ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವ್ಯಭಿಚಾರಿಗಳಿಗೆ ಪ್ರೀತಿ ದಕ್ಕುವುದಿಲ್ಲ

ಅಭಿಷೇಕ್ ವೈ ಎಸ್‌

ಒಂದೋ
ಎರಡೋ
ಮೂರೋ
ಅಥವಾ ಅವರವರ ಸಾಮರ್ಥ್ಯದ
ಅನುಸಾರ ಇಲ್ಲವೇ
ಅದಕ್ಕಿಂತಲೂ
ಹೆಚ್ಚಿನವರೊಂದಿಗೆ
ಪ್ರೀತಿಯ ಹೆಸರನ್ನು
ಬಳಸಿ ಎಲ್ಲವನ್ನೂ
ಮುಗಿಸಿಕೊಂಡು ಅಂಥ
ಸಂಬಂಧಗಳಿಗೆ
ತರ್ಪಣವ ಅದೆಷ್ಟು
ಸುಲಭವಾಗಿ ಬಿಟ್ಟುಬಿಡುತ್ತೀರಿ?

ಮರ್ಯಾದಸ್ಥರ ಮುಖವಾಡವ
ಧರಿಸಿ
ಬೇರೊಂದು ಮದುವೆಯಾಗುವಾಗ
ಬಲವಂತದ
ನಗೆಯಾಡುತ್ತ ಎಲ್ಲರೊಂದಿಗೂ
ಫೋಟೋ ಕ್ಲಿಕ್ಕಿಸಿಕೊಳ್ಳಲು
ಹೆಣಗುವ
ನಿಮ್ಮ ಬಗ್ಗೆ ನನಗೆ
ಎಂದಿಗೂ ಕನಿಕರ..

ಕಾಮದ ವಿಷಯದಲ್ಲಿ
ಎಲ್ಲವನ್ನು
ಬಿಚ್ಚಿಕೊಂಡೇ ಧಾವಂತದಲ್ಲಿ
ಕೆಲಸ ಮುಗಿಸಿಕೊಳ್ಳುವ ನೀವು
ಮದುವೆಯ ವಿಚಾರ ಬಂದಾಗ ಮಾತ್ರ
ಜಾತಿ-ಧರ್ಮ- ಅರ್ಥವಿಲ್ಲದ
ಮತ್ತೊಂದನ್ನೋ ಹುಡುಕುತ್ತೀರ,
ಪ್ರೀತಿಸಿದ ಹಳೆಯ ಸಂಬಂಧಗಳಿಗೂ
ಗೋರಿಯ ಕಟ್ಟಿ
ತೋರಿಸಿದ ಸಂಬಂಧದ
ಕೊರಳಿಗೆ ಹಗ್ಗವ ಬಿಗಿಯುತ್ತೀರ
ಅಥವಾ ತಲೆಬಗ್ಗಿಸಿ
ಬಿಗಿಸಿಕೊಳ್ಳುತ್ತೀರ.

ನಿಮ್ಮಗಳ
ಸೋಗಲಾಡಿತನ,
ಪಲಾಯನವಾದಗಳಿಗೆ
ಗುಡ್ ಬೈ ಹೇಳಿದ
ನಾವು ನಮ್ಮದೇ ತತ್ವ ಸಿದ್ದಾಂತಗಳಿಗೆ
ಕಟ್ಟುಬಿದ್ದು
ಪ್ರೀತಿಸುತ್ತಿದ್ದೇವೆಯೋ
ಪ್ರೀತಿಸುತ್ತಿರುವವರನ್ನೇ
ಮದುವೆಯಾಗಲು ಹೊರಟರೆ
ನಾವು ಖಳನಾಯಕರಾಗುತ್ತೇವೆ,
ನಿಮ್ಮ ಗಡಿಗಳಿಂದ
ಗಡೀಪಾರುಗುತ್ತೇವೆ‌.
ಅಂದು ನೂರೆಂಟು ಆಟಗಳನ್ನು
ಆಡಿದ ನೀವೇ
ಇಂದು ನೂರೆಂಟು ಕಥೆಗಳನ್ನು
ನಮ್ಮ ಸುತ್ತ ಹೆಣೆದು
ನಮ್ಮನ್ನು ಹೆಣವಾಗಿಸುತ್ತೀರ..!

ಅದಕ್ಕೇ
ವ್ಯಭಿಚಾರಿಗಳಿಗೆ
ಯಾವಾಗಲೂ
ಪ್ರೀತಿ ದಕ್ಕುವುದಿಲ್ಲ..!!!!

‍ಲೇಖಕರು Avadhi

27 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading