‘ಕಾಪಿರೈಟ್’‌ ಸ್ವಯಂಚಾಲಿತವಾದದ್ದು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

ಈ ಲೇಖನ ನಾನು ಬರೆಯುತ್ತಿರುವ “ಕ್ರಿಯೇಟೀವ್ ಕಾಮನ್ಸ್ ಕನ್ನಡ ೧೦೧” ಪುಸ್ತಕದ ಒಂದು ಭಾಗವಾಗಿದ್ದು, ‍Creative Commons Attribution 4.0 International License‌ ಅಡಿ ಲಭ್ಯವಿದೆ.

Creative Commons Kannada 101 by Omshivaprakash is licensed under a Creative Commons Attribution 4.0 International License, except where otherwise noted.

ನೀವು ಫೋಟೋ ತೆಗೆದಾಗ, ವಿಡಿಯೋ ಅಥವಾ ಸಂಗೀತ ಸೃಷ್ಟಿಸಿದಾಗ ಅದು ನಿಮ್ಮ ಸೃಜನಶೀಲ ಕೆಲಸವಾಗುತ್ತದೆ ಮತ್ತು ಅದು ನಿಮ್ಮ ಒಡೆತನದಲ್ಲಿರುತ್ತದೆ. ನಿಮಗೆ ಅದರ ಮೇಲೆ ಹಕ್ಕು ಸಾಧಿಸಲು ಕಾಪಿರೈಟ್/ಕೃತಿಸ್ವಾಮ್ಯ ಕೂಡ ಇರುತ್ತದೆ.

ಅಂದರೆ ನೀವು ಅದನ್ನು ಬಳಸುವುದರ ಬಗ್ಗೆ, ಅದನ್ನು ಬಳಸುವವರು ಹೇಗೆ ಬಳಸಬಹುದ್, ಅದನ್ನು ಕಾಪಿ ಮಾಡಬಹುದೇ ಮತ್ತು ಅದನ್ನು ಇತರರೊಡನೆ ಹಂ‌ಚಬಹುದೇ? ಅದನ್ನು ಬಳಸಿ ಹೊಸ ಮರುಸೃಷ್ಟಿ ಮಾಡಬಹುದೇ ಎಂಬುದನ್ನು ನಿರ್ಧರಿಸಬಹುದು. ಕ್ರಿಯೇಟೀವ್ ಕಾಮನ್ಸ್ ನಿಮಗೆ ಅಂತಹ ಒಂದು ಕಾನೂನಾತ್ಮಕ ಸಾಧ್ಯತೆಯನ್ನು ತನ್ನ ಪರವಾನಗಿಗಳ ಸಾಧನದ ಮೂಲಕ ಒದಗಿಸಿಕೊಡುತ್ತದೆ. 

ನೀವು ಸೃಷ್ಟಿಸಿದ ಸೃಜನಶೀಲ/ಕ್ರಿಯೇಟೀವ್ ಕಲೆ, ಸಾಹಿತ್ಯ ಇತ್ಯಾದಿಗಳನ್ನು, ತಂತ್ರಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ಸಂಶೋಧನೆ, ಬರಹಗಳು ಇತ್ಯಾದಿ, ಕಂಪ್ಯೂಟರ್ ತಂತ್ರಾಂಶಗಳ ಆಕರಗಳು (source code) ಕೂಡ ಮುಕ್ತವಾಗಿ ಎಲ್ಲರ ಬಳಕೆಗೆ, ಹಂಚಿಕೆಗೆ, ಮರುಸೃಷ್ಟಿಗೆ ಬಳಸುವುದು ಸಾಧ್ಯ.

ಸಾಫ್ಟ್ವೇರ್ ಗಳಿಗೆ ಜಿ.ಪಿ.ಎಲ್ (ಜನರಲ್ ಪಬ್ಲಿಕ್ ಲೈಸೆ‌ನ್ಸ್)  ಅಪಾಚೆ, ಎಂಐತಿ ಲೈಸೆನ್ಸ್ ಆಯ್ಕೆಗಳಿದ್ದರೆ, ಮಿಕ್ಕವಕ್ಕೆ ಓಎಫ್ಡಿಎಲ್, ಕ್ರಿಯೇಟೀವ್ ಕಾಮನ್ಸ್‌ (https://creativecommons.org) ಪರವಾನಗಿಗಳು ಬಹಳ ಸಹಕಾರಿ. ಇಂದು ಲಕ್ಷಾಂತರ ಕ್ರಿಯೇಟೀವ್‌ಗಳು Wikipedia, YouTube, Archive.org, Vimeo, Soundcloud, Flickr, Bandcamp, Boundless, Jamendo, TED, Musopen, Free Music Archive, Freesound ‌ ಮುಂತಾದೆಡೆ ಸಾರ್ವಜನಿಕ ಬಳಕೆಗೆ ಲಭ್ಯವಿವೆ. 

ಈ ಕೆಲವು ಮುಕ್ತ ಸಂಪನ್ಮೂಲ ವೇದಿಕೆಗಳಲ್ಲಿ ಕನ್ನಡದ ಮಾಹಿತಿಯನ್ನೂ ಒಟ್ಟುಗೂಡಿಸಿದ ಕೆಲವು ಯೋಜನೆಗಳನ್ನು ಹುಟ್ಟು ಹಾಕಿದರ ಹಿಂದಿನ ‍ ಸ್ಪೂರ್ತಿಗೆ ಇವುಗಳು ಬಹುಮಟ್ಟಿಗೆ ಕಾರಣ ಎಂದರೆ ಉತ್ಪ್ರೇಕ್ಷೆಯಲ್ಲ. 

***

ಮ‍ನುಷ್ಯ ತನ್ನ ಜ್ಞಾನವನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಾಡುಗಳು, ಕಥೆಗಳು, ಮಹಾಕಾವ್ಯಗಳು ಇತ್ಯಾದಿಗಳ ಮೂಲಕ ಹಂಚುತ್ತಲೇ ಬಂದಿದ್ದಾನೆ. ‍

ತನ್ನ ಜ್ಞಾನವನ್ನು ಒಂದಕ್ಕಿಂತ ಹೆಚ್ಚು ಪ್ರತಿಗಳಾಗಿ ಮಾಡುವ ಯಾಂತ್ರಿಕ ಸಿದ್ಧಿ ‍ಸಾಧಿಸಿದ ದಿನದಿಂದ, ಜ್ಞಾನದ ಹಂಚಿಕೆಯೂ ಹಣ ಮಾಡಿಕೊಡಬಹುದಾದ ದುರಾಸೆಯ ಹಾದಿಯಾಯಿತು. ಈ ಕೈಗಾರಿಕಾ ಕ್ರಾಂತಿ, ಜ್ಞಾನದ ಮೇಲೆ ಏಕಸ್ವಾಮ್ಯವನ್ನು ಹೊಂದಲು ಬಯಸಿದವರ, ಪ್ರಭಾವಶಾಲಿಗಳ, ಕರ್ತೃವಿನ ಹಿತಾಸಕ್ತಿಯನ್ನು ಕಾಯಲು ‍ ಕೃತಿಸ್ವಾಮ್ಯಗಳ ಸುತ್ತ ಕಾನೂನುಗಳನ್ನು ಹೆಣೆಯಲಾಯಿತು. 

ಮುದ್ರಣ ಯಂತ್ರಗಳ ಮಾಲೀಕರಿಗೆ ಪುಸ್ತಕಗಳ ಲಭ್ಯತೆಯನ್ನು ಹಣಗಳಿಕೆಯ ತಂತ್ರಗಳಿಂದ ಹಾಗೂ ಏಕಸ್ವಾಮ್ಯತೆಯ ಪರದೆಯ ಮೂಲಕ ನಿಯಂತ್ರಿಸಲು ಈ ಕಾನೂನುಗಳ ಮೂಲಕ ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ಪುಸ್ತಕಗಳು ಸಮಾಜದ ಆಯ್ಧ ಸ್ಥರ‌ದ ಗುಂಪುಗಳಿಗೆ ಮಾತ್ರ ದೊರೆಯುತ್ತಿದ್ದವು

ಅದೇ ರೀತಿ ಸಾಹಿತ್ಯಿಕ, ನಾಟಕೀಯ, ಸಂಗೀತ ಮತ್ತು ಕಲಾತ್ಮಕ ಕೃತಿಗಳು ಇತ್ಯಾದಿಗಳನ್ನು ಸಾಮಾನ್ಯವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸುವ ಮೊದಲು, ಸೃಷ್ಟಿಕರ್ತನ ಕೆಲಸ ಹಾಗೂ ಅದರ ಮೇಲಿನ ಹಕ್ಕನ್ನು ವಿವಿಧ‍ ಕಾಲಘಟ್ಟದವರೆಗೆ ರಕ್ಷಿಸುತ್ತದೆ.

ಕೃತಿಸ್ವಾಮ್ಯ ಕಾನೂನು (ಕಾಪಿರೈಟ್ ಲಾ) ಸೃಷ್ಟಿಕರ್ತನಿಗೆ ಕೆಲವು ವಿಶೇಷ ಹಕ್ಕುಗಳನ್ನು ನೀಡಿ ಇತರರು ತಮ್ಮ ಕೃತಿಗಳ ಬಳಕೆಯನ್ನು ಈ ಕೆಳಕಂಡಂತೆ ತಡೆಯುತ್ತವೆ:

  1. ನಕಲು ಮಾಡುವಂತಿಲ್ಲ ,
  2. ನಿಶ್ಚಿತ ಕಾಲಾವಧಿಯವರೆಗೆ ಮರುರಚನೆಗೆ ಬಳಸುವಂತಿಲ್ಲ.

ಇವು ಯಾವುದೇ ಸೃಷ್ಟಿಯನ್ನು ಮುಕ್ತವಾಗಿ ನಕಲಿಸಲು/ಹಂಚಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ.

—  ಈ ಲೇಖನವನ್ನು ನೀವು ಮೇಲೆ ನೀಡಿರುವ ಪರವಾನಗಿ ಅಡಿ ಓದಲು,  ಇತರರೊಡನೆ ಹಂಚಿಕೊಳ್ಳಲು ಅವಕಾಶವಿದೆ. ಇದಕ್ಕೆ ಹೆಚ್ಚಿನ ಮಾಹಿತಿ ಸೇರಿಸಿ ರೀಮಿಕ್ಸ್ ಕೂಡ ಮಾಡಬಹುದಾಗಿದೆ. ನೆನಪಿರಲಿ: ಮೂಲ ಲೇಖನ, ಕರ್ತೃ, ಮೂಲ ಪರವಾನಗಿಯ ಮಾಹಿತಿಯನ್ನು ಜೊತೆಗೆ ಹಂಚಿಕೊಳ್ಳುವ ಹಾಗೂ ನಿಮ್ಮ ಹೊಸ ಸೃಷ್ಟಿ‌ಯು ‍ಮೂಲದೊಂದಿಗೆ ‍ಹೊಂದಿಕೆ ಆಗಬಹುದಾದ ಪರವಾನಗಿಯೊಂದಿಗೆ ದೊರೆಯುವಂತೆ ಮಾಡುವ ಬಾದ್ಯತೆ ನಿಮ್ಮದಾಗಿರುತ್ತದೆ. 

‍ಲೇಖಕರು ಓಂಶಿವಪ್ರಕಾಶ್

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: