ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಷಯ ಕೇಳಿ ಬಹಳ ಬೇಜಾರಾಯ್ತು ನಂಗೆ..

ilpashree

ಶಿಲ್ಪಶ್ರೀ ಕಲ್ಲಿಗನೂರು 

ಇವತ್ತಿನ ಕಾರ್ಯಕ್ರಮದಲ್ಲಿ ( ಪುಂಡಲೀಕ ಕಲ್ಲಿಗನೂರ ಅವರ ಕೃತಿ ಬಿಡುಗಡೆ) ಡಾ.ಗೊ.ರು.ಚನ್ನಬಸಪ್ಪ ಅವರು ಮಾತನಾಡಿದರು.

ಮಾತನಾಡಿ ಹೋಗಿ ಕೂತವರು ಮತ್ತೆ ಬಂದು ನಿರೂಪಕನನ್ನು ತಡೆದು ಒಂದು ವಿಷಯವನ್ನ ಹಂಚಿಕೊಂಡ್ರು…

gorucha“ಬಹುಶಃ ನಿರೂಪಕರು ನನ್ನನ್ನ ಹೊಗಳುತ್ತಿರಬಹುದು. ದೂರದಿಂದ ನನಗೆ ಕಿವಿ ಕೇಳೊಲ್ಲ. ಪಕ್ಕದಲ್ಲಿ ಕೂತು ಮಾತನಾಡಿದರೆ ಮಾತ್ರ ಗೊತ್ತಾಗುತ್ತದೆ. 89 ವರ್ಷ ನನಗೆ..”

“ನಟ ದರ್ಶನ್ ಅವರ ಮನೆ ನನ್ನ  ಮನೆಯಿಂದ ಮೂರನೇ ಮನೆ. ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನ ನನ್ನ ಮನೆಯವರೆಗೂ ತುಂಬಿದ್ರು. ನಮ್ಮ ಮನೆಯ ಕಾಂಪೌಂಡ್, ಗಿಡಗಳನ್ನೆಲ್ಲ ಅವರು ಹಾಳುಮಾಡಿದ್ರು. ಎಲ್ಲಕ್ಕಿಂತ ದೊಡ್ಡ ಹಾನಿ ಏನಂದ್ರೆ ಒಂದು ದೊಡ್ಡ ಪಟಾಕಿಯನ್ನ ಸಿಡಿಸಿದ್ರು. ಅವತ್ತಿನಿಂದ ನನಗೆ ಕಿವಿ ಸರಿಯಾಗಿ ಕೇಳಿಸ್ತಿಲ್ಲ.”

“ನಾನು ಜೋರಾಗಿ ಮಾತಾಡಿದ್ರೆ ಕ್ಷಮಿಸಿ, ಅದಕ್ಕೆ ಕಾರಣ ಇದು” ಎಂದು ಮಗುವಿನಂತೆ ಹೇಳಿ ಹೋಗಿ ಕೂತ್ರು.

89 ವರ್ಷ ಅವರಿಗೆ. ಇವತ್ತಿಗೂ ಅವರು ಅದೇ ಸರಳತೆಯಿಂದ ಬದುಕುತ್ತಿದ್ದಾರೆ. ಅವರ ಜ್ಞಾನ ಎಂಥದ್ದು.. ಎಂಥ ದೊಡ್ಡ ವ್ಯಕ್ತಿ ಅವರು. ಅವರಿಗೆ ಈ ರೀತಿ ತೊಂದರೆಯನ್ನ ಮಾಡಿದೀರಲ್ಲ ಸರಿನಾ?

ವಿಷಯವನ್ನು ಕೇಳಿ ಬಹಳ ಬೇಜಾರಾಯ್ತು ನಂಗೆ. ಹಂಚಿಕೊಳ್ಳಬೇಕೆನ್ನಿಸಿ ಹಂಚಿಕೊಂಡೆ.

‍ಲೇಖಕರು Admin

19 September, 2016

1 Comment

  1. S.p.vijaya Lakshmi

    Nanna kannalli neeru jinugithu…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading