ಡೈಲಿ ಬುಕ್ : ತಿರುಪತಿ ಭಂಗಿ ಬರೆದ 'ಜಾತಿಕುಲುಮ್ಯಾಗ ಅರಳಿದ ಪ್ರೀತಿ’

_ ಪ್ರೊ ಗುರುರಾಜ ಮೊರಬ

ಕೆರೂರವಾಸುದೇವಾಚಾರ್ಯರಂತಹ ಶ್ರೇಷ್ಟಕಥೆಗಾರರು ಬಾಗಲಕೋಟೆಯ ನೆಲದಲ್ಲಿ ಬೇರುರಿದ್ದು ಈ ನೆಲದ ವಿಶೇಷ. ಈ ಜಿಲ್ಲೆ ಸಾಹಿತ್ತಿಕವಾಗಿ ಒಂದಿಲ್ಲೊಂದು ಕೃಷಿ ಮಾಡುತ್ತಲೆಇದೆ. ಈಗಲೂ ಬಾಳಾಸಾಹೇಬ ಲೋಕಾಪೂರ, ಅಬ್ಬಾಸ ಮೇಲಿನಮನಿ,ಯಂತ ಸೃಜನಶೀಲಕಥೆಗಾರರದಂಡವೇಎದೆ. ಹಲವು ತರಹದ ಸಾಹಿತ್ಯ ಸುಗ್ಗಿಯಲ್ಲಿತೊಡಗಿ ಹುಲುಸಾದ ಬೆಳೆ ತಗೆಯುತ್ತಲೇಇರುವುದುಒಂದು ಸಂತಸದ ವಿಚಾರ. ಈ ನೆಲದಲ್ಲಿಯೇತಿರುಪತಿ ಭಂಗಿಅಂತಯುವಕಥೆಗಾರರೂಕೂಡಾಒಬ್ಬರು. ಯುವಕರಾದಇವರಲ್ಲಿಓದುವ ಬರೆಯುವಉತ್ಸಾಹ ಸಾಕಷ್ಟಿದೆ.’ಎಳೆಗರು ಎತ್ತಾಗಬಲ್ಲದು’ಅನ್ನುವುದಕ್ಕೆಅವರ ಬರವಣಿಗೆಕೈಗನ್ನಡಿ.
ತಿರುಪತಿ ಭಂಗಿಅವರು ಜ್ಯಾತಿಕುಲುಮ್ಯಾಗ ಅರಳಿದ ಪ್ರೀತಿ ಕಥಾ ಸಂಕಲನವನ್ನು ಬರೆದುಕನ್ನಡ ಸಾಹಿತ್ಯದಲ್ಲಿ ಕತೆಗಳ ಕೊರತೆಯನ್ನು ನಿಗಿಸಿದ್ದಾರೆ. ಓದುಗರದೃಷ್ಟಿಯಿಂದ ನೋಡಿದಾಗಆತ್ಮಕತೆ, ಪ್ರವಾಸಕಥನ, ಕಾವ್ಯಗಳು ಹೆಚ್ಚಾಗಿ ಬರುವ ಈ ಅವಧಿಯಲ್ಲಿಓದುಗರಿಗೆಕಥಾರುಚಿಯುಇಲ್ಲದಾಗಿತ್ತು. ಒಂದೇರೀತಿಯ ಸಾಹಿತ್ಯದಆಸ್ವಾದನೆಯಿಂದ ಸಹೃದಯರು ಬೇಸರಗೊಂಡಿದ್ದನುಅರಿತಕೊಂಡತಿರುಪತಿಯವರುಓದುಗರನ್ನುಕಥಾಸಾಹಿತ್ಯದಕಡೆಗೆ ಒಲವು ಮೂಡಿಸಿದ್ದಾರೆ. ಕವನಗಳೆ ಹೆಚ್ಚಾಗಿ ರಚನೆಯಾಗುವ ಈ ಅವದಿಯಲ್ಲಿಕಥೆಗಾರರುಕಡಿಮೆ.ಈ ಕಥಾ ಸಂಕಲನದ ಮೂಲಕ ಕಥೆಓದುಗರಿಗೆಕಥಾ ನೈವದ್ಯದಎಡೆ ಅಪರ್ಿಸಿದ್ದಾರೆ.

ಜನರುಕೂಡಾ ಪ್ರಾದೇಶಿಕ ಸೊಗಡನ್ನುಆಯಾ ಭಾಗದ ಭಾಷಾವೈವಿದ್ಯತೆಯನ್ನು ತಿಳಿಯುವ ವಿಚಾರದಲ್ಲಿರುವಾಗತಮ್ಮ ಪರಿಸರದ ವಿಶಿಷ್ಟ ಸೊಗಡಿನ ಮೂಲಕ ಕಥೆಕಟ್ಟುವಅವರಕಲೆಯುಉತ್ತಮವಾಗಿದೆ. ಕವಿ ಹೃದಯದಓದುಗರಮನಗೆಲ್ಲಲು ಈಕಥಾ ಸಂಕಲನವು ಸೂಕ್ತವಾಗಿದೆ. ‘ಚರಮಗೀತೆ’ ಎಂಬ ಕಥೆಯಲ್ಲಿಕಥೆಗಾರತನ್ನಕಥನ ಶೈಲಿಯಿಂದಲೇಕಥೆ ನಾಯಕ ಅಮಿನ ತಂದೆತಾಯಿಯನ್ನು ಕಳೆದುಕೊಂಡ ಉತ್ಸವದಲ್ಲಿ ಹಾಡುವದರ ಮೂಲಕ ಅವನ ಬದುಕಿನಚಿತ್ರಣ ಬದಲಾಗುತ್ತದೆ. ಮನರಂಜನೆಕಾರ್ಯಕ್ರಮಕೊಡುವುದು ಅವನ ಕೆಲಸವಾಗಿರುತ್ತದೆ.ಅವನು ಹಾಡುವ ‘ಪವಮಾನ’ ಬಹಳ ಪ್ರಸಿದ್ದವಾಗಿರುತ್ತದೆ.ಆದರೆ ಊರೊಳಗಿನ ರಾಜಕೀಯ ಸ್ಥಿತಿಯಿಂದ ಅವನ ಏಳಿಗೆ ಸಹಿಸದೆಕಲ್ಲುಏಟು ಬಿದ್ದು ಅವನ ಬದುಕಿನಲ್ಲಿ ಹಾಡಲು ಹೋದ ಈ ಕಥೆಹಳ್ಳಿಯ ರಾಜಕೀಯದಲ್ಲಿ ವ್ಯಕ್ತಿಗಳ ಏಳ್ಗೆ ಸಹಿಸುವುದಿಲ್ಲ ಎನ್ನುವದನ್ನು ಬಿಂಬಿಸುತ್ತದೆ.
‘ಮಡಿವಂತ ಮಾಸ್ತರ’ಕತೆಯು ಶಿಕ್ಷಕನು ಶಾಲೆಯಲ್ಲಿ ಮಾಡುವ ಭೇದಭಾವ ಹನುಮನ ಮೇಲೆ ನಡೆಯುತ್ತದೆ.ಗುರುಗಳಿಂದ ಅವಮಾನಕೊಳಗಾಗಿದ್ದ.ಅವನಲ್ಲಿ ಹಟ ಸಾಧಿಸಬೇಕುಎನ್ನುವಛಲಮೂಡುತ್ತದೆ.ಗುರುಗಳ ಬುದ್ದಿಗೆ ಬ್ಯಾಸತ್ತುಓದಲು ಶರುಮಾಡುತ್ತಾನೆ. ಕಥೆಯ ನಾಯಕನಾದ ಹನಮ ಮಾಸ್ತರನಿಗೆತಾನುಜಾತಿಯಿಂದ ಕೀಳಾದರು ಕೂಡಾನನ್ನಜಾಣತನತೋರಿಸಬೇಕುಎನ್ನವ ಹಂಬಲ ಕೀರುಪರಿಕ್ಷೇಯಲ್ಲಿ ಫೇಲ ಆದ ಸಂಕಟಅವನನ್ನುಕಾಡುತ್ತದೆ.ಹನುಮ ಇಡೀ ಸೆಂಟರ್ಗೆ ಪ್ರಥಮನಾಗಿ ಬಂದು ಮಾಸ್ತರಿಗೆತನ್ನಜಾಣತನವನ್ನುತೋರಿಸುತ್ತಾನೆ. ಹೀಗೆ ಈಕಥೆ ಹಳ್ಳಿಯಲ್ಲಿ ಮೇಲು ಕೀಳು ಭಾವನೆಇನ್ನುಇದೆಎನ್ನಲು ಸಾಕ್ಷಿಯಾಗಿದೆ.
‘ಪಾರ್ಕನಲ್ಲಿಕಂಡಮುಖ’ಕಥೆಯು ಈಗಿನ ಮಕ್ಕಳು ಹೈಸ್ಕೂಲ್ಕಲಿಯುವಾಗಪ್ರಣಯದಸುಳಿಯಲ್ಲಿ ಸಿಕ್ಕು ನರಳುತಿದ್ದಾರೆ. ಶಾಲೆ ಬಿಟ್ಟು ಪಾಕರ್ಿನಲ್ಲಿ ಸಾರುವಚಿತ್ರಣವಿದೆ ಅನೇಕ ಜನರು ಈಗ ಲೈಂಗಿಕ ದೌರ್ಜನ್ಯ ಒಳಗಾಗುವ ಪೋಲಿಸರಿಗೆಶರಣಾಗುವ ಸಮಕಾಲಿನ ಚಿತ್ರಣವನ್ನು ನೆನಪಿಗೆ ತರುತ್ತದೆ.
‘ಗಾಳಿಶಕಾ’ ಕಥೆಯು ನಮ್ಮಜನ ಮೌಡ್ಯತೆಗೆ ಹಿಡಿದಕನ್ನಡಿ. ಅನೇಕ ಜನ ವಿಚಾರ ವಾದಿಗಳಾಗಿ ಎಂದು ನಮ್ಮಜನಇನ್ನುಅಂಧಕಾರದಲ್ಲಿದ್ದಾರೆ. ಕಥಾ ನಾಯಕಿದೃವಿ ಒಂದು ದಿನ ಹುಣಸಿಮರದ ಕಡೆಗೆ ಹೋದಾಗ ಅವಳಿಗೆ ‘ದೆವ್ವ ಬಡಿತಿ’ಎಂದು ಸುದ್ದಿ ಹರಡುತ್ತದೆ.ತಂದೆತಾಯಿಕೂಡಾ ಅವಳನ್ನು ನೋಡುವದೃಷ್ಠಿ ಬೇರೆಯಾಗುತ್ತದೆ. ಊರತುಂಬ ಅವಳಿಗೆ ದೆವ್ವ ಬಡೆದಿದೆಎಂದು ಸುದ್ದಿಯಾಗುತ್ತದೆ. ಅವಳು ಹೆದರಿಕೊಂಡಿದ್ದಾಳೆ ಎಂದುದೂರು ತಿಳಿಯುವದಿಲ್ಲ. ಕ್ಯಾತರ ಬಸ್ಯಾನ ಮೂಲಕ ದೆವ್ವ ಬಿಡಿಸುವರು. ಈಗಲೂ ಉತ್ತರಕನರ್ಾಟಕದ ಹಳ್ಳಿಯಾದ ‘ಅಚನೂರಿನಲ್ಲಿ’ದೆವ್ವ ಬಿಡಿಸುತ್ತಾರೆ.ದೃವಿಯನ್ನು ಮಂತ್ರದ ಸಿದ್ದ ಹೊಡೆಯುತ್ತಾನೆ ಹೀಗೆ ದೆವ್ವ ಹಿಡಿದವರು ಹಿಂಗೆನೆ ಒಳಗಾಗುತ್ತಾರೆ.ಆದ್ದರಿಂದ ಹಳ್ಳಿಯ ಜನರ ಮೌಢ್ಯಈ ಕಥೆಯ ಮೂಲಕ ಹೊರಟು ಹೋಗಲಿ ಎನ್ನುವದುಕಥೆಗಾರನಆಶಯವಾಗಿದೆ.
‘ಮೋಸಲೀಲೆ’ ಮೆಲಸ್ತರದಚೇರಮನ್ ಪಾಟೀಲ ನಿಂಗರಾಜ, ಕೆಳ ವರ್ಗದಜನತೆ ನನ್ನ ಮಾತನ್ನೇ ಕೇಳಬೇಕು ಎಂದು ಬಯಸಿದನು.ಹೀಗಿರುವಾಗಊರಲ್ಲಿಕುಲಕಣರ್ಿ ಕೆಳ ವರ್ಗದ ಸಿದ್ದನಿಗೆ ಸಹಾಯ ಮಾಡುವ ಕೆಲಸ ಮಾಡುತ್ತಾನೆ. ಅವನು ಚೆರಮನ್ ಆಗುವ ಆಶೆಯನ್ನು ವ್ಯಕ್ತ ಪಡಿಸುತ್ತಾನೆ. ಪಾಟೀಲ ನಿಂಗರಾಜು ಹೊಟ್ಯಾಗಬೆಂಕಿ ಸಿಡಿದ್ದಂಗ ಆಗಿ,ಕೊನೆಗೆ ಸಿದ್ದ ಬೀರ ನಿಂಗರಾಜನಕೈವಾಡದಿಂದ ನಿನರ್ಾಮವಾಗುವ ಮೇಲಸ್ತರದವರಕೈವಾಡವನ್ನುಎತ್ತಿತೋರಿಸುವಕಥೆಯಾಗಿದೆ.
‘ಸೋಲಿನ ಹೆಜ್ಜೆ’ ಕಥೆಯಲ್ಲಿ ಮುಖ್ಯ ಪಾತ್ರದಾರಿಕಲ್ಲಪ್ಪ ಇವನು ಗುರುಪಾದನ ಮಗ. ಇವನು ಶಾಲೆಯಲ್ಲಿ ಪೇಲಾಗಿದ್ದುಅಮ್ಮನಿಂದತಾತ್ಸರ್ಯಕ್ಕೆ ಒಳಗಾಗುತ್ತಾನೆ. ಎಲ್ಲರೂಇವನನ್ನು ಹಂತವರ ಹೋಟ್ಟೆಯಲ್ಲಿ ಹಿಂತಾವ ಹುಟ್ಟ ಬಾರದಅಂತಿದ್ದರು. ಇದನ್ನುತೆಲೆಯಲ್ಲಿಇಟ್ಟುಕೊಂಡಕಲ್ಲ್ಯಾ ಪತ್ರಿಕೆಯಲ್ಲಿ ಸೋಲಿನ ಕತೆ ಓದಿ ತೆರವು ಪಡೆದುಕೊಳ್ಳುತ್ತಾನೆ. ಮುಂದೆ ಅವನು ಸೋತವರ ಸಮಾವೇಷ ನೋಡಿ ಬದಲಾಗಿಕಿರಾಣಿಅಂಗಡಿ, ಮೊಬೈಲ್ಅಂಗಡಿಓಡಾಡಿ ಕೊನೆಗೆ ಪತ್ರಕರ್ತನಾಗುತ್ತಾನೆ. ಹೀಗೆ ಮನುಷ್ಯಯಾವುದೊಒಂದು ಕೆಲಸಕ್ಕೆ ಅಂಟಿಕೊಳ್ಳಬೇಕು.ಅವನು ಭೂಮಿಗೆ ಭಾರವಾಗಬಾರದುಎಂಬುವುದನ್ನು ತಿಳಿಸುತ್ತದೆ.
‘ಕೊರಗು’ಕಥೆಯಲ್ಲಿ ಮೊದಲುಜನರುಗೌಡರ ಮನೆಯಲ್ಲಿಜೀತಕ್ಕೆಇರುತ್ತಿದ್ದರು.ಈಗ ಕಾಲ ಬದಲಾದರೂ ಈ ಪದ್ದತಿಅಲ್ಲಿಲ್ಲಿಇದೆಅನ್ನುವುದಕ್ಕೆಕುರುಹು ಸಾಕಷ್ಟಿವೆ. ಈ ಕಥೆಯಲ್ಲಿ ಮಾರುತಿತಂದೆ ಕೆಳ ಜಾತಿಯವರುಯಾವಾಗಲು ಹಿಂಗ ಗೌಡ್ ಮನೆಯಲ್ಲಿಜೀತಮಾಡಬಾರದು.ಇದು ನನ್ನಿಂದಕೊನೆಯಾಗಬೇಕು.ನನ್ನ ಮಗ ಪಟ್ಟಣದಲ್ಲಿ ಸಾಲಿ ಕಲಿತ ನೌಕರಿ ಮಾಡುವಅಕ್ಷರದಅರಿವುಎದ್ದುಕಾಣುತ್ತದೆ.. ಅದರಂತೆ ಮಾರುತಿ ಕೆಲಸಮಾಡುತ್ತ 20 ಸಾವಿರ ಪಗಾರತರುವುದನ್ನು ನೋಡಿಜನ ಸಂತೋಷ ಪಡುತ್ತಾರೆ. ಈ ಕಥೆಯಲ್ಲಿ ಕೆಳವರ್ಗಗಳು ಯಾವಾಗಲುಇನ್ನೋಬ್ಬರ ಕೈಯಾಳಾಗಿ ಜೀತದುಡಿಯದೆ ಪ್ಯಾಟ್ಯಾಗಕಲಿತುಜಾಣರಾಗಬೇಕೆಂಬ ಸಂದೇಶವನ್ನು ಈ ಕಥೆಹೊಂದಿದೆ. ಕೇರಿ ಹುಡುಗರು ಹಣವನ್ನುಗುಣಗಾನ ಮಾಡುತ್ತಾರೆ.ಹೀಗೆ ಕೆಳ ವರ್ಗದ ಮಂದಿ ಬದಲಾಗಬೇಕು.
‘ಜ್ಯಾತಿ ಕುಲಮ್ಯಾಗ ಅರಳಿದ ಪ್ರೀತಿ’ ಕಥೆಯುಕುರುಬರಜನಾಂಗಕ್ಕೆ ಸೇರಿದರೆಣಿಕದ್ದುಮುಚ್ಚಿರಫೀಕನ ಪ್ರೀತಿ ಮಾಡುವುದು ನೋಡಿ ಪಿಂಜಾರ ಪಾತಿಮಾಳನ್ನು ಕುರುಬರ ಭೀಮ್ಸಾ ಪ್ರೀತಿಸುವುದು. ಈ ಸ್ನೇಹದ್ವೇಷವಾಗಿಕೊನೆಯಲ್ಲಿ ಭೀಮ ಫಾತಿಮಾಒಂದಾಗುವ ಈ ಕತೆಯು ಸಮಾಜದಲ್ಲಿ ಹೆಚ್ಚಾಗಿರುವಜ್ಯಾತಿ ವ್ಯವಸ್ತೆಯನ್ನು ಹೋಗಲಾಡಿಸುವ ಸಂದೇಶವನ್ನು ನೀಡುತ್ತದೆ.
‘ಬಾರದ ಮಳೆ ಬಂದು’ಕಥೆಯುರೈತರು ಮಳೆ ಬರದೆ ಕಂಗಾಲಾಗಿ ದನಕರುಗಳು ಒದ್ದಾಡುವ ಮಳೆ ಬಾರದೆಜನರು ಸರಕಾರದ ಸಹಾಯಕೈ ಚಾಚುವ ಊರದೇವರಿಗೆ ಮೋರೆ ಹೋಗುವ ಚಿತ್ರಣ, ಊರಗೌಡದೇವಪ್ಪರೈತ ಸಂಘದಹೋರಾಟಕ್ಕೆ ನಿಲ್ಲುವುದು,ಕೇರಿಯಜನ ಮುದ್ದಪ್ಪನ ನೇತೃತ್ವದಲ್ಲಿ ಮುಂದಾಗುತ್ತಾರೆ. ಪ್ರಾಣ ಹಾನಿ ಮೊದಲಾದವು ನಡೆಯುವ ಈ ಕಥೆ ಹಳ್ಳಿಯ ರಾಜಕೀಯಒಂದುಚಿತ್ರಣವಿದೆ.
‘ಸಹನೆ’ಕಥೆಯು ಸಮಸ್ಯೆಯ ಸುಳಿಯಲ್ಲಿ ಸಿಕ್ಕ ರತ್ನಿಯ ತಳ ಮಳ ಆದರೂಅದನ್ನು ಸಹಸಿಕೊಂಡಿರುವ ಅವಳ ಗಂಡಮತ್ತೊಬ್ಬಳನ್ನು ಇಷ್ಟ ಪಟ್ಟರು ಅವಳ ತಾಳ್ಮೆಯ ಗುಣವನ್ನು ನಾವು ಮೆಚ್ಚಿಕೊಳ್ಳಬೇಕು.
‘ಅಪ್ಪ’ ಕಥೆಯು ಮಕ್ಕಳಿಗೆ ತಂದೆ ತಾಯಿಗಳ ಪ್ರೀತಿ ವಾತ್ಸಲ್ಯದಅವಶ್ಯಕತೆಯನ್ನು ಮತ್ತು ಮಲತಾಯಿ ಮತ್ಸರವನ್ನು ತಿಳಿಸುತ್ತದೆ.ತಂದೆ ತಾಯಿಗಳಲ್ಲಿ ಮಕ್ಕಳ ಸ್ಥಿತಿ ಅದನ್ನು ಸಹಿಸಿಕೊಂಡು ನಾಯಕ ಬದುಕಿನ ಬವಣೆಯನ್ನು ವಿವರಿಸುವ ವಿಶಿಷ್ಟ ಕಥೆಯಾಗಿದೆ.
ಉತ್ತರಕರ್ನಾಟಕದ ಭಾಷಾ ಸೊಗಡಿನಲ್ಲಿತಿರುಪತಿ ಭಂಗಿಯವರುತುಂಬಾ ಸೊಗಸಾಗಿ ಕಥೆ ಹೆಣೆದಿರುವುದುಓದುಗ ದೊರೆಗಳಿಗೆ ಸಂತಸತರುವುದು. ಹೀಗೆ ಅವರಿಂದ ಅನೇಕಾನೇಕ ಕಥೆಗಳು ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗಲಿ, ಕಥೆಓದುಗರು ದಿನೆದಿನೆ ಹೆಚ್ಚಾಗಲಿ ಎಂಬುವುದು ನನ್ನಆಶಯ.
 

‍ಲೇಖಕರು G

May 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: