ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲೆದಾಟದ ಆರ್ಭಟ ತಣಿದು

-ಮಂಜುಳ

ಜೀವಸೆಲೆ

ಹೊಸದೊಂದು ಜಗವ ತವಕಿಸಿ
ಹೂಡಿದ ಅಲೆದಾಟದ ಆರ್ಭಟ ತಣಿದು
ಹಿಂದಿರುಗಿ ಮನೆಯೊಳಗೆ ಹೆಜ್ಜೆಯಿಟ್ಟರೆ
ಹೀಗೇ ತಂಪೆನಿಸುವ ಭಾವದ ಗಹನತೆ

ಜನ ಜಂಗುಳಿಯ ದೂಕಾಟ ನೂಕಾಟ ಜರ್ಜರಗೊಳಿಸುವ ಜನ ಜಲಧಿಯ ದಾಟಿ ಜಗದೊಡೆಯನ ಕಂಡ ಮೂರ್ನಾಲ್ಕು ಕ್ಷಣದ
ಜೀವಶಕ್ತಿ ತರುವ ದರುಶನ

ಬಿಸಿಲ ಬೇಗೆಯ ತಾಪದ ತೀವ್ರತೆ
ಬಿರಿದ ಧರಣಿಯೊಡಲು ತಂಪರಸಿ
ಬರಡು ನೆಲ‌ ಆಗಸಕೆ ಕಣ್ಣೆರಚಿ ಕಾದು
ಬಿದ್ದು ನೆಲಕೆ ಹನಿಗಳು ಮೂಡಿಸಿದ ಕಂಪು

ರೇಸಿಗೆ ಬಿದ್ದವರಂತೆ ಓಡುವ ಬದುಕು
ಮೊದಲಾಗುವ ಭರದಲ್ಲಿ ಆಗುವ ನಯವಂಚನೆಗಳು ತಾನೇ ಸರಿಯೆಂಬ ಸಾಬೀತಿನಲ್ಲಾಗುವ ಘಾತಗಳ ದಾಟಿ ದಿನದ ಕೊನೆಗೆ ನಮಗಾಗಿ ಕಣ್ಣ ಹಾಸಿ ಕೂತ ಆತ್ಮಗಳ ತಂಪು ತಾಕಿದಾಗ ಅರಳುವ ಕಂಗಳು

ವ್ಯವಹಾರಿಕ ನೂರಾರು ಕರೆಗಳು
ಪದೇ ಪದೇ ರಿಂಗಣಿಸುವ ಮೆಸೇಜುಗಳ ಮಧ್ಯೆ ನಿನ್ನಿರುವಿಕೆ ಖಾತರಿಪಡಿಸಿಕೊಳ್ಳಲೆಂದೇ
ಬಂದ ಮೆಸೇಜು-ಕರೆ ತುಂಬುವ ಜೀವಂತಿಕೆ

ದಟ್ಟಡವಿಯಂತ ದುರ್ಬರ ಕ್ಷಣಗಳಲ್ಲಿ
ಕುಸಿದು ಕುಳಿತ ನೀರವತೆಯ ಪದತಲದಲ್ಲಿ
ಸುತ್ತ ಕವಿದ ಗಾಢಾಂಧಕಾರದಿ
ಮೂಡುವನಕ್ಷತ್ರದ ಬೆಳಕಿನಂತೆ ನನ್ನ ಮುನ್ನೆಡೆಸುವ ನಿನ್ನಿರುವಿಕೆಯೇ ಜೀವಸೆಲೆ

‍ಲೇಖಕರು Admin

10 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading