ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿರಾಜ್ ಆನಂದೂರು ಕವಿತೆ- ನಮ್ಮ ಹಾಡು

ಸವಿರಾಜ್ ಆನಂದೂರು

ಗಾಂಧಿ ನಮ್ಮ ಕನಸಾದರೆ
ಅಂಬೇಡ್ಕರ್: ಎಚ್ಚರ
ಬೋಧಿವೃಕ್ಷವೆಮಗೆ ನೆರಳು
ಬೆಳಕದೋ ಬಸವೇಶ್ವರ!

ಸಂಕವ್ವೆಯ ಕುಲವು ನಾವು
ಕಲ್ಯಾಣದ ನೆಲವು ನಾವು
ಒಡಲಾಳದ ಬೆಂಕಿ ಕಾವು
ಲಂಕೇಶರ ಹತ್ತು ತಲೆ.
ಫುಲೆಯವ್ವನ ಕರುಳ ಬಳ್ಳಿ
ಹಲಗಲಿಯ ಕ್ರಾಂತಿ ಕೊಳ್ಳಿ
ಶಾಸನಗಳ ಕಡಿದು ಚೆಲ್ಲಿ-
ನಂಗೇಲಿಯ ಸಿಡಿದ ಮೊಲೆ.

ಶಾಂತವೇರಿ ಬೆಳೆದ ಬೆಳೆ
ಕನಕದಾಸ ತೊಳೆದ ಕೊಳೆ
ಹಾಜಬ್ಬರು ಸುಲಿದ ತೊಳೆ
ಗುರುವು ನಮಗೆ ಲೋಹಿಯಾ.
ಮಾತಂಗಿಯ ತುಂಬು ಮಡಿಲು
ಶಿಶುನಾಳದ ಭಂಗಿ ಸುಡಲು
ಕವಿಶೈಲದ ನೀಲಿ ಮುಗಿಲು
ತೇಜಸ್ವಿ ನಮ್ಮ ವಿಸ್ಮಯ.

‍ಲೇಖಕರು Avadhi

19 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading