ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮ್ಮನಾಗಬೇಕು ಎಂದುಕೊಂಡೆ

ಲಾವಣ್ಯ ಎನ್. ಕೆ

ಸುಮ್ಮನಾಗಬೇಕು ಎಂದುಕೊಂಡೆ.
ನನ್ನದಲ್ಲದ ಬದುಕಿಗೆ, ನನ್ನದಲ್ಲದ ಪ್ರೀತಿಗೆ,
ನನ್ನದಲ್ಲದ ಜಗತ್ತಿಗೆ ಹೋರಾಡಿದರೂ
ಗೆಲುವೂ ಸಿಗದೆ, ಸೋಲೂ ಒಪ್ಪದೆ
ಚಡಪಡಿಕೆಯಲ್ಲೇ ದಿನ ಮುಗಿಸಿ,ಕಣ್ಣೀರಷ್ಟೆ
ನನ್ನ ಪಾಲಿಗೆ ಉಳಿದಾಗ
ಸುಮ್ಮನಾಗಬೇಕು ಎಂದುಕೊಂಡೆ.

ಮಾತು ನಿಲ್ಲಿಸಿದರೆ ಮನ ಶಾಂತವಾಗಬಹುದೇನೋ?
ಮಾತೂ ನಿಲ್ಲಿಸಿದೆ, ಮನಸ್ಸು ಕಿರುಚಾಡಿತು,
ಕನಸ ಭಾಷೆ ಬದಲಿಸಬೇಕೆನೋ?
ಯೋಚನೆಗಳ ಅಲೆಯೇ ನಿಲ್ಲದಾಯಿತು
ಪ್ರೀತಿಯ ರಭಸ ಹಿಡಿದು ನಿಲ್ಲಿಸಬೇಕೇನೋ?
ಶುದ್ಧ ಭಾವನೆಗಳ ಮಹಾನದಿಯೇ ಹರಿದಾಗ
ಸುಮ್ಮನಾಗಬೇಕು ಎಂದುಕೊಂಡೆ

ಮನಸ್ಸೂ ತಿಳಿಯಾಗಿ, ಯೋಚನೆಗಳೂ ಶಾಂತವಾಗಿ
ಪ್ರೀತಿಯ ಹರಿವೂ ಒಂದು ಕಡೆ ನಿಂತುಬಿಟ್ಟಿದೆ.
ಅಲೆಗಳ ಸಪ್ಪಳವೂ ನನ್ನ ಕದಲಿಸುತ್ತಿಲ್ಲ,
ರಾತ್ರಿ ಯ ರಸ್ತೆಗಳ ಮೌನವೂ ನನ್ನ ಕೆಣಕುತ್ತಿಲ್ಲ,
ಒಂದೇ ಸಮನೆ ಸುರಿಯುವ ಮಳೆ ನೆನಪನ್ನೂ ತರುತ್ತಿಲ್ಲ,
ಆದರೂ ಹೂವಿನ ಹಂಗು, ಹಕ್ಕಿಯ ಹಸಿರ ಹಾಡು
ದೂರದಲ್ಲಿ ಕಾಣುವ ಇನಿತೇ ಬೆಳಕು ನನ್ನ ನನಗೇ
ಉಳಿಸಿಕೊಟ್ಟಿದೆ

ಎನಿಸಿಕೊಂಡಂತೆ ಸುಮ್ಮನಾಗಿದ್ದೇನೆನೋ
ಇನ್ನೂ ಸತ್ತಿಲ್ಲವೆಂಬ ಭರವಸೆ ಇದೆ.

‍ಲೇಖಕರು Avadhi

9 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading