ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ದು ಮೂರ್ತಿ ಕವಿತೆ- ಬಿಡುಗಡೆ…

ಸಿದ್ದು ಮೂರ್ತಿ

ಮೌನ ಮುರಿದ
ಮಾತುಗಳು
ಮುತ್ತುಗಳಂತೆ
ಎದೆಯಾಳದಿ ಹೊಳೆದು,
ಮೌನಗತ್ತಲಲ್ಲಿ ಉಳಿದ
ಎದೆಯ ಭಾವಗಳಿಗೀಗ
ಬಿಡುಗಡೆ…

ಮೌನ ವೇದನೆಯೊಳಿದ್ದ
ಒಂದೊಂದು ಭಾವಗಳೂ ಮುಕ್ತ .,
ಹೊಸ ಕನಸುಗಳ‌ ಹೆಕ್ಕಿ
ರೆಕ್ಕೆಯ ಬಿಚ್ಚಿ ಹಾರುವ ತವಕ
ಇದೀಗ ಸಂಭ್ರಮದಂತೆ….

ಒಂಟಿಯಾಗುಳಿದು
ಬೇಸರದ ಮುಳ್ಳು ಮೊನೆಗಳ
ನೋವುಂಡು ಉಳಿದ ಜೀವಕ್ಕೀಗ
ನಿನ್ನದೇ ಹಂಬಲ..
ನಿನ್ನ ಒಲವ ಮಾತುಗಳೇ ಬೆಂಬಲ
ಗೆಲುವ ಕಂಡ ಬದುಕಿಗೊಂದು
ನಿನ್ನದೇ ಬಲ ಛಲ.

ಅಳತೆಗೆ ನಿಲುಕದ ಆಳ ಅಗಲ
ಒಲುಮೆಯ ಮರುಪೂರಣ
ನಿನ್ನ ಮನವೂ ವಿಶಾಲ ಸಾಗರ
ಸಹನೆ ಅನುಭೂತಿಯಾಗರ
ನಂಬಿ ಬದುಕುವ ಈ ಜೀವದ
ಕಾರುಣ್ಯ ಸಾರಥಿ
ಭವ್ಯ ಬದುಕಿನ ದಿವ್ಯ ಸುರತಿ..
ನೀ ಎನ್ನ ಜನುಮದ ಗೆಳತಿ…

‍ಲೇಖಕರು Admin

28 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading