ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ನಿನ್ನ ದಾರಿ ತಪ್ಪಲಿ..

 ಸದಾಶಿವ್ ಸೊರಟೂರು 

ಬಿಡಿಸಿಕೊಳ್ಳುವುದು,
ಮತ್ತೇಲ್ಲೊ ಹಿಡಿದುಕೊಳ್ಳುವುದು
ಕಾಲ ಎದೆಗೆ ಚುಚ್ಚಿದ ಮುಳ್ಳು

ಅದು, ಆ ವಿದಾಯದ ಕ್ಷಣ
ಅತೀ ಚಿಕ್ಕದು..
ಹಾಡು ಅಳು ಏನೇನು ಇಲ್ಲ
‘ಮತ್ತೆಂದೂ ಸಿಕ್ಕಬೇಡ ಮತ್ತೆ’
ಬರೀ ನಿನ್ನ ವಂದರ್ನಾಪಣೆ..

ನಾನು ಸೇರಿಸಬೇಕಾದ ಮಾತು
ತುಟಿಯಲ್ಲೆ ಕರಗಿತು..

ಆಡಬೇಕಿತ್ತು ನಾನು ಆ ಒಂದು
ಮಾತು
ನಿನ್ನ ಕಾಲಿಗೆ ಗೆಜ್ಜೆಯಾಗಿ ಕಟ್ಟಿ
ಕಳಿಸಬೇಕಿತ್ತು ಅದನು
ಪ್ರತಿ ಹೆಜ್ಜೆಗೂ ಕೇಳಬೇಕಿತ್ತು‌ ನಿನಗೆ..

ಈ ಉಳಿದ ಮಾತಿನ ಅವಾಂತರಗಳು
ಒಂದೆರೆಡಲ್ಲ
ನಡು ರಾತ್ರಿ ಹೊರಗೆ ಮಳೆ
ಮೆಟ್ಟಿಲ್ಹತ್ತಿದ ಅಸ್ಪಷ್ಟ ದನಿ
ಯಾರೊ ಚಿಲಕ ಬಡಿದ ಸದ್ದು..
ಬಾಗಿಲ ತೆರೆದರೆ ಬರೀ ಖಾಲಿ ಖಾಲಿ
ಯಾರೊ ಮಾತು ಹುಡುಕಿಕೊಂಡು
ಬಂದು
ಬಂದದಾರಿಯಲ್ಲೇ ನಡೆದು ಹೋದಂತೆ..

ಎಲ್ಲಾ ಮುಗಿದಿಲ್ಲ ಇನ್ನೂ ಅನಿಸಿದ ದಿನ
ನೀನು ನಿಜಕ್ಕೂ
ಬಾಗಿಲು ಬಡಿದರೆ
ನಾನು ಸಾಕಿಕೊಂಡು ಆ ಒಂದು ತುಂಡು
ಮಾತು ಜೀವಬಿಡಬಹುದು

ನಿನ್ನ ದಾರಿ ತಪ್ಪಲಿ..

‍ಲೇಖಕರು Admin

23 April, 2022

1 Comment

  1. prathibha nandakumar

    ಕವನ ಸೂಪರಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading