ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಿಬಿರು' ಮತ್ತು 'ಒಂದಷ್ಟು ಪ್ರೀತಿಗೆ' ಬಗ್ಗೆ ಒಂದಿಷ್ಟು

ಡಾ.ವಿನಯಾ ಎ ಎಸ್

ಶರತ್ ಚಕ್ರವರ್ತಿಯವರ “ಸಿಬಿರು “ಕವನ ಸಂಕಲನ


ಶರತ್ ಚಕ್ರವರ್ತಿಯವರು ಒಳ್ಳೆಯ ಕಥೆಗಾರರಾಗುತ್ತಾರೆ ಎಂದು ನನ್ನ ಅನಿಸಿಕೆ .ಇನ್ನೂ ಏಕೆ ಬರೆಯುತ್ತಿಲ್ಲ ? ಎಂದು ಮನಸಿನಲ್ಲಿ ಪ್ರಶ್ನೆಯೂ .. ಬರೆಯುವ ಶಕ್ತಿಯಿರುವ ಯಾರೂ ಪೆನ್ನು ಕೆಳಗಿಡಬಾರದು ಇದು ಈ ಕವಿಗೆ ನನ್ನ ಮಾತು . ಶರತ್ ಚಕ್ರವರ್ತಿಯವರ “ಸಿಬಿರು “ಕವನ ಸಂಕಲನವನ್ನು ಓದುವ ಭಾಗ್ಯ ಸಿಕ್ಕಿ ಎರಡು ತಿಂಗಳಾಯಿತು … ಓದುವಾಗಲೇ ಅದರ ಬಗ್ಗೆ ಒಂದೆರಡು ಮಾತು ನಿಮ್ಮಲ್ಲಿ ಹಂಚಿ ಕೊಳ್ಳುವಾಸೆಯಿತ್ತು . ಇತ್ತೀಚೆಗೆ ನಾನು ಓದಿದ ಕವನ ಸಂಕಲನಗಳಲ್ಲಿ ಪ್ರ ಭುದ್ದ ಬರಹವುಳ್ಳ ಪುಸ್ತಕವಿದು ,ಈ ಕವನದ ಅಳ ವಿಸ್ತಾರಗಳನ್ನು ಪೂರ್ಣ ಓದಿಯೇ ಗ್ರಹಿಸಲು ಸಾಧ್ಯ … ಕವನ ಮನದಲ್ಲಿ ಉಳಿಯ ಬೇಕಾದರೆ ಅದು ಕಾಡಬೇಕು ಹಾಗಾದಾಗ ಮಾತ್ರ ,ನವಿರಾದ ಪ್ರೇಮ ಗೀತೆಯ ಹೊರತೂ ಎದೆಯಲ್ಲಿ ಉಳಿಯಬಲ್ಲಂತದು .
ಹಾಗೆ ಕಾಡಿದ ಕವನಗಳಲ್ಲಿ ”ಕೋಡು ಮುರಿದ ಗೂಳಿ “ಮೊದಲನೆಯದು ಗಂಡಸಿನ ದಬ್ಬಾಳಿಕೆ ಮುಗಿದು ಹೆಣ್ಣಿನ ಕ್ಷಮೆ ಪ್ರೀತಿ ಕಾಣುವಾಗ ಮನೆ ಉಳಿದು ಕತೆ ಬರೆದುಕೊಂಡು ಸಮಾಜದ ಚಿತ್ರವಾಗಿ ಕಣ್ಣೆದುರು  ನಿಲ್ಲುವ ಸಾಲುಗಳು ಮನಸ್ಸನ್ನು ಸ್ತಬ್ಧಗೊಳಿಸಿ ಬದುಕು ಹೀಗೆಯೂ ಕಾಡುತ್ತದೆ ಅನ್ನಿಸಿ ಮತ್ತೆ ಪುನಃ ಓದಿಸಿಕೊಂಡಿತು . ಅನೇಕ ಕವನಗಳು ಪ್ರಕ್ಶುಭ್ದ ಮನಸ್ಥಿತಿಯಲ್ಲಿ ಬರೆದನ್ತವು ಅನ್ನಿಸಿತು.ನಾನೇನೂ ಅಲ್ಲ .ಆದರೆ ಬರೆದು ಹಾಕಿದ್ದೇನೆ ಎನ್ನುವಲ್ಲೂ ಅನಿಸಿದ್ದನ್ನು ಹೇಳಬಲ್ಲ ಗಟ್ಟಿಯಾದ ದಿಟ್ಟವಾದ ಕವನಗಳು ಮತ್ತು ಅದರ ಸ್ಪಷ್ಟತೆ ಮೆಚ್ಚುಗೆ ಪಡೆಯುತ್ತದೆ . ಇದು ಶರತ್ ರ ವಿಶೇಷ ಗುಣ ,ಕವಿ ಕಂಡದ್ದನ್ನ ಕಾವ್ಯವಾಗಿಸಲು ಹೊರಟ ರೀತಿಯೇ ಸೊಗಸು ತುಂಬಿದೆ ಪುಟಗಳಿಗೆ … ಹಿತವಾಗಿ ..
“ಅಂಗಾಲಿಗೆ ಚುಚ್ಚಿ ಒಳಗೇ ಮುರಿದ
ಮುಳ್ಳಿನಂತೆ ಹೆಜ್ಜೆ ಹೆಜ್ಜೆಗೆ ಚುಯ್ ಗುಡಿಸಿ …
ಕಾಡುವ ಅವಳ ನೆನಪುಗಳು …..
ಕಡೆಸಾಲಿನಲ್ಲಿ ಹೃದಯದಲ್ಲಿ ಪ್ರೀತಿ ಹುಟ್ಟಿದ ಲಹರಿಯ ಅಲೆಯನ್ನ ದುಗುಡ ಹೊತ್ತ ಕೊನೆ ಸಾಲುಗಲೆಂದು ಹೆಸರಿಸುತ್ತಾ ಕವಿ ಹೊರಡುತ್ತಾನೆ .”ಧ್ಯಾನದಲಿ ಕೂತಾಗ ಎದೆಯೊಡೆದು ಹೊರಬರದ ಕವಿತೆಯನ್ನ ದೂರುತ್ತಾ “ಮನಸಾ ಮನಸು ಮಾಡಿದರೆ ಮತ್ತೊಂದು ಕನಸು ,ಹಗಲುಗನಸು “ಎನ್ನುತ್ತಾ .. ತರ್ಕಕ್ಕೀಡು ಮಾಡದೇ ಹೊರಡುವ ಒಪ್ಪುವ ಕವನ “ಸಿಬಿರು “ಸಂಕಲನ . ಸಿಬಿರಿನ ಒಗರು ದಟ್ಟವಾಗಿ ನಿರ್ಧಿಷ್ಟವಾಗಿ ಅಲ್ಲಲ್ಲಿ ಹೇಳಿಕೊಳ್ಳಬಹುದಾದ ತನ್ನದೇ ಅದ ನಿಕರ ಭಾವನೆಗಳನ್ನ ಒತ್ತು ಕೊಟ್ಟು ಹೇಳುತ್ತದೆ . ಸ್ವಂತಿಕೆಯ ಸೊಗಸಿನಲ್ಲಿ ಅರಳಿಕೊಂಡ ಕವನಗಳಲ್ಲಿ “ಅವ್ವ “”ತ್ರಿಶಂಕು “”ಹೇಳಲೇ ಬೇಕೆ  ಕಾರಣ “”ನೀನು ಯಾರು “”ನಿರಂತರ “”ಸಿಬಿರು “”ಸ್ವರೂಪ “”ಬೆಟ್ಟದ ಹೂ ಬೇಕೆನ್ದವಳು ನೀನೇ ಅಲ್ಲವೇ ” ಕವನಗಳು ಮತ್ತೆ ಮತ್ತೆ ಓದಿಸಿ ಕೊಳ್ಳುತ್ತವೆ .
ಅಬ್ಬರಿಸಿದೆ ನಿರ್ಜೀವಾಕೃತಿ
ಸತ್ತ ಮೇಲೂ ಬದುಕ ಬೇಕಂತೆ
ಸತ್ತರೂ ಹುಸಿ ಉಸಿರಾಡುವವರ
ಅಡ್ಡಾಟವೇ ಊರ ತುಂಬಾ
ಕವನದ ಅಳಕ್ಕೆ ವೈವಿಧ್ಯಗಳ ಅಗತ್ಯ ಉಂಟೇ ? ಕವನಗಳಿಗೆ ವೈಯುಕ್ತಿಕ ಅಳತೆಗಳ ಮಾಪನವಿದೆಯೇ ? ಕವಿಯ ಅಂತರಾತ್ಮ ಉಸುರುತ್ತಿರುವ ಪ್ರತಿ ಭಾವನೆಗಳು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಷ್ಟೇ ಸ್ಪಷ್ಟವಾಗಿ ಮತ್ತು ಎಲ್ಲೆಲ್ಲಿಯೂ ‘ಅನ್ವೇಷಣದ ‘ನೋವನ್ನು ಒತ್ತಿ ಒತ್ತಿ ಹೇಳುತ್ತದೆ ಸಮಾಜದ ಪ್ರತಿ ತಿರುವಿನಲ್ಲೂ ಕಾಣಸಿಗುವ ಮನಸುಗಳ ಚಿತ್ರ ಬಿಡಿಸಿ ಕವನಗಳು ಸಮಾಜದ್ದೇ ಕ್ರೌರ್ಯದ ಕಥೆ ಹೇಳುತ್ತವೆ .”ಅವ್ವನ ಸೀರೆ “ಯಂತೂ ಕವನವಾಗಿ ಉಳಿಯದೇ ಕಣ್ಣೀರುಕ್ಕಿಸಿತು ..
“ಒಂದೆರಡು ಸೀರೆ ಮೈ ಮೇಲೆ ಬಿಟ್ಟರು ಉಳಿದ ಸೀರೆಗೆ ಕುಸ್ತಿಗೆ ಬಿದ್ದರು “ಎನ್ನುವಾಗ ಜೀವಿತಾವಧಿ ಮುಗಿದು ನೀಲಿ ಕೌದಿ  ಹೊದ್ದು ಕೂತ ಮಗನ ಕಣ್ಣ ಹನಿಗಳು ಹನಿಸುತ್ತವೆ ಮನಸನ್ನ … ಸಮಾಜದ ಒರಟು ಭಾವ ಕಂಗೆಡಿಸುತ್ತದೆ . ಶರತ್ ಚಕ್ರವರ್ತಿಯವರು ಬರೆಯುವ ಛಾತಿ ಉಳ್ಳವರು ಅದಕ್ಕೆ ಬೇಕಾದ ಬಲ ಛಲ ಎರಡೂ ಉಳ್ಳವರು,ಎದ್ದು ಕಾಣುವ ಸಮಾಜದತ್ತ ನೆಟ್ಟ ದೃಷ್ಟಿ  ಬರಹದಲ್ಲಿ ಕಾಣಿಸಿ ಒಂದು ನಿಮಿಷವೂ ಬಿಡದೇ ಬರೆದು ಏಕೆ ಒಳ್ಳೆಯ ಬರಹಗಳನ್ನ ಲೇಖನ ಕಥೆಗಳನ್ನ ಕೊಡಲಿ ,ಓದುಗರಿಗೆ ಹಬ್ಬತರಲಿ ಎನ್ನುವುದೇ ನನ್ನ ಆಶಯ . ಸುಂದರ ಬರಹ ಭವಿಷ್ಯಕ್ಕೆ ಶುಭ ಹಾರೈಕೆ .

ರಾಜೇಂದ್ರ ಪ್ರಸಾದ್ ಜೀ ಯವರ “ಒಂದಷ್ಟು ಪ್ರೀತಿಗೆ “


ಕವನದ ದಿನ ಬರೆಯಬೇಕಾದ್ದು ನಮಗಿಷ್ಟವಾದ ಕವನಗಳ ಬಗ್ಗೆ ,ಇತ್ತಿಚೆಗಷ್ಟೇ ಓದಿದ ರಾಜೇಂದ್ರ ಪ್ರಸಾದ್ ಜೀ ಯವರ “ಒಂದಷ್ಟು ಪ್ರೀತಿಗೆ “ಸುಂದರವಾಗಿ ಮೂಡಿ ಬಂದಿರುವ ಕವನದ ಹೊತ್ತಿಗೆ. ನಾನು ಕವನ ವಿಮರ್ಶೆ ಮಾಡುವಷ್ಟು ಬುದ್ದಿವಂತಳಲ್ಲ ಅದೂ ಅಲ್ಲದೇ ಕನ್ನಡ ಸಾಹಿತ್ಯ ಜ್ಞಾನವೂ ಕಡಿಮೆ ಒಳ್ಳೆ ಓದುಗಳು ಹೌದು ಅನಿಸಿದ್ದನ್ನು ಹೇಳಬಲ್ಲೆ ..

ರಾಜೇಂದ್ರ ಜೀ ನಿಮ್ಮ ಪುಸ್ತಕದ ಬಗ್ಗೆ ಹೇಳಲೇ,
”ಒಂದಷ್ಟು ಪ್ರೀತಿಗೆ “ಪುಸ್ತಕ ಬರೆದವರು ‘ರಾಜೇಂದ್ರ ಪ್ರಸಾದ್’
ಪ್ರೀತಿ ಬಗ್ಗೆ ಬರೆಯುತ್ತಾ ಪ್ರೀತಿ  ಪ್ರೇಮ ಕನವರಿಕೆಗಳ ದಾಟಿ ಪ್ರಕೃತಿ ಧ್ಯಾನ ನಗ್ನತೆಗಳ ಮುಟ್ಟುತ್ತಾ ಬದುಕ ಸವಿ ಅಂತರಂಗದ ಚಿಲುಮೆಯನ್ನ ಸರ್ರನೆ ಉಕ್ಕಿಸಿ ತಾಳು ಮತ್ತೊಮ್ಮೆ ಪ್ರಿತಿಸಿಬರುತ್ತೇನೆ ಅನಿಸಿದ ಪುಟಗಳಿವು ಯಾವುದನ್ನ ಹೇಳಲಿ ?ಎಲ್ಲಾ ಕವನಗಳೂ ಪ್ರಭುದ್ದ ಸುಂದರ ,ಕವನದ ಪುಸ್ತಕ ಸೇರಿದ ದಿನವೇ ಗೆಳೆಯರೊಬ್ಬರಿಗೆ ಅಬ್ಬಾ ಎಷ್ಟು ಚೆನ್ನಾಗಿ ಬರೀತಾರೆ ಗೊತ್ತಾ ಅಂದಿದ್ದೆ ಆಮೇಲೆ ಬಹಳ ಸಲ ಓದಿದ್ದೇನೆ ,ಕವನದ ಪೂರ್ಣ ಹೂರನ ಗೊತ್ತಿಲ್ಲದೇ ಅದ್ರ ಅಂತರಾಳದ ಬಗ್ಗೆ ಕೆದುಕುವ ಹಕ್ಕಿರೋಲ್ಲ ಅದರೂ ನಮ್ಮ ಮನಸಿಗೆ ಅರ್ಥವಾದ ಹಾಗೆ ವಿಮರ್ಶಿಸಿ ಅರ್ಥ ಮಾಡಿಕೊಳ್ಳುವ ಸ್ವಾತಂತ್ರ್ಯ ಸಂತಸ ತರುತ್ತದೆ ,ಗದ್ಯದ ಹಾಗೆ ತನ್ನ ತಾನೇ ತೆರೆದು ಕೊಳ್ಳದ ಈ ಕವನ ಸಿರಿ ಪ್ರೀತಿ ಸಾಂಗತ್ಯ ಕನವರಿಕೆ ವಿರಹಗಳ ಚೆಲುವನ್ನ ನೂರ್ಮಡಿಯಾಗಿಸುತ್ತದೆ.
ರಾಜೇಂದ್ರರ ಎರಡೂ ಪುಸ್ತಕಗಳು ಈ ಎರಡು ತಿಂಗಳಲ್ಲಿ ತುಂಬಾ ಮತಾಡಿಸಿಬಿಟ್ಟವು ಅದರಲ್ಲಿ ತುಂಬಾ ಇಷ್ಟ ವಾಗಿದ್ದು ”ಒಂದಷ್ಟು ಪ್ರೀತಿಗೆ ” ಮನಸಿನ ಮೂಲೆಯಲ್ಲಿ ಕೂತು ಅವಳ ಕಣ್ಣ ಸಂವಾದದಲ್ಲಿ ನದಿತೀರದ ಪ್ರಶಾಂತ ಪ್ರೀತಿಯನ್ನ ಹೀರುತ್ತಾ ರೋಮಾಂಚನಗೊಂಡ ಕ್ಷಣವೂ ದಾಖಲಾಗಿರುವುದು ವಿಶೇಷ . ಅದನೂ ಮೀರಿ ಹೃದಯಗಳ ಸಂವಾದವಾಗಿ ಉಕ್ಕಿ ಹರಿವ ಕಲ್ಪನೆ ತುಂಬಿಸಿ ಬೆರಗಿನ ನಗುವನ್ನ ತುಟಿ ಮೇಲೆ ತರುತ್ತದೆ . ”ರಾಗದೊಲವು ಮನಸಿಗೆ ಉಸಿರಿಗಲ್ಲ “ಅನ್ನುತ್ತಾ ”ಬೆಚ್ಚನೆ ಹೆಂಡತಿ ಯಿರಲು ಸ್ವೆಟರೇಕೆ “ಎಂದು ಬೆರಗು ಸೂಸುವ ಶೃಂಗಾರದ ನವಿರು ತುಂಟತನ ಸವರಿ ಕವನದ ಮೈ ಅಲಂಕರಿಸಿಕೊಳ್ಳುವ ರೀತಿ ಗದ್ಯ ಓದುವವರೂ ಪದ್ಯದ ದಾಸರಾಗುವಂತೆ ಮಣಿಸುತ್ತದೆ . “ಅವಳು ನದಿಯಾದಳು ನಾನು ಬಹುಕಾಲ ದಡವಾಗಿ ಕಾದಿದ್ದೆ “ಎನ್ನುತ್ತಾ ಪ್ರೇಮ ಪರಾಕಾಷ್ಟೆ ,ಧ್ಯಾನ ಸ್ಥಿತಿ ,ಅವಳ ಆಗಮನ ಒಳಗೂ ಹೊರಗೂ ಆಗು ಹೋಗುಗಳ ಸವಿಸ್ತಾರ ಒಳವಿನೋಕುಳಿಯನ್ನ ಓದುವಾಗ ಮನಸಿನಲ್ಲಿ ಕಾಮನ ಬಿಲ್ಲು . ಪ್ರೀತಿಯ ಉತ್ಕಟತೆಗೆ ಅಳತೆಯಿರದೇ ಪರಿದಿಯಾಗಿ ..ಪ್ರಶ್ನೆಗಳನ್ನೇ ಕೇಳದೇ ಉತ್ತರದ ತೊಳತಕ್ಕೆಯಲ್ಲಿ ಬೆಚ್ಚಗಾಗುತ್ತವೆ ತಂತಾನೇ ಉತ್ತರಗಲಾಗುತ್ತವೆ ಲಜ್ಜೆಯಿ೦ದ .ಪ್ರೀತಿ ಪ್ರಣಯಗಳ ಗಟ್ಟಿ ಕೋಟೆಯೊಳಗೆ ನಡೆದೆಲ್ಲಾ ವಿದ್ಯಮಾನಗಳು ಕವಿಲಹರಿಯಲ್ಲಿ ತೇಜೋಪುಂಜವಾಗಿ ಸ್ವಪ್ರಭೆಯಿಂದ ಬೆಳಗುತ್ತವೆ ಹರಿದುಬರುತ್ತವೆ.
ಓದುಗನ ಮನದ ನವಿರ ಹೊದೆದೆಬ್ಬಿಸಿ…,ಪ್ರೀತಿ ಹುಟ್ಟಿಸಿ … ಸೋಮವರದ ,ಚೇತನಾರ ರೇಖಾಚಿತ್ರಗಳು ಜೀವ ತುಂಬಿದ್ದು ಕವನದ ಪೂರ್ಣತೆಯನ್ನು ಮತ್ತಷ್ಟು ಸುಂದರ ಗೊಳಿಸಿದೆ . ಪುಟ್ಟದೊಂದು ಪುಸ್ತಕದಲ್ಲಿ ಪುನಹ ಪುನಹ ಓದುವಾಸೆ ತರುವ ಪ್ರತಿಸಾರಿಯೂ ಮಾನವ ಶ್ರುತಿ ಗೊಳಿಸುವ ಕವನಗಳು ಸುಂದರ “ನನ್ನ ಪ್ರೀತಿಯ ಪ್ರಸ್ತಾಪಕ್ಕೆ ನಿನ್ನೊಲವಿನ ಮೋಹರಾಗಿಲ್ಲ “ಹುಂ ..ಯಾವುದನ್ನ ಹೇಳಲಿ ಬಿಡಲಿ ಎಲ್ಲಾ ಚೆನ್ನಾದ ಕವನಗಳೇ .. ಓದಿ ನೋಡಿ ಅದರ ಅನುಭೂತಿಯೇ ಬೇರೆ .. ಅದರ ಮಾಧುರ್ಯ ನಿಮಗೂ ತಲುಪಲಿ . ೨೫ರ ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಪ್ರತಿಭೆ ವಾಹ್ ಮತ್ತಷ್ಟು ಕವನ ಸಂಕಲನ ಬರಲಿ .ಶುಭ ಹಾರೈಕೆಗಳು
ನಿಮ್ಮಇನ್ನೊ0ದು ಪುಸ್ತಕದ ಬಗೆಯೂ ಬರೆಯುವುದಿದೆ ,ಶರತ್ ಚಕ್ರವರ್ತಿ ಜೀಯವರ ”ಸಿಬಿರು ”ಬಗೆಗೂ..ಪ್ರವರಜೀ ಮತ್ತು ನಿಮ್ಮಿಬ್ಬರ ಕವನ ಪುಸ್ತಕಗಳು ಒಟ್ಟಿಗೇ ಸಿಕ್ಕರೂ ಅದರ ಸುಂದರತೆ ಬಗ್ಗೆ ತಡವಾದ ಪ್ರತಿಕ್ರಿಯೆ ಬಗ್ಗೆ ಕ್ಷಮೆಯಿರಲಿ . ಯುವ ಕವಿಗಳ ಹಾದಿ ಬೆಳಗಲಿ

‍ಲೇಖಕರು avadhi

2 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading