ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದ್ಯಾ ಭರತನಹಳ್ಳಿ ಕಾಡುವ ಕವಿತೆ: ಈ ಹಾಡು ಬೇರೆಯದು..

ಒಲವು ತೇಲುವ ಒಡಲು

ವಿದ್ಯಾ ಭರತನಹಳ್ಳಿ

ಪ್ರಥಮ ಪ್ರಹರದ ಬೈರಾಗಿ
ಸಂಧಿಪ್ರಕಾಶದ  ಶಾಮ್ ಕಲ್ಯಾಣ್
ನಡುರಾತ್ರಿಯ ಅಭೋಗಿ
ಪ್ರೇಮಾಲಾಪ ವೈಭೋಗಕ್ಕೆ
ಜಾವಗಳ ಲೆಕ್ಕಬೇಡ.

ಈ ಹಾಡು ಬೇರೆಯದು
ಬೇಗುದಿಯ ರಾಗವಿದು
ಅವಳ ಎದೆಗೂಡಿನ ಜಾಡು
ನೊಂದ ಕಂಗಳ ಪಾಡು
ಕಾಣಿಸದಂತೆ ಎದೆಗೀರುಗಳ
ಮುಚ್ಚಲಾಗದು ನನಗೆ
ಸೆರಗು ಜಾರದಂತೆ
ಆ ಕೈಗಳಿಗಷ್ಟು ಶಕ್ತಿ ತುಂಬಬೇಕು

ಅವಿತಿಟ್ಟು ಸತ್ಯಗಳ
ನಾಳೆಗಾಗಿ ಹೊರಟವಳು
ಅವಳ ಅಳುವಿನ ಶಬ್ದ
ಗಾಳಿಯಲ್ಲಿ ಲೀನವಾಗುವುದು
ದರಕಾರಿಲ್ಲದ  ದಾರಿಯಲ್ಲಿ
ಅವಳು ಉಸಿರು ಚೆಲ್ಲುವಳು.

ನಮ್ಮದಲ್ಲದ ಬದುಕ
ಹಾಡಬಾರದು ನಾವು
ಸ್ವರಗಳಿಗೆ ಕೃತಕತೆಯ ಲೇಪ

ಭಾವ ಬರಡಾಗಿ ಕಿವಿ ಕಿವುಡಾಗಿ
ಅಶನ ವ್ಯಸನಗಳಲಿ ಮುಳುಗಿ
ಹಸಿದ ಹೊಟ್ಟೆ,ಬಿದ್ದ ರೊಟ್ಟಿ
ಎಲ್ಲವಕ್ಕೂ ತ್ಚುತ್ಚು ಅನ್ನುತ್ತ
ಕತ್ತರಿಸಿ ವಿಮರ್ಶಿಸುತ್ತ
ಯಾವುಯಾವುದೋ ವಾಸನೆಗಳನ್ನು ಹುಡುಕುತ್ತ
ತೀರ್ಪು ನೀಡುವವರು
ಕೊಂಕಿದ ತುಟಿಗಳ ಅವರು
ಕೇಳಲಿ ಬಿಡು

ಬರಿ ಗೀತೆಯಲ್ಲ
ಒಲವು ತೇಲುತ್ತಿದೆ ಒಡಲಲ್ಲಿ

‍ಲೇಖಕರು avadhi

20 July, 2020

9 Comments

  1. govindhegdedr

    ಇಷ್ಟವಾಯಿತು. ಅಭಿನಂದನೆಗಳು

    • Vidya Bharatanahalli

      Thank you Govind

  2. Anant Vaidya

    ತುಂಬಾ ಚೆನ್ನಾಗಿದೆ.

  3. gpbasavaraju

    ಈ ವಿದ್ಯಾ ಭರತನಹಳ್ಳಿ ಮತ್ತು ಪ್ರಜ್ಞಾ ಮತ್ತೀಹಳ್ಳಿ ಒಂದೇ ಎಂದು ತಪ್ಪಾಗಿ ಭಾವಿಸಿ, ಎರಡೂ ಪದ್ಯಗಳನ್ನು ಒಟ್ಟಾಗಿಯೇ ಓದಿದೆ. ಎಷ್ಟು ಚೆನ್ನಾಗಿವೆ ಈ ಎರಡೂ ಪದ್ಯಗಳು! ಮತ್ತೀಹಳ್ಳಿ, ಭರತನಹಳ್ಳಿ- ಯಾವ ಹಳ್ಳಿಯಾದರೇನು, ಕಾವ್ಯಕ್ಕೆ ಒಂದು ಒಳ್ಳೆಯ ದನಿ ಇದ್ದರೆ ಸಾಕು, ಎದೆಯೊಳಕ್ಕೆ ಇಳಿಯಲು.
    ಇಬ್ಬರಿಗೂ ಅಭಿನಂದನೆಗಳು
    -ಬಸವರಾಜು, ಜಿಪಿ.

    • Vidya Bharatanahalli

      ಸರ್.ನಮಸ್ತೆ. ನೀವು ಕವಿತೆ ಓದಿದ್ದು ಇಷ್ಟ ಪಟ್ಟಿದ್ದು ಎರಡೂ ಖುಷಿ ನೀಡಿತು. ಧನ್ಯವಾದಗಳು. ನನ್ನ ಕವನ ಸಂಕಲನಕ್ಕೆ ಪ್ರಜಾವಾಣಿಯಲ್ಲಿ ತಾವು ವಿಮರ್ಶೆ ಬರೆದಿದ್ದಿರಿ.ಅದೂ ನೆನಪಾಯಿತು.

  4. Prajna Mattihalli

    very nice Vidya

  5. ಕೆ.ಬಿ.ವೀರಲಿಂಗನಗೌಡ್ರ.

    ಅಭಿನಂದನೆಗಳು

  6. T S SHRAVANA KUMARI

    ಚೆನ್ನಾಗಿದೆ. ಅಭಿನಂದನೆಗಳು

    • Vidya Bharatanahalli

      Thank you Sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading