ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕವೃಕ್ಷ ನಗುತ್ತಿದೆ

-ಕೆ.ಎನ್.ಲಾವಣ್ಯ ಪ್ರಭಾ

ವೃಕ್ಷೋ ರಕ್ಷತಿ ರಕ್ಷಿತಃ

ಬಾಲ್ಯದಲ್ಲಿ
ಮರದ ಕೊಂಬೆ ರೆಂಬೆಗೆ
ಹಾರ್ಡ್‌ವೇರ್ ಅಪ್ಪ ಕಟ್ಟಿಕೊಟ್ಟ
ಹಗ್ಗದುಯ್ಯಾಲೆಯಲ್ಲಿ
ಹೂ ಹಣ್ಣು ಎಲೆ ಚಿಗುರುಗಳ
ಜೊತೆಜೊತೆಗೇ
ಜೀಕುತ್ತಿತ್ತು ಮಗು, ಬೆಕ್ಕು , ಹಕ್ಕಿ
ಮರದ ಸ್ವಂತ ಅಂಗದಂತೆಯೇ
ಅಂದು

ಸಾಫ್ಟ್‌ವೇರ್ ಮಕ್ಕಳು
ಬೆಳೆದು ದೊಡ್ಡವರಾದೆವೆಂಬ
ಕಿರೀಟ ತಲೆ ಮೇಲೆ ಹೊತ್ತು ಕೂತ
ಒಡನೆಯೇ ….
ಗಿಡಮರ ಹೂವುಹಣ್ಣು
ಮಗು ಪ್ರಾಣಿ ಎಲ್ಲವೂ
ಸಹಸ್ರ ಹೋಳುಗಳನ್ನಾಗಿ
ಮಾಡಿಕೊಂಡ
ಮನುಷ್ಯ ಮಿದುಳು
ತನ್ನ ಪ್ರತಿ ಹೆಜ್ಜೆಗೂ ಗೆಲುವನ್ನು
ದಾಖಲಿಸುವಾಗೆಲ್ಲಾ
ಹೃದಯದ ಮಿಡಿತ ಸೋತು
ಹೈರಾಣಾಗಿ
ಮತ್ತದೇ ಬಾಲ್ಯದ ಕನಸಿಗೆ
ಉಯ್ಯಾಲೆ ಕಟ್ಟಿ
ಜೀಕುವ ಉಮೇದಿನಲ್ಲಿ
ಹುಸಿ ಸಂಭ್ರಮಕ್ಕೆ
ಅಣಿಯಾಗುವುದು ಕಂಡು
ಸೃಷ್ಟಿಗರ್ಭದಿಂದ ತನ್ನನ್ನು
ಪ್ರತ್ಯೇಕವಿರಿಸಿದ ಮನುಷ್ಯನ
ಸಣ್ಣತನಕ್ಕೆ
ಲೋಕವೃಕ್ಷ ತನ್ನೊಳಗೇ
ತಾನೇ ನಗುತ್ತಿದೆ
ಅನುಕಂಪದಲ್ಲಿ
ಇಂದು

‍ಲೇಖಕರು Admin

13 July, 2026

1 Comment

  1. ಸಂಗೀತ ರವಿರಾಜ್

    ಕವಿತೆ ತುಂಬಾ ಅರ್ಥಗರ್ಭಿತವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading