ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ್ ಹುಳಿಯಾರ್ ಕವಿತೆ – ಜೀವನವು ನೆರಳಿನಂತೆ…

ಸತೀಶ್ ಹುಳಿಯಾರ್

ಬರೆದಂತೆ ನಡೆಯಬೇಕೋ ತಿಳಿಯದು ನಿನಗೆ
ನಡೆದಂತೆ ಬರೆಯಬೇಕೋ ತಿಳಿಯದು ನಿನಗೆ
ನುಡಿದಂತೆ ಬದುಕಬೇಕೋ ತಿಳಿಯದು ನಿನಗೆ
ನಡೆದು ಬರೆದು ಮರದ ಕೆಳಗೆ ಕೂತಾಗ, ಹಕ್ಕಿ ಕೂಗಿ ಹೇಳಿತು ನಿನಗೆ
“ಬರೆದದ್ದು ನಿನಗಾಗಿ, ನಡೆದದ್ದು
ಪರರಿಗಾಗಿ, ಬದುಕಿದ್ದು ನೆರಳಾಗಿ”
ನೀನೇ ನೆರಳಾದೆಯೋ, ನೆರೆಳೆಂದು ಮೆರೆದೆಯೋ ತಿಳಿಯದು
ಸೂರ್ಯನಿದ್ದರೆ ತಾನೆ ನೆರಳು
ಚಂದ್ರನಂತೆ ಮಧ್ಯ ಮರದೆಲೆಗಳು
ಭೂಮಿ ತಂಪಾಗಿರಲೆಂದು ನೆರಳು
ನೆರಳಿಗೆಲ್ಲಿದೆ ತನ್ನದೇ ಆದ ನೆಲೆ


ಮೋಡ ಕವಿದರೆ ನೆರಳಿಗಿಲ್ಲ ಬೆಲೆ
ನೀನೇ ನೆರಳೊ ನೆರೆಳೊಳಗೆ ನೀನೋ
ಮೊದಲು ಅರಿತು ಬಾಳು
ಯಾರದೋ ನೆರಳಾಗಿ ಬದುಕದಿರು
ನೀನೇ ನೆರಳೆಂದು ಬೀಗದಿರು
ಸೂರ್ಯನಿಲ್ಲದೆ ಹಗಲಿಲ್ಲ ನೆರೆಳಿಲ್ಲ
ನೀನಿಲ್ಲ ನಾನಿಲ್ಲ ನೆರಳೂ ಇಲ್ಲ
ಬಿಸಿಲಲ್ಲಿ ನೀನಿಂತು ನೆರಳ ನೀಡಬೇಕು
ನಿನ್ನ ನೆರಳಲ್ಲಿ ಜೀವಗಳು ತಂಪಾಗಿರಬೇಕು
ನಿನ್ನ ನೆರಳಿಗೂ ಬೇಕು ಸೂರ್ಯ ಕಿರಣ
ನೆರಳಾಗೂ ನೀನು ಎಲ್ಲರನು ನಮಿಸುತ
ಜೀವನವು ನೆರಳಿನಂತೆ, ಭೂಮಿ ತಿರುಗಿದಂತೆ
ಅರಿತು ಬಾಳಬೇಕು ಆ ನೆರಳಿಂತೆ
ಸ್ವಾರ್ಥವಿಲ್ಲದ ರಾತ್ರಿ ನೆರಳಿನಂತೆ

‍ಲೇಖಕರು avadhi

14 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading