನಿಯಮಗಳು ಇವುಗಳ ಬಗ್ಗೆ ಬಳಕೆದಾರನಿಗೆ ಬೇಕಾದ ಒಂದಷ್ಟು ವಿಚಾರವಾಗಿ ಚರ್ಚೆಗಳು ಓದಲು, ಹುಡುಕಿಕೊಳ್ಳಲು ಮಾಹಿತಿ ಸಿಗುತ್ತದೆಯೇ ಹೊರತು, ಇವುಗಳ ಸಾರ್ವಜನಿಕ ಚರ್ಚೆಗೆ ವೇದಿಕೆ ಬಹಳ ಕಡಿಮೆ.

ಚರ್ಚಿಸುವವರೂ ಕಡಿಮೆ. ಕನ್ನಡ ಟೈಪಿಸಲು, ಟೈಪಿಸಿದ ಅಕ್ಷರಗಳು ಪ್ರಿಂಟ್ ಅಥವಾ ಇತ್ಯಾದಿ ಮಾದರಿಗಳಲ್ಲಿ ಬೇಕಾದ ತಕ್ಷಣ ಸಿಕ್ಕಲ್ಲಿ ಮುಗಿಯಿತು. ಡಿಜಿಟಲೀಕರಣವನ್ನು ಸಾಧಿಸಿಯೇ ಬಿಟ್ಟೆವು ಎನ್ನುವ ಸಮಾಧಾನ! ಇದು ಬದಲಾಗಬೇಕು

ತಂತ್ರಜ್ಞಾನದ ಕಲಿಕೆಯೂ ಹಾಗೆ ಮಕ್ಕಳಿಗೆ ಆಟದಷ್ಟೇ ಸುಲಭ, ಹಿರಿಯರಿಗೆ ಮತ್ತೆ ಮತ್ತೆ ಪ್ರಯತ್ನಿಸಿ ನೋಡಿದರಷ್ಟೇ ಸಾಧ್ಯ. ಕೆಲವೊಮ್ಮೆ, ಕೆಲಸ ಮುಗಿದರೆ ಸಾಕೆಂಬ ಗೊಂದಲ. ಇವುಗಳ ನಡುವೆ ನಾವು ಬಳಸುವ ತಂತ್ರಾಂಶಗಳ ಹಿನ್ನೆಲೆ, ಖಾಸಗೀತನಕ್ಕೆ/ಗೌಪ್ಯತೆ‌ಗೆ ಅದು ಕೊಡುವ ಪ್ರಾಮುಖ್ಯತೆ, ಸುರಕ್ಷತೆಗಳ ಬಗ್ಗೆ ನಾವು ತಲೆಕೆಡಿಸಿಯೇ ಕೊಳ್ಳುವುದಿಲ್ಲ. ಇಂಟರ್ನೆಟ್ ಬ್ರೌಸಿಂಗ್ ಅಥವಾ ಜಾಲಾಟಕ್ಕೆ ನಾವು ಬಳಸುವ ಬ್ರೌಸರ್ ನಿಂದ ನಮ್ಮ ದಿನ ಪ್ರಾರಂಭಗೊಳ್ಳುತ್ತದೆ. ಇಲ್ಲಿಯೇ ನಮಗೆ ೪-೫ ಆಯ್ಕೆಗಳಿವೆ.

ನಮ್ಮಲ್ಲಿ ಅನೇಕರು Mozilla Firefox, Google Chrome ಬಳಸಿದರೆ, ಸರ್ಕಾರೀ ಸಂಸ್ಥೆಗಳ, ಬ್ಯಾಂಕ್‌ಗಳ ಕೆಲವೊಂದು ವೆಬ್‌ಸೈಟ್ ತೆರೆಯಲು ಇಂದಿಗೂ ಇಂಟರ್ನೆಟ್ ಎಕ್ಸ್ಪ್ಲೋರರ್ ಬಳಸಬೇಕಿದೆ. ಇಲ್ಲಿ ಸ್ವಾತಂತ್ರ್ಯ ಮತ್ತು ಆಯ್ಕೆಗಳ ಗುದ್ದಾಟ ಪ್ರಾರಂಭ.

Firefox ಒದಗಿಸುವ ಖಾಸಗೀತನ, ಸುರಕ್ಷಿತ ಬ್ರೌಸಿಂಗ್ ‍ಇವೆಲ್ಲಕ್ಕಿಂತ ಹೆಚ್ಚಾಗಿ (ಈಗಾಗಲೇ) ಲಭ್ಯವಿರುವ ಬ್ರೌಸರ್, ಬಳಕೆದಾರ ಸ್ನೇಹಿ ಎನಿಸುವ ಮತ್ತೊಂದು UI/UX ಎಂಬ ಮುಖ್ಯ ತಾಂತ್ರಿಕ ಅಂಶ. ಎಲ್ಲರ ಕೈನಲ್ಲಿರುವ ಆಂಡ್ರಾಯ್ಡ್ ನಲ್ಲಿ ಸಿಗುವ ಗೂಗಲ್ ಕ್ರೋಮ್ ಬಳಕೆದಾರರ ಆಯ್ಕೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಇದರಿಂದಲೇ. ‍ನಾನು ಈಗಾಗಲೇ ಉಲ್ಲೇಖಿಸಿದ ಪುಸ್ತಕಗಳನ್ನು ಜಾಲಾಡಲು ಸಾಧ್ಯವಾಗಿದ್ದರೆ ನಿಮಗೆ ನಾನು ಇಲ್ಲಿ ಉಲ್ಲೇಖಿಸುತ್ತಿರುವ ಅಂಶಗಳ ಬಗ್ಗೆ ಸ್ವಲ್ಪ ಅರಿವಿರುತ್ತದೆ. ‍

ಮುಕ್ತ ಕಣದಲ್ಲಿ ನಾವು ಕೇವಲ ತಂತ್ರಾಂಶಗಳ ಬಗ್ಗೆ ಮಾತನಾಡುತ್ತಿಲ್ಲ ಎಂದಾಯಿತು. ‍ನಮ್ಮ ಒಂದಷ್ಟು ಕ್ಷಣಗಳನ್ನು ಮುಕ್ತ ಜ್ಞಾನದ ಕಡೆಗೂ ಹರಿಸೋಣ. 

Open Access, Open Educational Resource, Open Knowledge ಹೀಗೆ ಕರೋನಾದ ಕಾಲದಲ್ಲಿ ವಿಶ್ವದಾದ್ಯಂತ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಂಶೋಧಕರಿಗೆ ಲೈಬ್ರರಿಗಳ ಮೆಟ್ಟಿಲು ಹತ್ತಲು ಸಾಧ್ಯವಾಗದಿದ್ದಾಗ ಮುಕ್ತ ಮಾಹಿತಿಯ ಮಹಾಬಾಗಿಲನ್ನು ತೆಗೆದದ್ದು ವಿಶ್ವದ ಅನೇಕ ಆನ್ಲೈನ್ ಆರ್ಕೈವ್‌ಗಳು – archive.org ಎಲ್ಲದರ ಮುಂಚೂಣಿಯಲ್ಲಿದೆ.

ಡಿಜಿಟಲ್ ಲೋಕದ ಸಾಧ್ಯತೆಗಳನ್ನು ಜನರಿಗೆ ಖಾಸಗೀ ಸಂಸ್ಥೆಗಳು ಅಥವಾ ಸರ್ಕಾರಗಳಿಗಿಂತ ಮುಂಚೆಯೇ ಒದಗಿಸುವ ಶಕ್ತಿ ಹಾಗೂ ಬದ್ಧತೆ ಆನ್ಲೈನ್ ಸಮುದಾಯದ ಶಕ್ತಿಯಾದ ಇಂಟರ್ನೆಟ್ ಆರ್ಕೈವ್ ಹೊಂದಿದೆ. ‍ಇದರ ಜೊತೆಗೆ ‍ಕಾಪಿರೈಟ್ ಜೊತೆಗಿನ ದೀರ್ಘ ಹೋರಾಟ, ಪಬ್ಲಿಷರ್‌ಗಳನ್ನು ಮನವೊಲಿಸಿ ಜ್ಞಾನದ ಪ್ರಸರಣೆಗೆ ಒತ್ತುಕೊಡುವ ಬಗ್ಗೆ ಇದರ ಬ್ಲಾಗ್ ಓದಿಯೇ ತಿಳಿಯಬೇಕು. ‍‍

ಈ ಸಂದರ್ಭದಲ್ಲಿ ನಾನು ಪ್ರತಿಪಾದಿಸುವ ಸ್ವತಂತ್ರ ತಂತ್ರಾಂಶಗಳ ಬಗ್ಗೆ, ತತ್ವಜ್ಞಾನ, ಬಳಕೆ, ‍ಪಾಲ್ಗೊಳ್ಳುವಿಕೆ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಲು ಒಂದು ಸದವಕಾಶವೂ ಒದಗಿ ಬಂದಿದೆ. ಫ್ರೀ ಸಾಪ್ಟ್ವೇರ್ ಫೌಂಡೇಷನ್ ಇಂಡಿಯಾ ಹಾಗೂ ಫ್ರೀ ಸಾಫ್ಟ್ವೇರ್ ಕಮ್ಯೂನಿಟಿ ಇಂಡಿಯಾ ಆಯೋಜಿಸುತ್ತಿರುವ ಫ್ರೀ ಸಾಫ್ಟ್ವೇರ್ ಕ್ಯಾಂಪ್ ಆಸಕ್ತರಿಗೆ ಒಂದು ವೇದಿಕೆಯನ್ನು ನೀಡಲಿದೆ. ‍

‍ಈಗಾಗಲೇ ಸ್ವತಂತ್ರ ತಂತ್ರಾಂಶ ಯೋಜನೆಗಳ ಜೊತೆಗೆ ಕೆಲಸ ಮಾಡುವವರಿಗೆ ಮಾರ್ಗದರ್ಶಕರಾಗುವ ಅವಕಾಶ. ಹೊಸಬರಿಗೆ ಇದರ ಹಿಂದಿನ ತತ್ವಜ್ಞಾನ ಇತ್ಯಾದಿಗಳನ್ನು ತಿಳಿಯುವ ಅವಕಾಶ ಎರಡೂ ಇದೆ. – https://camp.fsf.org.in/ 

ನೀವೂ ಭಾಗವಹಿಸಿ. 

‍ಲೇಖಕರು ಓಂಶಿವಪ್ರಕಾಶ್

September 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: