ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಗತ…

ಸವಿತಾ ಎಸ್ ಪಿ

ದಡವು ನೀರ ಹರಿವ
ನೋಡಿ ನಿಟ್ಟುಸಿರಾಗುವುದು
ಬಲು ಸಹಜ

ತಾನು ಬಳಸಿದ ಪಾತ್ರಗಳಂತೆ
ಬದಲಾಗುವುದು
ನದಿಯ ಗುಣವದು ನೈಜ

ಅದೆಷ್ಟು ಮಾತುಗಳನು
ಒಂದು ಮೌನ ನುಂಗಿ ಹಾಕಿ
ನೀಡುವುದಿಲ್ಲವೇ ಸಜ

ಇರಲಿರಲಿ ಬಿಡಿಸದೆ
ಬಿಟ್ಟ ಮೊಗ್ಗುಗಳು
ಸಂಜೆಯ ತಂಪಿಗೆ, ಕಂಪಿಗೆ

ಆಡದೆ ಉಳಿದ ಮೌನದ
ಪಿಸುಮಾತುಗಳು
ಸಂಧ್ಯಾಕಾಲದ ಮೆಲುಕಿಗೆ..!

‍ಲೇಖಕರು Avadhi

17 June, 2021

2 Comments

  1. ಡಾ. ನಿೀ. ಗುೂ.ರಮೇಶ್

    ‘ಅವಧಿ’ ಸಮಕಾಲೀನ ತುಡಿತಗಳಿಗೆ ವಿಭಿನ್ನ ಆೋಚನೆಗಳಿಗೆ ದನಿಯಾತ್ತಿರುವುದು ಶ್ಲಾಘನೀಯ ಬೆಳವಣಿಗೆ. ಹೊಸತನದ ಈ ಹಸಿರು ಮತ್ತಷ್ಟು ಮೆೈದುಂಬಲಿ.

    ಡಾ. ನಿೀ. ಗುೂ.ರಮೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading