ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದ್ಯಾ ಅನುವಾದಿಸಿದ ಗುಲ್ಜಾರ್ ಕವಿತೆಗಳು

ವಿದ್ಯಾ

1

ಸಂಬಂಧಗಳು ಬರೀ ಸಂಬಂಧಗಳಷ್ಟೇ
ಕೆಲವು ಒಂದು ಕ್ಷಣದ್ದು
ಕೆಲವು ಎರಡು ಕ್ಷಣಗಳದ್ದು..
 
ಕೆಲವು ಗರಿಗಳಿಗಿಂತ ಹಗುರ
ವರ್ಷಗಳಡಿಯಲ್ಲಿ ನಡೆಯುತ್ತ
ಭಾರವಾಗಿ-ತೂಕದ್ದಾಗಿಬಿಡುತ್ತವೆ
 
ಭಾರೀ ತೂಕದ ಮಂಜುಗಡ್ಡೆಗಳಂಥವು
ಹಗುರವಾಗಿಬಿಡುತ್ತವೆ
ವರ್ಷಗಳು ಕಳೆದಂತೆ
 
ಹೆಸರಿರುವ ಸಂಬಂಧಗಳು
ಹೆಸರಿಗಷ್ಟೇ ಇರುವ ಸಂಬಂಧಗಳು
ಸತ್ತ ಮೇಲೂ ಹೆಸರಿನ ಮೇಲೆ
ಬದುಕುಳಿವ ಸಂಬಂಧಗಳು..ಹೀಗೆ..
 
ಹೆಸರಿನಿಂದಷ್ಟೇ ಬದುಕಬೇಕಾಗುತ್ತದೆ..
ಸಂಬಂಧಗಳು ಬರೀ ಸಂಬಂಧಗಳಷ್ಟೆ..
ಮೂಲ-ಗುಲ್ಜಾರ್ 2
ಚೌಕದಿಂದ ಹೊರಟು,
ಮಂಡಿ, ಬಾಜಾರುಗಳಿಂದ ಹಾದು
ಕೆಂಪು ಗಲ್ಲಿಯಿಂದ ಸಾಗುತ್ತಿದೆ ಒಂದು ಕಾಗದದ ದೋಣಿ
 
ಮಳೆಯ ಅನಾಥ ನೀರಿನ ಮೇಲೆ ಕೂತು
ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
ಹೆದರಿ ಮೆಲ್ಲಗೆ-
“ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
ನನಗೂ ಇದೆಯಾ?”
 
ಒಂದು ಮುಗ್ಧ ಮಗು
ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!
ಮೂಲ-ಗುಲ್ಜಾರ್
ಅನುವಾದ-ವಿದ್ಯಾ

‍ಲೇಖಕರು G

25 May, 2015

5 Comments

  1. ಲಕ್ಷ್ಮೀಕಾಂತ ಇಟ್ನಾಳ

    anuvAdagalu tumba channagive vidya ji. beautifully done.

  2. ಅಕ್ಕಿಮಂಗಲ ಮಂಜುನಾಥ

    ಹೆಸರಿನಿಂದಷ್ಟೇ
    ಬದುಕ ಬೇಕಾಗುತ್ತದೆ..
    ಸಂಬಂಧಗಳು
    ಬರೀ ಸಂಬಂಧಗಳಷ್ಟೆ.
    ಅಕ್ಷರಶಃ ಸತ್ಯ.

  3. vidyashankar

    ಒಂದು ಮುಗ್ಧ ಮಗು
    ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
    ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ! Beautiful

  4. Ravivarma

    ಮಳೆಯ ಅನಾಥ ನೀರಿನ ಮೇಲೆ ಕೂತು
    ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
    ಹೆದರಿ ಮೆಲ್ಲಗೆ-
    “ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
    ನನಗೂ ಇದೆಯಾ?”
    ಒಂದು ಮುಗ್ಧ ಮಗು
    ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
    ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!..ultimate…

  5. Anonymous

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading