ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು

ಗಾಂಧಿ ದಿನ ಹತ್ತಿರವಾಗುತ್ತಿದೆ. ಗಾಂಧಿ ಎಂಬ ಅಜ್ಜನನ್ನು ಆರೋಪಗಳ ಕಟಕಟೆಯಲ್ಲಿ ನಿಲ್ಲಿಸುವ ಮನಸ್ಸುಗಳೂ ಹೆಚ್ಚಿವೆ.
ಈ ನಡುವೆ ತಣ್ಣಗೆ ತನ್ನ ಸತ್ವದಿಂದ ಕಾಡಿದ ಕವಿತೆ ‘ಒಳಗೂ…ಹೊರಗೂ..’ಬ್ಲಾಗ್ನಲ್ಲಿ ಸಿಕ್ಕಿತು.
ಗಾಂಧಿ ಎಂಬ ಗಾಂಧೀ ಇಲ್ಲಿದಾರೆ ಅನಿಸುತ್ತಿದೆ-   

 
ಒಂದು ದಿನ ಸಣ್ಣ ಪದ್ಯವೊಂದು
ಗಾಂಧಿ ಆಶ್ರಮಕ್ಕೆ ಬಂತು;
ಗಾಂಧಿಯನ್ನು ನೋಡಬೇಕಿತ್ತು ಅದಕ್ಕೆ.
ಗಾಂಧಿಯ ಕೈಯಲ್ಲಿ ನೂಲಿತ್ತು.
ಬಾಯಲ್ಲಿ ರಾಮನಾಮ.
ಬಾಗಿಲಲ್ಲಿ ನಿಂತಿದ್ದ ಪದ್ಯವನ್ನು
ಅವರು ನೋಡಲೇ ಇಲ್ಲ.
ಪದ್ಯ,
ನಾನೊಂದು ಭಜನೆಯಾದರೂ
ಆಗಬೇಕಿತ್ತು ಅಂದುಕೊಂಡಿತು,
ಗಂಟಲು ಸರಿ ಮಾಡಿಕೊಂಡಿತು. ಗಾಂಧಿ ಬೀರಿದರು ಓರೆ ನೋಟ,
ನರಕವನ್ನೇ ಕಂಡ ತಮ್ಮ
ಕನ್ನಡಕದ ಮೂಲಕ.
‘ಎಂದಾದರೂ ನೂಲುವ ಕೆಲಸ ಮಾಡಿದ್ದೀಯಾ?’
‘ಎಂದಾದರೂ ಜಾಡಮಾಲಿಯ
ಕೈಗಾಡಿ ಎಳೆದಿದ್ದೀಯಾ?’
ಹೊಗೆ ತುಂಬಿದ ಅಡುಗೆ ಮನೆಗೆ
ಯಾವ ಬೆಳಗಿನಲ್ಲಾದರೂ ಹೋಗಿದ್ದೀಯಾ?’
ಪದ್ಯ ಹೇಳಿತು;
‘ನಾನು ಹುಟ್ಟಿದ್ದು ಕಾಡಿನಲ್ಲಿ
ಬೇಟೆಗಾರನ ಬಾಯಲ್ಲಿ
ಬೆಳೆದಿದ್ದು ಮೀನುಗಾರನ
ಪುಟ್ಟ ಗುಡಿಸಲಲ್ಲಿ
ಆದರೂ ನನಗೇನೂ ಬರದು.
ಗೊತ್ತಿರುವುದೊಂದೆ ಹಾಡುವುದು.
ಆಸ್ಥಾನಗಳಲ್ಲಿ ಮೊದಲು ಹಾಡಿದೆ.
ಆಮೇಲೆ ಮೆದುವಾದೆ, ಸುರೂಪಿಯಾದೆ
ಆದರೀಗ ಅರೆ ಹಸಿದು
ಬೀದಿಯಲ್ಲಿದ್ದೇನೆ..’
ಒಳ್ಳೆಯದು ‘ನಿಗೂಢ ನಗೆ ಸೂಸಿ
ಗಾಂಧಿ ಹೇಳಿದರು,
‘ಯಾವಾಗಲೂ ಸಂಸ್ಕೃತದಲ್ಲಿ
ಮಾತನಾಡುವದ ಬಿಡು.
ಹೋಗು ಹೊಲಗಳಿಗೆ
ವ್ಯಾಪಾರಿಗಳಾಡುವ ಮಾತು ಕೇಳು.’
ಪದ್ಯ…
ಬೀಜವಾಗಿ ನೆಲಕ್ಕೆ ಬಿತ್ತು.
ನೇಗಿಲೊಂದು ಮಣ್ಣ ಉತ್ತು
ಹೊಸ ಮಳೆಗೆ ನೆನೆಯಲು ಕಾಯುತ್ತಿತ್ತು.
(ಇದು ಮಲಯಾಳಂ ಖ್ಯಾತ ಕವಿ ಕೆ. ಸಚ್ಚಿದಾನಂದನ್ ಅವರ ಕವಿತೆ. ಬದುಕು ಕಾವ್ಯಕ್ಕಿತ ದೊಡ್ಡದು ಅಂತಿವಲ್ಲ, ಅದಕ್ಕೆ ಇದೂ ಒಂದು ಉದಾಹರಣೆ ಅನಿಸಿತು. ಒಂದೇ ಬಾರಿಗೆ ಕನ್ನಡಕ್ಕೆ ಇಳಿಸಿದ್ದೇನೆ.
ಇನ್ನು ಸಚ್ಚಿದಾನಂದನ್ ಬಗ್ಗೆ. ಸಚ್ಚಿ ಮಲಯಾಳಂ ಭಾಷೆ ನವ್ಯ ಕಾವ್ಯದ ಹರಿಕಾರರಲ್ಲಿ ಒಬ್ಬರು. ಆಧುನಿಕತೆ, ಸಮಾಜವಾದ, ನಗರದ ಸಮೂಹ ಸಂಸ್ಕೃತಿಯ ಒತ್ತಡಗಳು, ಹಾಗೆಯೇ ರಾಜಕೀಯವೂ ಅವರ ಕಾವ್ಯದಲ್ಲಿ ಕಂಡುಬರುತ್ತದೆ. ಅಂಚು ಸೂರ್ಯನ್ ಅವರ ಮೊದಲ ಸಂಕಲನ. ಇದುವರೆಗೂ 19 ಕವಿತೆಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.
ತಮ್ಮ ಕವಿತೆಗಳನ್ನು ಸ್ವತಃ ಸಚ್ಚಿಯವರೇ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಲ್ಲದೆ ಲ್ಯಾಟಿನ್ ಅಮೆರಿಕ, ಆಫ್ರಿಕಾದ ಕವಿತೆಗಳನ್ನು ಮಲಯಾಳಂಗೆ ಅನುವಾದಿಸಿದ್ದಾರೆ. )

‍ಲೇಖಕರು avadhi

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shivu K

    ಕವನ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಮನಸೊಳಗೆ ಆಗಾಗ ಕಾಡಬಹುದು.
    ಇಂಥ ಕವನ ಓದಿ ತುಂಬಾ ದಿನ ಆಗಿತ್ತು. ಎಲ್ಲಿ ನೋಡಿದರೂ ಪ್ರೀತಿ ಪ್ರೇಮವೇ
    ತುಂಬಿರುವ ಕವನಗಳ ಮಧ್ಯೆ ಇದು ತುಂಭಾ ಬಿನ್ನವಾಗಿದೆ. ಸತ್ಯವಾಗಿದೆ.
    ಇದನ್ನು ಹುಡುಕಿಕೊಟ್ಟಿದ್ದಕ್ಕೆ Thanks.
    ಶಿವು.ಕೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: