ನಟರು ನಟನೆಯನ್ನು ಕುರಿತು…

ನಟರು ನಟನೆಯ ಬಗ್ಗೆ, ನಾಟಕದ ಬಗ್ಗೆ, ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ, ಮಾತನಾಡಿದ್ದೇ ಕಡಿಮೆ. ಅವರ ಪರವಾಗಿ ನಿರ್ದೇಶಕರು, ನಾಟಕಕಾರರು, ವಿಮರ್ಶಕರು, ಮಾತನಾಡಿದ್ದೇ ಹೆಚ್ಚು. ಇದು ನಮ್ಮ ನಡುವಿನ ಮಾತು. ಆದರೆ, ಜನರ ನಡುವೆ ನಿಲ್ಲುವವರು ಹಾಗೂ ನಿಂತಿರುವುದು ನಟರೇ ತಾನೇ? ಜನರು, ಒಬ್ಬ ನಟನನ್ನು ಪೀಠದ ಮೇಲೆ ಕೂರಿಸುವ ಮೊದಲು, ಎರಡು ಸಂಗತಿಗಳನ್ನು ಗಮನಿಸುತ್ತಾರೆ. ನಟನ ವ್ಯಕ್ತಿತ್ವ ಹಾಗೂ ನಟನೆಯ ಸಾಮಥ್ರ್ಯ. ಎರಡೂ ಬೆರೆತವನನ್ನು/ಳನ್ನು ಮಾತ್ರವೇ ಸ್ಟಾರ್ ಎಂದು ಆರಾಧಿಸುತ್ತಾರೆ ಅವರು. ಈ ಬಗ್ಗೆ, ನಟರೇ ಮಾತನಾಡಲಿ, ಸ್ವವಿಮರ್ಶೆ ಮಾಡಿಕೊಳ್ಳಲಿ, ರಂಗಭೂಮಿ ಹಾಗೂ ಇತರೆ ಮಾಧ್ಯಮಗಳ ಏಳುಬೀಳುಗಳ ಬಗ್ಗೆ ಹೇಳಲಿ, ಎಂಬ ಆಶಯದಿಂದ ಕೆಲವು ಪ್ರತಿಬಾವಂತ ನಟರನ್ನು ಬರಮಾಡಿಕೊಂಡಿದ್ದೇವೆ.

ನವೆಂಬರ್ 7, ಸಂಜೆ 5 ಗಂಟೆಗೆ, ಕಲಾಮಂದಿರದ ಕಿರುರಂಗಮಂದಿರದಲ್ಲಿ, ಅವರು ಸಂವಾದ ನಡೆಸಲಿದ್ದಾರೆ. ಬನ್ನಿ ಬಾಗವಹಿಸಿ.

ಈ ಕಾರ್ಯಕ್ರಮದಲ್ಲಿ ಖ್ಯಾತ ಹಿಂದಿ ಚಲನಚಿತ್ರನಟ ಹಾಗೂ ರಂಗಭೂಮಿ ಕಲಾವಿದ ಪಂಕಜ್ ತ್ರಿಪದಿ ಹಾಗೂ ಕನ್ನಡ ರಂಗಭೂಮಿಯ ನಟ ನಟಿಯರಾದ ಎಮ್.ಡಿ.ಪಲ್ಲವಿ, ಡು ಸರಸ್ವತಿ, ಜನಾರ್ಧನ (ಜೆನ್ನಿ), ಲಕ್ಷ್ಮಣ.ಕೆ.ಪಿ, ಯತೀಶ್ ಎನ್ ಕೊಳ್ಳೆಗಾಲ ಮತ್ತು ಹಿರಿಯ ರಂಗನಿರ್ದೇಶಕರಾದ ಶ್ರೀಪಾದ್ ಭಟ್‍ರವರು ಭಾಗವಹಿಸುತಿದ್ದಾರೆ. ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ ಸಂದ್ಯ ಮೆಂಡೋನ್ಕ.

ಆಯೋಜಕರು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ, ಅರಿವು ರಂಗ ಮತ್ತು ಆಕ್ಟಿಂಗ್ ಶಾಸ್ತ್ರ ಮೈಸೂರು. 

‍ಲೇಖಕರು Admin

November 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: