ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ –ಓ ಕನಸೇ…

ಸರೋಜಿನಿ ಪಡಸಲಗಿ

ಮುಂಜಾವಿನ ಮಂಜಿನಲಿ
ಮುಸ್ಸಂಜೆಯ ರಂಗಿನಲಿ
ಕಳೆದು ತೇಲಿ ಹೋಗುವಾಗ
ಬಾರದಿರು ಕನಸೇ ಓ ಕನಸೇ

ನೀನರಿಯದ ಗುಂಗಿನಲಿ
ಮಧುಮಧುರ ರಂಗಿನಲಿ
ನೆನಪುಗಳು ಸುಳೀವಾಗ
ಬಾರದಿರು ಕನಸೇ ಓ ಕನಸೇ

ಕಣ್ಣ ಎವೆಯ ತುಂಬಾ
ಹತ್ತು ಹಲವು ಸುಳಿದು ಓಡಿ
ಸೆಳೆದು ಹೆಣೆಯುವಾಗ
ಬಾರದಿರು ಕನಸೇ ಓ ಕನಸೇ

ಹರಿದಾಡುವ ಸೌಗಂಧ
ತುಳುಕಿ ಕುಲುಕಿ ಚೆಲ್ಲದಂತೆ
ಕಾಪಿಟ್ಟು ಕಾಯುವಾಗ
ಬಾರದಿರು ಕನಸೇ ಓ ಕನಸೇ

ನಿನಗಾಗಿಯೆ ಚಡಪಡಿಸಿ
ಗಳಿಗೆ ಬಿಡದೆ ಕಾತರಿಸಿ
ಆಸರೆಗೆ ಹಂಬಲಿಸಿ ಕೂಗಿ ಕರೆಯುವಾಗ
ತಪ್ಪಿಸದಿರು ಕನಸೇ ಓ ಕನಸೇ

‍ಲೇಖಕರು Admin

6 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading