ಶ್ರೀಶೈಲ ನಾಗರಾಳ ಕಂಡಂತೆ ‘ಇತಿ ನಿನ್ನ ಮೈನಾ’

ಶ್ರೀಶೈಲ ನಾಗರಾಳ

ಫೋಟೋ: ವಿಜಯಭಾಸ್ಕರ್

ಕಲಬುರ್ಗಿಯ ರಂಗಾಯಣದಲ್ಲಿ ಅಂಕಣಕಾರ ಕವಿ ನಟ ರಂಗ ನಿರ್ದೇಶಕ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರ ಟಂಕಾ ಜಪಾನಿ ಛಂದೋ ಬಂಧದ ಕವನ ಸಂಕಲನವನ್ನು ಕರ್ನಾಟಕ ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಲೇಖಕರು ಡಾ ಸತೀಶ ಕುಮಾರ್ ಹೊಸಮನಿ ಅವರು ಜನಾರ್ಪಣೆಗೊಳಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರು ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು ಡಾ ಬಸವರಾಜ ಡೋಣೂರ ಅವರು ಪುಸ್ತಕ ಪರಿಚಯ ಮಾಡಿದರು.

ಕಥೆಗಾರರು ಚಿಂತಕರು ಗುಲಬರ್ಗಾ ವಿಶ್ವವಿದ್ಯಾಲಯ ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಪ್ರೊ ಎಚ್ ಟಿ ಪೋತೆ ಮುಖ್ಯ ಅತಿಥಿಗಳಾಗಿದ್ದರು ರಂಗಾಯಣ ನಿರ್ದೇಶಕರು ರಂಗ ಕರ್ಮಿ ಶ್ರೀ ಪ್ರಭಾಕರ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆರಂಭದಲ್ಲಿ ಮಹಿಪಾಲ ರೆಡ್ಡಿ ಅವರು ಅವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಡಾ ಲಕ್ಷ್ಮೀ ಜೋಷಿ ಅವರು ಪ್ರಾರ್ಥನೆ ಸಲ್ಲಿಸಿದರು

ಡಾ ಬಸವರಾಜ ಡೋಣೂರ ಅವರು ಟಂಕಾ ಸಂಕಲನ ಪರಿಚಯಿಸಿ ಟಂಕಾ ಜಪಾನಿ ಸಾಹಿತ್ಯದ ಕೊಡುಗೆಯಾಗಿದೆ.ಸಾಮಾನ್ಯವಾಗಿ ಟಂಕಾ ಕವನಗಳು ಮೂಲಭೂತವಾಗಿ ಪ್ರೇಮ ಕವಿತೆಗಳೆಂದು ಗುರುತಿಸಲಾಗುತ್ತದೆ ಈ ಕವಿತೆಯ ಮೇಲೆ ಬೌದ್ಧ ಧರ್ಮ,ಬುದ್ದನ ಫಿಲಾಸಫಿ ಬಹಳ ಪ್ರಭಾವ ಆಗಿರುವುದನ್ನು ಕಾಣಬಹುದು ಎಂದರು.ಡೋಣೂರರು ಮಹಿಪಾಲ ರೆಡ್ಡಿ ಅವರ ಕೆಲವು ಟಂಕಾ ಕವಿತೆಗಳನ್ನು ವಾಚಿಸಿದರು.

ಹುಡುಕಾಟ ಅಲೆ ಮನಸ್ಸಿನ ಉಮ್ಮಳ ಹತ್ತಿಕ್ಕಿಟ್ಟ ಮೌನವನ್ನು ಟಂಕಾ ಕವಿತೆಗಳ ಭಾವ ಚಿತ್ರ ಗಳಾಗಿವೆ ಎಂದು ಕ್ರತಿ ಜನಾರ್ಪಣೆ ಮಾಡಿ ಡಾ ಸತೀಶ ಕುಮಾರ್ ಹೊಸಮನಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಹಲವು ರಂಗಗಳಲ್ಲಿ ಪ್ರಯೋಗಶಾಲೆ ಇಲ್ಲಿ ಸಾವಿರಾರು ವರ್ಷಗಳ ಚಂಪು ವಚನ ಕೀರ್ತನೆ ತತ್ವಪದ ತ್ರಿಪದಿಯಂಥ ಈ ನೆಲದ ಛಂದೋ ಕವಿತೆಗಳ ಜೊತೆಗೆ ಉರ್ದುವಿನ ಗಝಲ್ ಜಪಾನಿ ಹೈಕು ಪ್ರಕಾರಗಳ ವಿಶಿಷ್ಟ ಪ್ರಯೋಗಗೊಂಡು ಕನ್ನಡ ಸಾಹಿತ್ಯವನ್ನು ಬಹುಮುಖಿ ಯಾಗಿ ಶ್ರೀಮಂತಗೊಳಿರುವುದು ಇದು ಕಲ್ಯಾಣ ಕರ್ನಾಟಕದ ಬಹುದೊಡ್ಡ ಕೊಡುಗೆ ಎಂದು ಚಿಂತಕ ಪ್ರೊ ಎಚ್ ಟಿ ಪೋತೆ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಂಗಾಯಣ ನಿರ್ದೇಶಕರು ಶ್ರೀ ಪ್ರಭಾಕರ ಜೋಶಿ ಅವರು ಮಹಿಪಾಲರೆಡ್ಡಿಯವರ ಬಹುಮುಖ ಪ್ರತಿಭೆ ,ಕ್ರಿಯಾಶೀಲತೆ ಸ್ರಜನಶೀಲತೆಯನ್ನು ಪ್ರಶಂಸಿಸಿದರು ಪತ್ರಿಕೆ ರಂಗಭೂಮಿ ಸಿನಿಮಾ ಕಥೆ ಕಾವ್ಯ ಪ್ರಕಾರಳಲ್ಲಿ ಕ್ರಷಿಮಾಡಿದ ಸಂವೇದನಾಶೀಲ ವ್ಯಕ್ತಿತ್ವ ವುಳ್ಳ ಬರೆಹಗಾರರು ಸ್ನೇಹಪರತೆ ಸಹ್ರಯತೆ ಮಾತಿನ ಅರ್ಥವಂತಿಕೆ ಯಿಂದ ಸೂಜಿಗಲ್ಲಿನಂತೆ ಎಲ್ಲರನ್ನು ತನ್ನತ್ತ ಸೆಳೆಯುವಲೋಹ ಚುಂಬಕ ವ್ಯಕ್ತಿ ಎಂದು ರೆಡ್ಡಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.

ಕಲಬುರಗಿ ಸುಮಾರು ಒಂದು ವಾರದಿಂದ ಮಳೆರಾಯನ ಸೋನೆ ಸುಧೆಯನಡುವೆ ಇಂದು ಬೈಗಿನಲ್ಲಿ ತುಂಬಾ ಸುಂದರವಾಗಿ ಸೊಗಸಾಗಿ ಕಾರ್ಯಕ್ರಮ ಮೂಡಿಬಂದಿತೆ ಮಳೆಯ ಚಳಿಗೆ ಬೆಚ್ಚಗಾಗಿಸುವ ಘಮಘಮಿಸುವ ಬಿಸಿಯಾದ ಬಿಸಿಬೇಳೆ ಭಾತ್ ಮೇಲೆ ಗರಂ ಚಾಯ್ ಸಾಹಿತ್ಯಾಸಕ್ತರಲ್ಲಿ ಮುದನೀಡಿತು.ಅದಕ್ಕೆ ತಕ್ಕಂತೆ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನಡೆದು ರಮ್ಯ ಜಗತ್ತನ್ನೇ ಅನಾವರಣಗೊಳಿಸದ್ದು ಕಂಡುಬಂದಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರು ಶ್ರೀ ಸುರೇಶ ಬಡಿಗೇರ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದನೆ ಸಲ್ಲಿಸಿದರು.

ಮಹಿಪಾಲ ರೆಡ್ಡಿ ಮುನ್ನೂರ ಅವರ ಇತಿ ನಿನ್ನ ಮೈನಾ ಟಂಕಾ ಕವಿತೆಗಳ ಪ್ರಯೋಗ ಶೀಲ ಸಂಕಲನ.

‍ಲೇಖಕರು Admin

September 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: