ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ಸೊರಟೂರು ಕವಿತೆ- ಗಾಯ..

ಸದಾಶಿವ ಸೊರಟೂರು

ಹಸಿದ ತುಟಿಗಳಲಿ‌ ಕಣ್ಣೀರ ಕಲೆ ಉಳಿದು
ಉಳಿದ ಒಳಮಾತನು ಎದೆಬಾಯಿ ತಡೆದು

ಮುಗಿಲದೀಪ‌ ನಂದಿ, ಹೊದ್ದು ಮಲಗಿತು ಬದುಕು
ಯಾವ ಯುಗದ ಮೌನ ಬಂದು ತಬ್ಬಿತು ಇಹಕು

ಕತ್ತಲೆಯ ಕುಡಿಹೊಡೆಸಿ ಹೊದ್ದ ಬೆಳಕನು ಸರಿಸಿ
ಹೋದದ್ದೆಲ್ಲಿ ನೀ ನಿನ್ನದೆ ಜಾಡು ನೀನೆ ಅಳಿಸಿ

ಚಿಟ್ಟೆಗೊಂದು ದಾರಿ ಪರಿಮಳಕ್ಕೊಂದು ಊರು
ಒಂಟಿ‌ ಮುಗಿಲಿಗೂ ಇದೆ ಒಂದು ನಗುವ ತೇರು

ಹೇಗೆ ಒರೆಸಲಿ ಹೇಳು ನಾನು ನನ್ನದೆ ಗಾಯ
ಹರಸುವರು ಯಾರಿಲ್ಲ ಇಲ್ಲಿ ನಗಬೇಕು ಗೆಳೆಯ

‍ಲೇಖಕರು Admin

27 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading