ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಡುಗಾಡಲ್ಲಿ ಸುಳಿದಾಡುವ ತಂಗಾಳಿ…

ಸುರೇಶ ಎಲ್ ರಾಜಮಾನೆ

ಜಾರಿಹೋಗುವ ಕಣ್ಣ ಹನಿಗಳು
ಹೆಪ್ಪುಗಟ್ಟಿವೆ ಕಣ್ಣೊಳಗೆ
ಮುಪ್ಪಿನ ಭಯಕ್ಕಲ್ಲ
ಉಪ್ಪಿನ ಋಣಕ್ಕೆ ಮತ್ತದರ ಗುಣಕ್ಕೆ
ಹೊಂದಿಕೊಳ್ಳಲಾಗದೆ..

ಮುಳ್ಳಿನ ಮೇಲೆ ಹೆಜ್ಜೆಯಿಟ್ಟು
ನಗುವಿನ ಜೋಪಡಿ ಕಟ್ಟಿಕೊಳ್ಳಲು
ತುಂಬಾ ಕಷ್ಟವಾಗುತ್ತಿದ್ದರೂ
ನಗುವ ಮನಸ್ಸಾಗಿದ್ದರಿಂದ
ನೋವು ಸಾವಿಗೆ ಶರಣಾಗಿದೆ..

ಹೆಚ್ಚುಕಡಿಮೆ ಎಲ್ಲರ ಬದುಕೂ
ಹೀಗೆ ಇರುವಾಗ ಅವರೆಲ್ಲರಿಗಿಂತ
ಹೆಚ್ಚೆಂದರೆ ನಾನು ಗಂಟಲು ಕುಯ್ದುಕೊಂಡು
ಸ್ವರಗಳ ಹೊರಡಿಸೊ ಶರತ್ತನ್ನು
ತೆಗೆದುಕೊಂಡಿದ್ದೇನೆ ಅಷ್ಟೇ..

ಗೋಡೆಗೆ ಹೊಡೆಯುವ ಮೊಳೆಯನ್ನು
ಎದೆಗೂಡಿಗೆ ಹೊಡೆದು
ಮತ್ತದೆ ಹಳೆಯ ಪ್ರೇಮನ್ನು
ನೇತುಹಾಕುತ್ತಿದ್ದಾರೆ
ಅಲ್ಲಿ ಭಾವವೂ ಇಲ್ಲ ಭಾವಚಿತ್ರವೂ ಇಲ್ಲ..

ವಾಸ್ತವದ ಕಣ್ಣುಕಟ್ಟಿ
ಸಾವನ್ನು ಸಂತೆಯೊಳಗೆ ಆಡಲು ಬಿಟ್ಟು
ವ್ಯಾಪಾರಕ್ಕಿಳಿದಿದ್ದಾರೆ
ಖರಿದಿಸಲು ಮತ್ತದೆ ಕಣ್ಣಾಮುಚ್ಚಾಲೆ
ಆಟವನ್ನೆ ಆಡುವ ಹುನ್ನಾರ..

ಸರಿದುಹೋಗಲಿ ಈ ಸಂಚಿನ
ಎದೆಯಲಿ ಮಂಚ ಹತ್ತಿ ಮಲಗಿರುವ
ದ್ವೇಷ, ಕಪಟ, ಸಂಶಯಗಳು
ಆಸೆಗಳಿಗೆ ಭಾಷೆ ಬಾರದಿದ್ದರೂ
ಭಾವದ ಅರಿವಿರುತ್ತದೆ..

ಜಗವಿದು ಜೀವದ ಜೀವನದ ಮೊಗದಲ್ಲಿನ
ನಗೆಯನ್ನು ಬಗೆ ಬಗೆಯಾಗಿ ಬಳಸಿಕೊಂಡು
ಯುಗಯುಗಗಳನ್ನೆ ಕೊಲ್ಲುವ ಕ್ರೂರಿ
ಲಗುಬಗೆಯ ನಡಿಗೆಯಲಿ
ಎಡವಲು ಅಡ್ಡಗಾಲು ಕೂಡಾ..

‍ಲೇಖಕರು Admin

29 July, 2022

6 Comments

  1. prathibha nandakumar

    “ಗೋಡೆಗೆ ಹೊಡೆಯುವ ಮೊಳೆಯನ್ನು
    ಎದೆಗೂಡಿಗೆ ಹೊಡೆದು”

    ಚೆನ್ನಾಗಿದೆ ಕವನ

    • Suresh

      ಥ್ಯಾಂಕ್ಯು ಸೋ ಮಚ್ ಮೆಡಮ್ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ.

  2. GEETHA K S

    ITHICHINA VASTHU STHITIGE HONDUVA MARMIKAVADA SALUGALU

    • Suresh

      ತುಂಬಾ ಧನ್ಯವಾದಗಳು ❤

  3. Jahan Ara Kolur

    ದುಃಖದ ನಾನಾ ರೂಪಗಳಿಗೆ ನಗುವೊಂದೇ ಮುಖವಾಗಿದೆ.
    ದುಃಖದ ಕ್ರೂರತನ ಕೊನೆಯಾಗಿ ಜಗದಲ್ಲಿ ಮನದಲ್ಲಿ ಶಾಂತಿ ನೆಲೆಸಲಿ

    • Suresh

      ಥ್ಯಾಂಕ್ಯು ತಂಗಾಳಿಯನ್ನು ಓದಿ ಆಶ್ವಾಧಿಸಿದ್ದಕ್ಕೆ ❤

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading