ಸಾವಿನೊಡನೆ ಸವಾರಿ

 shivakumar mavaliಶಿವಕುಮಾರ್ ಮಾವಲಿ

ಸಾವು ಎಂಬ ಈ ಅತಿಥಿಯನ್ನು
ನಾನು ಮರೆತೇ ಬಿಟ್ಟಿದ್ದ ಕಾರಣಕ್ಕೋ ಎಂಬಂತೆ ;
ಆತನೇ ಬಂದು ಮನೆ ಮುಂದೆ ವಿನಯದಿಂದ ನಿಂತ.
ಅಲ್ಲಿಂದ ಕುದುರೆ ಗಾಡಿಯಲ್ಲಿ ಹೊರಟಿದ್ದು,
ನಾನು – ಅವನು – ಮತ್ತು ಅಮರತ್ವ ಮಾತ್ರ.

ನಿಧಾನಕ್ಕೆ ಚಲಿಸತೊಡಗಿತ್ತು ನಮ್ಮ ಗಾಡಿReef
ಅವನಿಗೂ ಯಾವ ಅವಸರವಿದ್ದಂತೆ ಕಾಣಲಿಲ್ಲ.
ನನ್ನೆಲ್ಲ ಕೆಲಸಗಳನ್ನು, ವಿಶ್ರಾಂತಿಯನ್ನು ಬದಿಗೊತ್ತಿ
ಅವನನ್ನು ಹಿಂಬಾಲಿಸಲು ಕಾರಣ – ಆತನ ವಿನಮ್ರತೆ.

ಸಾಗುತ್ತಲೇ ಇತ್ತು ನಮ್ಮ ಪಯಣ
ಶಾಲೆಯ ಆವರಣದಲ್ಲಿ ಆಡುತ್ತಿದ್ದ ಮಕ್ಕಳು.
ಅರ್ಧಂಬರ್ಧ ಮುಗಿದ ಅವರ ಪಾಠಗಳು
ತುಂಬು ಪೈರಿನ ಹೊಲಗದ್ದೆಗಳು.
ಮುಳುಗುತ್ತಿದ್ದ ಸೂರ್ಯ, ಇವೆಲ್ಲವುಗಳನ್ನು ದಾಟುತ್ತ…

ಹೀಗೆ ಸಾಗುತ್ತಲೇ ಅದೊಂದು ಮನೆಯ
ಬಳಿ ಗಾಡಿ ನಿಂತಂತಾಯಿತು.
ಆ ಮನೆಯ ಮೇಲ್ಛಾವಣಿ ಅಷ್ಟೊಂದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
ಮೇಲ್ಛಾವಣಿಯೇ ಇಲ್ಲದ ಮನೆಯಲ್ಲಿ
ಅಲ್ಲಲ್ಲಿ ಮಣ್ಣಿನ ದಿಬ್ಬಗಳು ಕಾಣಹತ್ತಿದವು
ಅಲ್ಲಿಯೇ ನನ್ನ ಅಂತ್ಯಕ್ರಿಯೆಯನ್ನೂ ಮುಗಿಸಿದೆವು.

ಅದಾಗಿ  ಕೆಲ ಶತಮಾನಗಳೇ ಸಂದಿವೆ ಈಗ
ಒಂದೊಂದೂ, ದಿನವೊಂದರಂತೆ ಉರುಳಿ ಹೋಗಿವೆ.
ನಮ್ಮನ್ನು ಹೊತ್ತು ಸಾಗುತ್ತಿರುವ ಆ ಕುದುರೆಗಳ ದೃಷ್ಟಿ ಮಾತ್ರ
ಕಾಲ-ದೇಶಗಳನ್ನು ದಾಟಿ
ಸಾಗುತ್ತಲೇ ಇದೆ
ಸಾವಿನಾಚೆಯ ಅಮರತ್ವದ ಲೋಕಕ್ಕೆ …

ಮೂಲ ಕವಿತೆ

Because I could not stop for Death –
He kindly stopped for me –
The Carriage held but just Ourselves –
And Immortality.

We slowly drove – He knew no haste
And I had put away
My labor and my leisure too,
For His Civility –

We passed the School, where Children strove
At Recess – in the Ring –
We passed the Fields of Gazing Grain –
We passed the Setting Sun

We paused before a House that seemed
A Swelling of the Ground –
The Roof was scarcely visible –
The Cornice – in the Ground –

Since then – ’tis Centuries – and yet
Feels shorter than the Day
I first surmised the Horses’ Heads
Were toward Eternity –

– Emili Dickenson

‍ಲೇಖಕರು avadhi

January 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: