ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಯಸ್ಸು ಹೇಳದ ಹುಡುಗಿಯ ಕೈಗೆ ಗೋರಂಟಿ..

ಮಹಾಬಲೇಶ್ವರ ಕಲ್ಕಣಿ

ಪತಂಗಗಳು ಹಾರಿಬಂದು

ಕಿವಿಯಲ್ಲಿ ಗುಟ್ಟೊಂದು

ಹೇಳುತ್ತಿರುವಂತೆ ಭಾಸವಾಗುತ್ತಿತ್ತು

ನಲ್ಲೆ ಹಾಕಿಕೊಂಡ

ಕಿವಿಯೋಲೆ

ಅಲುಗಾಡಿದಾಗಲೆಲ್ಲಾ!!

*********

sheಮಳೆಹನಿಗಾಗಿ ಕಾಯದಿರು ರೈತ

ಮಳೆ ಹನಿಗಳನ್ನೂ ಖರೀದಿ

ಮಾಡಿದ್ದಾರೆ ನಮ್ಮ

ರಾಜಕಾರಣಿಗಳು

ಬರಗಾಲದ ನಿಧಿಯಲ್ಲಿ

ನಿಮಗೊಂದು

ಪಾಲುಕೊಡುವುದಾಗಿ ನಂಬಿಸಿ

************

ನನಗೆ ಇವತ್ತು

ದೇವರು ಕಂಡ

ನಿಮಗೂ ತೋರಿಸುತ್ತೇನೆ

ಕತ್ತಲಲ್ಲಿ

ನೆರಳು

ಹುಡುಕಿಕೊಡಿ

*******

ನನ್ನವಳ ಬಗ್ಗೆ

ಬರೆಯಬೇಕೆಂದಾಗಲೆಲ್ಲಾ

ಅಕ್ಷರಗಳು

ಹರತಾಳ

ನಡೆಸುತ್ತವೆ

*******

ವಯಸ್ಸು ಹೇಳದ ಹುಡುಗಿಯ

ಕೈಗೆ ಗೋರಂಟಿ ಹಾಕುವಾಗ

ಕಂಡ ಚುನಾವಣಾ ಶಾಯಿ

ಹದಿನೆಂಟರ ಮೇಲ್ಪಟ್ಟು

ಎನ್ನುವುದನ್ನು ಖಾತ್ರಿ ಪಡಿಸಿದಾಗ

ಹುಚ್ಚು ಮನಸ್ಸಲ್ಲಿ

ಏನೆಲ್ಲಾ  ಆಲೋಚನೆಗಳು

*******

ನಿನ್ನ ಕಣ್ಣ ಭಾಷೆ

ಓದಿ ಮುಗಿಸಲಾಗದ ಗ್ರಂಥ

ಅರ್ಥ ಮಾಡಿಕೊಳ್ಳಲು

ತುಸು ಕಷ್ಟ

ಆದರೂ ಪರೀಕ್ಷೆ ತೆಗೆದುಕೊಂಡಿದ್ದೇನೆ

ಪ್ರಶ್ನೆ ಪತ್ರಿಕೆ

ಲೀಕ್ ಆಗಬಹುದೆಂಬ ಹುಚ್ಚು

ಧೈರ್ಯದಲ್ಲಿ

ಪ್ರೀತಿಯಿಂದ

 

‍ಲೇಖಕರು Admin

23 June, 2016

9 Comments

  1. Geervani

    Chennagide. Male haniyannu kharidhi madiddare. Nice .

  2. praveena

    chanda ide.

  3. Sangeeta Kalmane

    ವಯಸ್ಸು ಹೇಳದ………ಚುನಾವಣಾ ಶಾಯಿ! ಸೂಪರ್☺

  4. Shwetha

    Nice

  5. Anonymous

    Dear Mahabali, super

  6. vijay gangani

    Super kalkani avre.

  7. Lokesh Vgowda

    super

  8. Anonymous

    Super Boss.

  9. Shama, Nandibetta

    ಚುನಾವಣಾ ಶಾಯಿ ಕೂಡ ಕನಸುಗಳನ್ನ ಹುಟ್ಟು ಹಾಕಬಹುದು !!! ವಾಹ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading