ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿರ ಗಾಯಗಳು ಮಾದಿವೆಯಷ್ಟೇ..

ಅವ್ವ

ರಾಜೀವ ಸಖ
ಹರಿದ ಜೋಡುಗಳಿಗೆ
ಆದೇ ಆಲದ ಬಿಳಲ ಪೋಣಿಸಿ, ಸುಡುಬಿಸಿಲೊಳು
ದರಾ ಬರಾ ಎಳಕೊಂಡ ಉಂಗುಟ,
ಮತ್ತೆ ಬಿಗಿಯಾಗದಷ್ಟು ಸವೆಸಿದ ಎದೆಯ,
ಸಾವಿರ ಗಾಯಗಳು ಮಾದಿವೆಯಷ್ಟೇ..

ಹಸಿದ ಹೊಟ್ಟೆಯಾ ತುಂಬಾ, ಮಾರ್ಜಾಲನೂ ನಾಚಿಸುವಷ್ಟು, ಗೊರ್ರರ್ರೋ ಎನುವಾ..
ಶಬುಧಗಳ ಪೇರಿಸಿಟ್ಟ ಹಸಿವೆಯ ರಾತ್ರಿಗಳಿಗೆ,
ಮುದ್ದೆ ಅಂಬಲಿ ಕನವರಿಕೆಯಷ್ಟೇ..
ಮತ್ತಾವ ಆಸೆ, ಅಸೂಯೆಗಳ ಹೊತ್ತು
ಗೊತ್ತುಗಳ ಅರಿವಿರಲಿಲ್ಲ..

ನೇಸರನ ಇರುವ ಬಯಸದೇ,
ನೆನಪ ಗಡಿಯಾರ ಗೋಪುರಕೆ ಆನಿಸಿದ ಮನಸು,
ಅಜ್ಜನ ಕೋಲ ಗೌಜ ಕಾಯದೇ ಎದ್ದು,  ಚಳಿಗಾಲಕೂ ಬೆವರಿಳಿಸಿ
ಶಯ್ಯೆಯೂಡಿಸಿದ,
ಅಪರಿತ ಸ್ಮೃತಿಗಳ‌ ತೇವವಿದೆ..

ಹರಿದ ಚಡ್ಡಿಗೆ ಅಗಣಿತ ಮುತ್ತುಗಳ,
ಪೋಣಿಸಿದ ಅವ್ವನ ಕೈಗಳು ಈಗೀಗ ಸುಕ್ಕತ್ತಿವೆಯಾದರೂ,
ಈಗಲೂ ನೀನೊಬ್ಬ ಮುಕ್ಳರ್ಕ ಕಣೋ.. ಎನುವ ಅವಳ ಮಾತಿನಲಿ ಲವಲೇಶವೂ ಅವಾಚ್ಯವಿಲ್ಲ.

ಅವಳೊಬ್ಬ ವರ್ಣ ಓಕುಳಿ ರಾಶಿಯ..
ಜಿಹ್ವೆಗೆ, ಮೈಕೈಗೆ ಸವರಿಕೊಳ್ಳದ, ಸರ್ವಕಾಲಕೂ..
ನಿಷ್ಕಲ್ಮಷ ನಿಲುಮೆಯಾಗುವ, ಸ್ಫೂರ್ತಿಮೆದ್ದ ಪ್ರೀತಿಯ ಕವಿತೆ..

‍ಲೇಖಕರು avadhi

29 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading