ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಹಾಲಾಡಿ ಕವಿತೆ- ಎಲ್ಲುಂಟು…

ವಿಜಯಶ್ರೀ ಹಾಲಾಡಿ

ಬೆಲ್ಲ ಬೆಲ್ಲ ಎಲ್ಲುಂಟು
ಕಬ್ಬಿನ ಗದ್ದೆಯಲ್ಲುಂಟು
ಕಬ್ಬಿನ ಗದ್ದೆ ಎಲ್ಲುಂಟು
ಹೊಳೆಯ ದಡದಲ್ಲುಂಟು

ಹೊಳೆ ಹೊಳೆ ಎಲ್ಲುಂಟು
ದಟ್ಟ ಕಾಡಿನಲುಂಟು
ದಟ್ಟ ಕಾಡು ಎಲ್ಲುಂಟು
ಬಾನಿನ ಮಳೆಯಲ್ಲುಂಟು

ಮಳೆ ಮಳೆ ಎಲ್ಲುಂಟು
ಕಪ್ಪು ಮೋಡದಲುಂಟು
ಕಪ್ಪು ಮೋಡ ಎಲ್ಲುಂಟು
ಕಡಲಿನ ಒಡಲಲ್ಲುಂಟು

ಕಡಲು ಕಡಲು ಎಲ್ಲುಂಟು
ಭೂಮಿಯ ಅಂಚಿನಲುಂಟು
ಭೂಮಿಯ ಅಂಚು ಎಲ್ಲುಂಟು
ಹಸಿರು ಹುಲ್ಲಿನಲುಂಟು

ಹುಲ್ಲು ಹುಲ್ಲು ಎಲ್ಲುಂಟು
ಬೀಜದ ಮರೆಯಲ್ಲುಂಟು
ಬೀಜ ಬೀಜ ಎಲ್ಲುಂಟು
ಮರದ ತಲೆಯಲ್ಲುಂಟು
ಮರದಾ ತಲೆಯಲ್ಲುಂಟು!

‍ಲೇಖಕರು Admin

9 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading