ಮಾಲಾಶ್ರಿ ಬಳೆ, ಐಶ್ವರ್ಯ ಬಳೆ, ಮೋನಿಕಾ ಬಳೆ, ದೀಪಿಕಾ ಬಳೆ..

ಎಷ್ಟೊಂದು ಬಣ್ಣಗಳಿವೆಯಲ್ಲ ಇಲ್ಲಿ….

vini nayak

ವಿನಯಾ ನಾಯಕ್ 

ನಂಗೆ  ಬಳೆಗಳೆಂದ್ರೆ  ಇಷ್ಟ. ಗಾಜಿನ ಬಳೆಗಳು. ಚಿಕ್ಕಂದಿನಲ್ಲಿ ಅಮ್ಮ ಚಿಕ್ಕಮ್ಮರ ಕೈಯಲ್ಲಿ ಗಲಗಲನೆ ಸದ್ದು ಮಾಡುವ ಬಳೆಗಳ ಮೇಲೆ ತುಂಬ ಮೋಹವಿತ್ತು. ಮನೆ ಮನೆಗೆ ಬಳೆ ಮಾರಲು ಬರುತ್ತಿದ್ದ ಬಳೆಗಾರರನ್ನ ಕಂಡರೆ ಖುಷಿ. ಗೋಲಕ್ಕೆ ಚೆಂಡು ಹೂವಿನ ತರ ಬಳೆಗಳನ್ನೆಲ್ಲಾ ಜೋಡಿಸಿ ಕುತ್ತಿಗೆ, ಕೈ ತುಂಬ ಬಳೆಗಳ ಸರ ಹಾಕೊಂಡ್ ಬ್ಯಾಲೆನ್ಸ್ ಮಾಡ್ತ ಬರ್ತಿದ್ದ ಅವರನ್ನ ನೋಡಿದ್ರೆ ಅಚ್ಚರಿ ಎನಿಸೋದು.

ಸೆಕೆಂಡ್ ಸ್ಟಾಂಡರ್ಡ್ ಇದ್ದಾಗೊಮ್ಮೆ ಹಠ ಮಾಡಿ ಗಾಜಿನ ಬಳೆ ಹಾಕಿಸ್ಕೊಂಡೆ. ಬರೋಬ್ಬರಿ ಎರಡೆರಡು ಡಜನ್. ಕಲರ್ ಕಲರ್ ಆಗಿದ್ದ ಗಾಜಿನ ಬಳೆ ಮೇಲೆ ಪೂರ್ತಿ ಮಿಂಚುವ ಜರಿಯಿತ್ತು. ಬಿಸಿಲಿಗೆ ಹೋಗಿ ಅದು ಇನ್ನಷ್ಟು ಮಿoಚೊದನ್ನ ನೋಡ್ತಾ ಖುಷಿ ಪಟ್ಟಿದ್ದೆ. ಕಂಡ ಕಂಡವರಿಗೆಲ್ಲ ಕೈ ತೋರಿಸಿ ಬೀಗಿದ್ದೂ ಆಗಿತ್ತು. ಆಮೇಲಾಗಿದ್ದೇನು!

bangle storeಅಮ್ಮ ಹೇಳಿದಂತೆ ಆಗಿತ್ತು. ಗೆಳೆಯರೊಡನೆ ಹಾರುತ್ತ ಕುಣಿಯುತ್ತ ಆಟ ಆಡುವಾಗ ಗಾಜಿನ ಬಳೆಗಳೆಲ್ಲ ಒಡೆದುಬಿಟ್ಟವು. ಸಾಲದಕ್ಕೆ ಒಂದೆರಡು ಗಾಜಿನ ಚೂರುಗಳು ಕೈಗೆ ಸಿಕ್ಕಿ ರಕ್ತ ಬೇರೆ ಬಂತು. ಬಳೆ ಒಡೀತು ಅನ್ನೋ ನೋವಿಗೆ ದೊಡ್ಡ ದನಿಯಲ್ಲಿ ಅತ್ತು ಒಂದೀಡಿ ದಿನ ಊಟವನ್ನೇ ಮಾಡಲಿಲ್ಲ. ಆವತ್ತೇ ಕೊನೆ. ಆಮೇಲೆ ನಂಗೆ ಮತ್ಯಾರು ಮನೇಲಿ ಗಾಜಿನ ಬಳೇನೆ ಕೊಡಿಸಲಿಲ್ಲ. ಇವತ್ತಿಗೂ ಗಾಜಿನ ಬಳೆಗಳಿಷ್ಟ. ಆದರೆ ಯಾಕೋ ಬಳೆ ಹಾಕುವ ಅಭ್ಯಾಸವೇ ಹೊರಟು ಹೋಗಿದೆ!

ಹೌದು.. ಅಂದಹಾಗೆ ಈ ಗಾಜಿನ ಬಳೆ ಹಿಡಿದುಕೊಂಡು ಹಳ್ಳಿಗಳಲ್ಲಿ ಮನೆ ಮನೆಗೆ ಬರ್ತಿದ್ದ ಬಳೆಗಾರರೆಲ್ಲ ಎಲ್ಲಿ ಮಾಯವಾದರು? ಈಗಲೂ ಪುಟ್ಟ ಊರಿನ ಜಾತ್ರೆಗಳಲ್ಲಿ  ಬಳೆ ಸ್ಟಾಲುಗಲು ಬರುತ್ತವೆ. ಗಾಜಿನ ಬಳೆಗಳಿವೆಯಾ ಅಂತ ಕಣ್ಣಲ್ಲೇ ತಡಕಾಡುತ್ತೇನೆ. ಅಬ್ಬಬ್ಬಾ! ಆ ಗಾಜಿನ ಬಳೆಗಳಿಗಿಡುವ ಹೆಸರು ಕೇಳಬೇಕು ನೀವು ಪುಟ್ಟ ಊರಿನ ಜಾತ್ರೆಗಳಲ್ಲಿ. ಮುಂಚೆಯೆಲ್ಲ ಮಾಲಾಶ್ರಿ ಬಳೆ, ಐಶ್ವರ್ಯ ಬಳೆ, ಮೋನಿಕಾ ಬಳೆಗಳಿರುತ್ತಿದ್ದವು. ಈಗ ದೀಪಿಕಾ ಪಡುಕೋಣೆ ಬಳೆ, ಲಕ್ಷ್ಮಿ ಬಾರಮ್ಮ ಬಳೆಗಳ ಹೆಸರು ಹೇಳುತ್ತಾರವರು.

ಹೈದರಾಬಾದಿನ ಚೂಡಿ ಬಜಾರ್ ಗೆ ಹೋದಾಗoತು ಬಿಟ್ಟು ಬರೋಕೆ ಮನಸಾಗಲಿಲ್ಲ. ಕೆಂಪು ಹಸಿರು ನೀಲಿ ಹಳದಿ ಗಾಜಿನ ಬಳೆಗಳು. ಕನ್ನಡಿ ಚೂರು ಅಂಟಿಸಿದ ಬಳೆ, ಪ್ಲೈನ್ ಬಳೆ, ಮುತ್ತು ಪೋಣಿಸಿದ ಬಳೆ, ಮಿಕ್ಸ್ ಮಿಕ್ಸ್ ತರದ ಬಳೆಗಳು.

ಆಹಾ! ಏನ್ ಚಂದ. ನಮ್ಮ ಬಳೆಗಳು, ನಮ್ಮ ದೇಶ.. ಎಷ್ಟೊಂದು ಬಣ್ಣಗಳಿವೆಯಲ್ಲ ಇಲ್ಲಿ..

‍ಲೇಖಕರು Admin

June 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: