ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ತ ಸಮಾಜದಲ್ಲಿ ಉಸಿರಾಡುತ್ತೇನೆ, ಅಪರಾದವಾಯಿತು ಕ್ಷಮಿಸಿಬಿಡಿ..

ಚಲಂ

ಹೌದು ನೀವೇಳುವುದು ಸರಿ
ನನ್ನ ತಲೆಯಲ್ಲಿ
ಗೊಬ್ಬರ ತುಂಬಿದೆ
ಅದಕ್ಕಾಗಿಯೆ ಪದ್ಯ ಬರೆಯುತ್ತೇನೆ
ತುಂಬಿದ ಸಭೆಯಲ್ಲಿ
ವಾಚಿಸುತ್ತೇನೆ
ನಿಮ್ಮ ಅಪ್ಪಣೆ ಪಡೆಯದೇ
ಪುಸ್ತಕ ಮಾಡಿ
ಮಾರಲಿಕ್ಕಾಗದೇ ಹಂಚುತ್ತೇನೆ
ಸತ್ತ ಸಮಾಜದಲ್ಲಿ ಉಸಿರಾಡುತ್ತೇನೆ
ಅಪರಾದವಾಯಿತು ಕ್ಷಮಿಸಿಬಿಡಿ
 
ಹೌದು ನೀವೇಳುವುದು ಸರಿ
ಮಾತನ್ನೇ ಶತಶತಮಾನಗಳಿಂದ
ಬಂಡವಾಳ ಮಾಡಿಕೊಂಡವರ
ಎದುರು ಇತ್ತೀಚೀಗೆ
ಮಾತಿಗಿಳಿಯುತ್ತೇನೆ
ಅವರೊಟ್ಡಿಗೆ ವಾದ ಮಾಡುವ
ದಾರ್ಷ್ಟ್ಯ ತೋರುತ್ತೇನೆ
ದಯಮಾಡಿ ಕ್ಷಮಿಸಿಬಿಡಿ

ಹೌದು ನೀವೇಳುವುದು
ನೂರಕ್ಕೆ ನೂರು ಸರಿ
ನಾನು ಸೂರಿಲ್ಲದ ಭಿಕಾರಿ
ಆದರೂ ನೂರಾರು
ಜನರೊಟ್ಡಿಗೆ ಕಟ್ಟುವ ಮಾತನಾಡುತ್ತೇನೆ
ಈಗಾಗಲೇ ಇಟ್ಟಿಗೆಯಲ್ಲಿ
ಪವಿತ್ರತೆಯ ಶವವನ್ನು
ಒಪ್ಪಮಾಡಿ ಕಟ್ಟಿದ ನಿಮ್ಮ ಒಪ್ಪಿಗೆಯನ್ನೂ
ಪಡೆಯದ ತಪ್ಪು ಮಾಡುತ್ತೇನೆ
ಮನಸುಗಳ ಕಟ್ಟುವುದಿರಲಿ
ನಾನು ಮನೆಯನ್ನೂ ಕಟ್ಟುವುದು
ತಪ್ಪೆಂದು ಗೊತ್ತಿರಲಿಲ್ಲ
ದಯಮಾಡಿ ಕ್ಷಮಿಸಿಬಿಡಿ
 
ಹೌದು ನೀವೇಳುವುದು ಸರಿ
ನರಕವೇ ನನಗೆ ಸರಿಯಾದ ಜಾಗ
ಎಲ್ಲರನೂ ಪ್ರೀತಿಸುವ ತಪ್ಪುಮಾಡಿದ ಪಾಪಿ ನಾನು
ಇದರಿಂದಲೇ ನನ್ನನ್ನೂ ಸೇರಿದಂತೆ
ಹಲವರಿಗೆ ಕನಸು ಕಾಣುವಂತೆ
ಮಾಡಿದ ಅಪರಾದವೆಸಗಿದವನು
ನಿಮ್ಮ ಹಾದರಗಳನು ನೋಡಿ
ಗೌರವಿಸದೇ
ಎಲ್ಲರನೂ ಪ್ರೀತಿಸುತ್ತಾ
ನಿಮ್ಮನ್ನು ಮುಜುಗರಕ್ಕೀಡು ಮಾಡಿದ
ತಪ್ಪು ನಡೆದುಹೋಗಿದೆ
ದಯಮಾಡಿ ಕ್ಷಮಿಸಿಬಿಡಿ
 

‍ಲೇಖಕರು G

23 September, 2014

4 Comments

  1. ashok k r

    ಚೆನ್ನಾಗಿದೆ…. ಬಹುತೇಕ ಎಲ್ಲವೂ ನನಗೂ ಅನುಭವವಾಗಿದೆ, ಆಗುತ್ತಲಿದೆ!

  2. mahesh kalal

    fine

  3. mmshaik

    very..nice..

  4. ಅಕ್ಕಿಮಂಗಲ ಮಂಜುನಾಥ

    ಚಲಂ ಬದುಕಿದಂತೆ ಬರೆದವರು.ನಾವು ಬರೆದಂತೆ ಬದುಕಲು ತಿಣುಕಾಡುವವರು.
    ಪದ್ಯ ಚೆನ್ನಾಗಿದೆ.ಅಭಿನಂದನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading