ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಪರ್ಕದಲ್ಲಿ ಇರುವುದು ದೇಹ ಮಾತ್ರ..

ಜಹಾನ್ ಆರಾ
 
ಉಬ್ಬು ತಗ್ಗುಗಳ ಏರಿಳಿತದಲ್ಲಿ
ಆಳಕ್ಕೆ ಇಳಿದು
ಗಗನಕ್ಕೆ ಏರುವ
ನಡುಗೆ ಅನವರತ
ಹೆರಳ ಕಾಡಿನಿಂದಲೋ
ಗುಟಕೇರಿಸುವ ಕುತ್ತಿಗೆಯಿಂದಲೋ
ಮತ್ತೇರಿದ ಎದೆಯ ಸಂದಿಯಿಂದಲೋ
ಹರಿಯುವ ಬೆವರ ಹನಿಗೆ
ಟೇಬಲ್ ಮೇಲಿನ ಫ್ಯಾನ್
ಸಮಾಧಾನ ನೀಡುತ್ತದೆ

ಸತ್ತವರ ಗೋರಿ ಮೇಲೆ
ನಿಂತ ಮಹಲುಗಳಿಗೆ ಶವಗಳು
ಜುರ್ಮನೆ ಹಾಕುವುದಿಲ್ಲ ಸ್ವಾಮಿ
ಕುಕ್ಕಿ ಕುಕ್ಕಿ ಮಾಂಸವ
ಬೇಟೆಯಾಡುವ ಹದ್ದಿಗೂ
ಹೆಣದ ಪರಿಚಯವಿರುವುದಿಲ್ಲ


ದೂರದಲಿ ಸದ್ದು ಮಾಡಿದ್ದ ಓಘ
ಆಗಲು ಬಯಲು ಒದ್ದೆ ಮಾಡಿ
ಹಸಿ ಮಣ್ಣಿನ ಘಮಲು
ಆಘ್ರಾಣಿಸು ಕೋಣೆ ಸಿದ್ಧವಾಗಿದೆ
ಭೂಮಿಯ ಗರ್ಭದಲ್ಲಿ ಬಿದ್ದ
ಬೀಜಗಳು ಸಮೃದ್ಧ ಫಸಲು

ದುಡಿತ ಕುಡಿತ ಸೇರಿ
ದುಡಿದಷ್ಟು ಬೆವರು
ಕುಡಿದಷ್ಟು ನಶೆ
ಸಂಪಾದನೆ ಅವನ ಕಣ್ಣಲ್ಲಿ
ಅದು ನಶೆಯೋ, ಬೆವರೋ
ಅವನು ಮಾತ್ರ ದಣಿದು ಸತ್ತ
ಆತ್ಮ ಮತ್ತೆ ಮತ್ತೆ ರೋಧಿಸುತ್ತಲೇ ಇತ್ತು
ಸಂಪರ್ಕದಲ್ಲಿ ಇರುವುದು ದೇಹ ಮಾತ್ರ
ಎಂದು!

‍ಲೇಖಕರು nalike

27 July, 2020

4 Comments

  1. Kotresh T A M Kotri

    ಕವಿತೆ ಅರ್ಥಪೂರ್ಣವಾಗಿದೆ.ಇಷ್ಟವಾಯಿತು

    • An and pujari

      ಅತಿ ಸುಂದರ ಭಾವಾನಾತ್ಮಕ ಕವಿತೆ ಮೆಡಮ

  2. bi

    ಅರ್ಥಗರ್ಭಿತ ಅನೇಕ ಆಯಾಮಗಳ ಕವಿತೆ… ಜಹಾನ್… ಚೆನ್ನಾಗಿದೆ

    • Jahanara

      Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading