ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಕವಿತೆ – ಬಣ್ಣವಿಲ್ಲದ ಏಕಾಂತ!

 ಸೌಮ್ಯ ದಯಾನಂದ

ಕಮಟು ವಾಸನೆ
ಯಾವುದೋ
ನೆನಪನ್ನು ತರುತ್ತಿದೆ..!

ಅಳುವಿನದೋ
ನಗುವಿನದೋ
ಯಾಮಾರಿದ ಪ್ರೀತಿಯದ್ದೋ..?
ಉರಿದು ಹೋದ
ಕನಸಿನದ್ದೋ..?

ಅದೋ…
ಹೊಗೆಯೂ ಅಣಕಿಸಿದೆ
ಕ್ಷಣಕ್ಕೊಂದು ರೂಪ
ಅಳು-ನಗು-ಕಲ್ಪನೆ..

ಉರಿದುಳಿದ
ಬೂದಿಯೂ
ರಂಗು ತುಂಬಿದೆ
ಮುಟ್ಟಿದ ಕೈಗಳಿಗೂ
ಮೆತ್ತಿಕೊಂಡಿದೆ..!

ಬಣ್ಣವಿಲ್ಲದ
ಏಕಾಂತಕ್ಕೂ
ನವಿಲುಗರಿಯ ಹೊದಿಕೆ
ಬೆಳಗಿನ ಹಾಸಿಗೆ ಮೇಲೆ
ನಿಶೆಯ ನಿದಿರೆ..!
ಮುಂಜಾನೆ ಮುಸ್ಸಂಜೆಯ
ಸಲ್ಲಾಪ..!

‍ಲೇಖಕರು Admin

17 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading